ಬುಧವಾರ, ನವೆಂಬರ್ 25, 2020
24 °C

ಸಾಲುಮರದ ತಿಮ್ಮಕ್ಕನಿಗೆ ಸಿಯುಕೆ ಗೌರವ ಡಾಕ್ಟರೇಟ್‌ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಮಾಡಿದ ಅಗಾಧ ಸಾಧನೆಯನ್ನು ಪರಿಗಣಿಸಿ ಸಾಲುಮರದ ತಿಮ್ಮಕ್ಕ ಅವರಿಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಪದವಿಯನ್ನು ಶನಿವಾರ ಪ್ರದಾನ ಮಾಡಲಾಯಿತು.

ಬೆಂಗಳೂರಿನ ನೆಲಮಂಗಲದಲ್ಲಿರುವ ತಿಮ್ಮಕ್ಕ ಅವರ ಮನೆಗೆ ತೆರಳಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ, ಭಾಷಾ ವಿಜ್ಞಾನಿ ಪ್ರೊ.ರಾಜೇಶ್ವರಿ ಮಹೇಶ್ವರಯ್ಯ, ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ.ಬಸವರಾಜ ಡೋಣೂರ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ವಿಕ್ರಮ ವಿಸಾಜಿ, ಕ್ಲಾಸಿಕಲ್ ಕನ್ನಡದ ನಿರ್ದೇಶಕ ಪ್ರೊ.ಬಿ.ಬಿ. ಪೂಜಾರಿ, ಸಹಾಯಕ ಕುಲಸಚಿವ ಅಜೀಂ ಭಾಷಾ ಅವರು ಗೌರವ ಪ್ರದಾನ ಮಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತಿಮ್ಮಕ್ಕ ಅವರು, ‘ದೊಡ್ಡ ವಿಜ್ಞಾನಿಗಳು, ತಜ್ಞರು, ಸಾಹಿತಿಗಳು, ಸಂಶೋಧಕರಿಗೆ ನೀಡುವ ಈ ಗೌರವ ಡಾಕ್ಟರೇಟ್‌ಅನ್ನು ಮರ ಬೆಳೆಸಿದ ನನಗೂ ನೀಡಿದ್ದು ಖುಷಿ ತಂದಿದೆ. ನೀವೆಲ್ಲರೂ ಮರ ಬೆಳೆಸಿದರೆ ನನಗೆ ಅದಕ್ಕಿಂತ ದೊಡ್ಡ ಸಂತೋಷವಿಲ್ಲ’ ಎಂದರು.

‘110 ವರ್ಷ ವಯಸ್ಸಿನವರಾದ ತಿಮ್ಮಕ್ಕ ಅವರಿಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ನೀಡಿದ್ದು ನನಗೆ ವೈಯಕ್ತಿಕವಾಗಿಯೂ ಹರ್ಷ ಉಂಟು ಮಾಡಿದೆ. ವಿಶ್ವವಿದ್ಯಾಲಯಕ್ಕೂ ಸಲ್ಲುವ ಅಭಿಮಾನವಿದು’ ಎಂದು ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ ಪ್ರತಿಕ್ರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು