ಕಲಬುರಗಿ: ‘ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಮಾಡಿದ್ದು ಒಳ್ಳೆಯದು. ಜನರಿಗೆ ಬಹಳ ಸಮಾಧಾನವಾಗಿದೆ. ಇದರಿಂದ ಸಂತೋಷವಾಗಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕದನ ವಿರಾಮವನ್ನು ಡೊನಾಲ್ಡ್ ಟ್ರಂಪ್ ಮಾಡಿದರು, ಬೇರೆಯವರು ಮಾಡಿದರು ಎಂದು ಕ್ರೆಡಿಟ್ ತೆಗೆದುಕೊಳ್ಳುವ ಬಗ್ಗೆ ಮಾತನಾಡಬಾರದು. ದೇಶದ ಸುರಕ್ಷತೆಯಲ್ಲಿ ನಾವು ಮೊದಲೇ ಹೇಳಿದಂತೆ ಸರ್ಕಾರಕ್ಕೆ ಬೆಂಬಲ ನೀಡುತ್ತೇವೆ. ಉಳಿದ ವಿಷಯವನ್ನು ಅವಕಾಶ ಸಿಕ್ಕಾಗ ಮಾತನಾಡುತ್ತೇವೆ’ ಎಂದರು.

‘ವಿಶೇಷ ಅಧಿವೇಶನವನ್ನು ಕರೆಯುವಂತೆ ನಾವು ಮೊದಲಿನಿಂದಲೂ ಬೇಡಿಕೆ ಇರಿಸುತ್ತಿದ್ದೇವೆ. ಅಧಿವೇಶನ ಕರೆದರೆ ಎಲ್ಲರೂ ಚರ್ಚೆ ಮಾಡಿ, ಈಗಿನ ಸ್ಥಿತಿ ಏನಿದೆ? ಮುಂದೆ ನಾವು ಏನು ಮಾಡಬೇಕು ಎಂಬುದರ ಬಗ್ಗೆ ಪ್ರಧಾನಿಗಳು ಮಾತನಾಡಿದರೆ ಇಡೀ ದೇಶಕ್ಕೆ ಗೊತ್ತಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.