ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳಿಬಾನ ಮಾಡುವ ವಿಧಾನ ಹೇಗೆ?

Last Updated 16 ಅಕ್ಟೋಬರ್ 2019, 14:22 IST
ಅಕ್ಷರ ಗಾತ್ರ

ಕಲಬುರ್ಗಿ: ಉತ್ತರ ಕರ್ನಾಟಕದ ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಹುಳಿಬಾನಕ್ಕೆ ವಿಶೇಷ ಮಹತ್ವವಿದೆ. ಅತ್ಯಂತ ಪ್ರಾಚೀನ ಗ್ರಾಮೀಣ ಖಾದ್ಯದ ಪೈಕಿ ಬಾನವೂ ಒಂದು.

ಜಾತ್ರೆ, ಹಬ್ಬ ಹರಿದಿನ ಹಾಗೂ ದೇವರ ಪರ್ವ (ಸ್ಥಳೀಯ ದೇವತೆಗಳ ಆರಾಧನೆ)ದ ಸಂದರ್ಭದಲ್ಲಿ ಜೋಳ ಅಥವಾ ಅಕ್ಕಿಯಿಂದ ಹುಳಿಬಾನವನ್ನು ತಯಾರಿಸಿ ಭಕ್ತರು ಹಾಗೂ ಓಣಿಯ ಜನರಿಗೆ ಹಂಚಲಾಗುತ್ತದೆ.

ಇದನ್ನು ತಯಾರಿಸುವ ವಿಧಾನ ಹೀಗಿದೆ: ಜೋಳ ಅಥವಾ ಅಕ್ಕಿಯನ್ನು ಮೊದಲು ಕುಟ್ಟಬೇಕು. ಅದಕ್ಕೆ ಮಜ್ಜಿಗೆ ಹಾಗೂ ನೀರನ್ನು ಬೆರೆಸಿ ಒಂದು ದಿನ ದೊಡ್ಡ ಪಾತ್ರೆಯಲ್ಲಿ ಒಂದಿಡೀ ದಿನನೆನೆ ಹಾಕಬೇಕು. ಮರುದಿನ ಅದನ್ನು ಚೆನ್ನಾಗಿ ಕುದಿಸಬೇಕು. ನಂತರ ಸಿದ್ಧಗೊಂಡ ಹುಳಿಬಾನಕ್ಕೆ ಬಳ್ಳೊಳ್ಳಿಯನ್ನು ಬೆರೆಸಬೇಕು.

ಹೀಗೆ ಸಿದ್ಧವಾದ ಬಾನವನ್ನು ರೊಟ್ಟಿಯೊಂದಿಗೆ ಪಲ್ಯದ ರೂಪದಲ್ಲಿ ಹಚ್ಚಿಕೊಂಡು ಸೇವಿಸಬೇಕು. ಹೀಗೆ ಸಿದ್ಧವಾದ ಬಾನದಲ್ಲಿ ಹುಳಿಯ ಪ್ರಮಾಣ ಜಾಸ್ತಿ ಇರುವುದರಿಂದ ಎರಡು ದಿನಗಳವರೆಗೂ ಕೆಡುವುದಿಲ್ಲ. ಹೀಗಾಗಿಯೇ, ಮೂರು ಹೊತ್ತೂ ಜೋಳ ಅಥವಾ ಸಜ್ಜೆಯ ಕಟಕ್‌ ರೊಟ್ಟಿಯೊಂದಿಗೆ ಬಾನವನ್ನು ಊಟ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT