ಗುರುವಾರ , ಮೇ 26, 2022
23 °C

ಎಚ್‌ಕೆಇ ಸಂಸ್ಥೆ ಚುನಾವಣೆ:49 ಅಭ್ಯರ್ಥಿಗಳು ಕಣದಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಇಲ್ಲಿನ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇ)ಯ ಚುನಾವಣೆಗೆ ಒಟ್ಟು 49 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ 5, ಉಪಾಧ್ಯಕ್ಷ ಸ್ಥಾನಕ್ಕೆ 3 ಹಾಗೂ ಆಡಳಿತ ಮಂಡಳಿ ಸದಸ್ಯರಾಗಲು 41 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ಫೆ. 27ರಂದು ನಡೆಯಲಿರುವ ಮತದಾನಕ್ಕೆ ಫೆ. 12 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಹಾಲಿ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ಮಾಜಿ ಅಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಶಶೀಲ್‌ ಜಿ. ನಮೋಶಿ, ಡಾ.ರಾಜಶೇಖರ ನಿಪ್ಪಾಣಿ, ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ, ಡಾ.ಸಿದ್ದು ಬಿ. ಪಾಟೀಲ  ಅವರು  ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.

ಈ ಬಾರಿ ಡಾ.ಬಿಲಗುಂದಿ, ಶಶೀಲ್‌ ನಮೋಶಿ ಹಾಗೂ ಭೀಮಳ್ಳಿ ಅವರ ಮುರು ಪ್ಯಾನಲ್‌ಗಳು ಜಿದ್ದಾಜಿದ್ದಿಗೆ ಬೀಳುವುದು
ಖಚಿತವಾಗಿದೆ.

ಉಪಾಧ್ಯಕ್ಷ ಸ್ಥಾನಕ್ಕೆ  ಡಾ.ಶರಣಬಸಪ್ಪ ಹರವಾಳ, ಡಾ.ಶಿವಾನಂದ ದೇವರಮನಿ ಹಾಗೂ ಆರ್‌.ಎಸ್‌. ಹೊಸಗೌಡರ  ಸ್ಪರ್ಧಿಸಿದ್ದಾರೆ.

ನಾಮಪತ್ರ ವಾಪಸ್ಸಾತಿಗೆ  ಫೆ.18 ಕೊನೆಯ ದಿನವಾಗಿದೆ.

ಸಂಸ್ಥೆಯಲ್ಲಿ ಒಟ್ಟು 1,578 ಮತದಾರರು ಈ ಬಾರಿ ಹಕ್ಕು ಚಲಾಯಿಸಲಿದ್ದಾರೆ. ಒಬ್ಬ ಅಧ್ಯಕ್ಷ, ಒಬ್ಬ ಉಪಾಧ್ಯಕ್ಷ ಹಾಗೂ 13 ಮಂದಿಯನ್ನು ಆಡಳಿತ ಮಂಡಳಿ ಮಂಡಳಿಗೆ ಆಯ್ಕೆ ಮಾಡಬೇಕಿದೆ. ಇದರಲ್ಲಿ ರಾಯಚೂರು ಹಾಗೂ ಬೀದರ್‌ ಜಿಲ್ಲೆಗಳಿಗೆ ತಲಾ ಒಂದು ಪ್ರತಿನಿಧಿ ಸ್ಥಾನವನ್ನು ನೀಡಲಾಗಿದ್ದು, ಉಳಿದ 11 ಮಂದಿ ಕಲಬುರ್ಗಿ ಜಿಲ್ಲೆಯಿಂದ ಆಯ್ಕೆಯಾಗಲಿದ್ದಾರೆ ಎಂದು ಚುನಾವಣಾಧಿಕಾರಿ ಡಾ.ಸಿ.ಸಿ. ಪಾಟೀಲ ತಿಳಿಸಿದ್ದಾರೆ.

ಸರ್ಕಾರದ ನಿಯೋಚನೆಗೊಂಡ ಚುನಾವಣಾಧಿಕಾರಿಗಳಾದ ಸೀಮಾ ಫಾರೂಕಿ ಹಾಗೂ ಇಬ್ಬರು ಸದಸ್ಯರ ತಂಡ ಹಾಗೂ ಸೇಡಂ ಉಪವಿಭಾಗಾಧಿಕಾರಿ ರಮೇಶ ಕಲ್ಲೂರ ಕೂಡ ಶುಕ್ರವಾರದ ಪ್ರಕ್ರಿಯೆಗಳನ್ನು ಪರಿಶೀಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.