ಕನಕಗಿರಿ: ಲೋಕ ಕಲ್ಯಾಣಾರ್ಥ ಅಧಿಕ ಮಾಸದ ನಿಮಿತ್ತ ಆಗಸ್ಟ್ 5, 6ರಂದು ಇಲ್ಲಿನ ಐತಿಹಾಸಿಕ ಕನಕಾಚಲಪತಿ ದೇವಸ್ಥಾನದ ಆವರಣದಲ್ಲಿ 33 ಸಾಮೂಹಿಕ ಪವಮಾನ ಹೋಮ ಆಯೋಜಿಸಲಾಗಿದೆ. ಅಧಿಕ ಮಾಸದ ಈ ಕಾರ್ಯಕ್ಕೆ ಅಧಿಕ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ ಎಂಬ ಕಾರಣದಿಂದ ಶನಿವಾರದಂದು ಪವಮಾನ ಹೋಮ, ಸಂಜೆ 6 ಗಂಟೆಗೆ ಗಾಯಕ ಅನಂತ ಕುಲಕರ್ಣಿ ಅವರಿಂದ ದಾಸವಾಣಿ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಗರುಡೋತ್ಸವ ನಡೆಯುವುದು.