ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಡ್ಲಾಪುರ: ‘ದೇವರ ಮನೆ’ ಉದ್ಘಾಟನೆ

ದೇವರ ಮನೆ
Last Updated 14 ಮಾರ್ಚ್ 2020, 12:15 IST
ಅಕ್ಷರ ಗಾತ್ರ

ವಾಡಿ: ಲಾಡ್ಲಾಪುರ ಗ್ರಾಮದಲ್ಲಿ ಶುಕ್ರವಾರ ಹಾಜಿಸರ್ವರ (ಹಾದಿಶರಣ) ನೂತನ ‘ದೇವರ ಮನೆ’ಯನ್ನು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.

ಬೆಳಿಗ್ಗೆ 9.30ಕ್ಕೆ ಗರ್ಭಗುಡಿಯಲ್ಲಿನ ಗದ್ದುಗೆಗೆ ವಿವಿಧ ಪೂಜೆ, ಮಂತ್ರ ಪಠಣಗಳು ಜರುಗಿದ ನಂತರ ಬೆಳ್ಳಿಕುದುರೆ ಹಾಗೂ ಪಂಚಕಳಸಗಳನ್ನು ಪ್ರತಿಷ್ಠಾಪಿಸಲಾಯಿತು.

ಪೂಜೆ ನಂತರ ಪ್ರಮುಖ ಬೀದಿಗಳ ಮೂಲಕ ಹಾಜಿಸರ್ವರ್ (ಹಾದಿಶರಣ) ಬೆಟ್ಟಕ್ಕೆ ಸಾಗಿ ನೈವೇದ್ಯ ಸಮರ್ಪಿಸಲಾಯಿತು. ವಿವಿಧ ವಾದ್ಯ ಮೇಳಗಳು ಮೆರವಣಿಗೆಗೆ ಮೆರುಗು ತಂದವು.ಲಾಡ್ಲಾಪುರ ಸೇರಿ ಸುತ್ತಮುತ್ತಲ ಹಲವು ಗ್ರಾಮಗಳ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ವಿವಿಧ ಗಣ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ವಿಜಯಪುರ ಜಿಲ್ಲೆಯ ಆಕಾಶ ಮನಗೂಳಿ ಕಲಾತಂಡ ಹಾಗೂ ಶೋಭಾ ಭಜನಾ ಕಲಾ ತಂಡಗಳಿಂದ ಭಜನೆ ನಡೆಯಿತು.

ಮುಖಂಡರಾದ ಬಸವರಾಜ ಮುಕ್ತೇದಾರ, ವಿಶ್ವನಾಥ ಗಂಧಿ, ಶರಣಪ್ಪಗೌಡ ಪೊಲೀಸ್ ಪಾಟೀಲ, ದೊಡ್ಡಪ್ಪಗೌಡ ಪೊಲೀಸ್ ಪಾಟೀಲ್, ಶಾಂತಕುಮಾರ ಎಣ್ಣಿ, ಸಾಬಣ್ಣ ಮುಸ್ಲಾ, ಗ್ರಾಪಂ ಅಧ್ಯಕ್ಷ ಸಾಬಣ್ಣ ಆನೇಮಿ, ನಾಗಣ್ಣ ಹೂಗಾರ, ಈರಣ್ಣ ಮಲಕಂಡಿ, ಶಿವಕುಮಾರ ಮಲಕಂಡಿ, ಸಾಬಯ್ಯ ಗುತ್ತೇದಾರ, ಶರಣಪ್ಪ ಪೂಜಾರಿ, ವಸಂತ ಹಲಕರ್ಟಿ, ಸಾಬಣ್ಣ ಗೊಡಗ, ಮಹಾದೇವ ಹೂಗಾರ, ರಂಗರಾವ ಕುಲ್ಕರ್ಣಿ, ರಮೇಶ ಹೂಗಾರ, ಹಣಮಂತ ಗಲಗಿನ, ಮಲ್ಲುಗೌಡ ಪೊಲೀಸ್ ಪಾಟೀಲ್, ಮೈನುದ್ದೀನ್ ಖುರೇಶಿ, ಖಾಶಿಂ ಮುಲ್ಲಾ, ಬಸ್ಸಯ್ಯ ಗುತ್ತೇದಾರ, ಸಾಯಣ್ಣ ಗಂಜಿ, ರಾಮಲಿಂಗ ಕೊಂಡಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT