ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪ್ರದಾಯಿಕ ಕಾಮ ದಹನ

Last Updated 19 ಮಾರ್ಚ್ 2022, 2:05 IST
ಅಕ್ಷರ ಗಾತ್ರ

ಚಿಂಚೋಳಿ: ಪಟ್ಟಣದಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ಶುಕ್ರವಾರ ರಾತ್ರಿ ಕಾಮದಹನ ಜರುಗಿತು.

ಇಲ್ಲಿನ ಗಣೇಶ ಮೈದಾನದ ಎದುರುಗಡೆ ಕಟ್ಟಿಗೆ ಹಾಗೂ ಕೊರಡುಗಳ ಗುಡ್ಡೆ ಹಾಕಿ ಸಕ್ಕರೆ ಸರ ಹಾಕಿ ಪೂಜೆ ಸಲ್ಲಿಸಿ ಕಾಯಿ ಒಡೆದು ಬೆಂಕಿ ಹೊತ್ತಿಸಿ ಬೊಬ್ಬೆ ಹಾಕಿದರು.

ಕಿರಣ ಮಠಪತಿ ಪೂಜೆ ಸಲ್ಲಿಸಿದರು. ಶಿವಶರಣಪ್ಪ ಗಣಾಪುರ, ಶಂಕರ ಹೋಟೇಲ್, ಸಂಪತಕುಮಾರ ಮುಸ್ತಾರಿ, ಈಶ್ವರಪ್ಪ ಕೊಳ್ಳೂರು, ರಾಧಾಕೃಷ್ಣ ಕಿಟ್ಟು, ಸನ್ನಿ ಜಾಬಶೆಟ್ಟಿ, ಮಾಣಿಕ ಅಬಕಾರಿ, ಬಕ್ಕಪ್ಪ ಬೊಮ್ಮನಳ್ಳಿ ಇದ್ದರು.

ಕೊಬ್ಬರಿ ಸುಟ್ಟ ಗೃಹಿಣಿಯರು: ಇಲ್ಲಿನ ಬಸವ ನಗರದಲ್ಲಿರುವ ಬಸವೇಶ್ವರ ದೇವಾಲಯದ ಎದುರು ಕಾಮ ದಹನ ಸಂಪ್ರದಾಹದಂತೆ ನಡೆಯಿತು.

ಕಾಮಣ್ಣನನ್ನು ಸುಟ್ಟ ಕೆಂಡದಲ್ಲಿ ಮನೆಯಿಂದ ತಂದಿರುವ ಕಡಲೆ ಹಾಗೂ ಕೊಬ್ಬರಿ ಸುಟ್ಟುಕೊಂಡರಲ್ಲದೇ ಹೊಂದಿಷ್ಟು ಬೆಂಕಿಯನ್ನು ಮನೆಗೆ ತಂದು ಧಾರ್ಮಿಕ ವಿಧಿ ವಿಧಾನ ಪೂರೈಸಿದರು.

ತಾಲ್ಲೂಕಿನ ಸುಲೇಪೇಟ, ಐನೋಳ್ಳಿ, ಚಿಮ್ಮನಚೋಡ, ಕುಂಚಾವರಂ ಮೊದಲಾದ ಕಡೆ ಕಾಮದಹನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT