ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಾತಂತ್ರ್ಯ ಸೇನಾನಿಗಳೇ ಮಾದರಿಯಾಗಲಿ’

Last Updated 16 ಆಗಸ್ಟ್ 2021, 3:50 IST
ಅಕ್ಷರ ಗಾತ್ರ

ಕಲಬುರ್ಗಿ: ‘ನಾವೆಲ್ಲರೂ ಇಂದು ಸುಖ, ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸಲು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ–ಬಲಿದಾನವೇ ಕಾರಣ’ ಎಂದು ಕೆಎಚ್‌ಬಿ ಕ್ಷೇಮಾಭಿವದ್ಧಿ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಕುಲಕರ್ಣಿ ಹೇಳಿದರು.

ನಗರದ ಸಂತೋಷ ಕಾಲೊನಿಯ ಕೆಎಚ್‌ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ಭಾನುವಾರ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಇಂದಿನ ಮಕ್ಕಳು ರಾಷ್ಟ್ರದ ಭಾವಿ ಪ್ರಜೆಗಳು. ಅವರಿಗೆ ಅಕ್ಷರದೊಂದಿಗೆ ಉತ್ತಮ ಸಂಸ್ಕಾರ ನೀಡಿ ದೇಶಾಭಿಮಾನ ಮೂಡಿಸುವುದು ಮುಖ್ಯ. ಸಂಪತ್ಭರಿತ ರಾಷ್ಟ್ರ ಕಟ್ಟಲು ಈಗಿನಿಂದಲೇ ಮಕ್ಕಳನ್ನು ಪ್ರೇರೇಪಿಸಬೇಕಿದೆ. ಆದರೆ ಬಹುಪಾಲು ಯುವಜನರಿಗೆ ಚಿತ್ರನಟರೇ ಮಾದರಿಯಾಗಿದ್ದಾರೆ. ನಮ್ಮ ಜೀವನಕ್ಕೆ ಪ್ರೇರಣೆಯಾಗಬೇಕಾಗಿದ್ದು ನಮ್ಮ ರಾಷ್ಟ್ರಕಟ್ಟಿದ ನಾಯಕರು’ ಎಂದು ಹೇಳಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಶಿವಕಾಂತ ಚಿಮ್ಮಾ, ಜ್ಞಾನ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸ೦ಗಮೇಶ ಸರಡಗಿ, ವಕೀಲ ಹಣಮಂತರಾಯ ಎಸ್. ಅಟ್ಟೂರ, ರಾಜೇಶ್ ನಾಗಭುಜಂಗೆ, ಡಿ.ವಿ. ಕುಲಕರ್ಣಿ ಮಾತನಾಡಿದರು.

ಪ್ರಮುಖರಾದ ಕೆ.ವಿ. ಕುಲಕರ್ಣಿ, ರೇವಣಸಿದ್ಧಪ್ಪ ರುದ್ರವಾಡಿ,ಪ್ರಕಾಶ ಕುಲಕರ್ಣಿ, ಶಿವಪ್ಪ ಕಟ್ಟಿಮನಿ ಸುಲ್ತಾನಪೂರ, ಬಸವರಾಜ ಕಾಡಾ, ಬಸವರಾಜ ಬಡಿಗೇರ, ಕಲ್ಯಾಣರಾವ ಮಡಿವಾಳ, ಡಿ ಆರ್ ಕುಲಕರ್ಣಿ, ಶಿವಕುಮಾರ ದಾಮ೦ಕರ, ಪ್ರಸಾದ, ಕುಲಕರ್ಣಿ ಶಿವಾನಂದ ಭಜರಿ, ನರ್ಸಿಂಗ ಕಟಕೆ, ರಾಜಶೇಖರ ಜಕ್ಕಾ, ಡಿ.ಆರ್.ಕುಲಕರ್ಣಿ, ಪಂಪಣ್ಣ ಪಾಟೀಲ, ಅರುಣಕುಮಾರ ಕಟಕೆ, ನಾಗರಾಜ ವಡ್ಡಣಕೇರಿ, ಸುರೇಖಾ ಸಾವಳಗಿ, ಸಂಧ್ಯಾ ಕುಲಕರ್ಣಿ, ವಿಜಯಲಕ್ಷ್ಮಿ ತಡಕಲ, ಅಂಬಿಕಾ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT