ಕಲಬುರಗಿ: ‘ಗೌತಮ ಬುದ್ಧ ಹಾಗೂ ಬಸವಣ್ಣನವರ ತತ್ವಗಳನ್ನು ಜನರು ಅಳವಡಿಸಿಕೊಂಡಿದ್ದರೆ ದೇಶಕ್ಕೆ ಸಂವಿಧಾನದ ಅವಶ್ಯಕತೆ ಇರುತ್ತಿರಲಿಲ್ಲ. ಈ ಮಹನೀಯರ ತತ್ವಗಳೇ ಅಂಬೇಡ್ಕರ್ ಸಂವಿಧಾನದ ತಳಹದಿಯಾಗಿವೆ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಮೈದಾನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಭಾನುವಾರ ಅಂಬೇಡ್ಕರ್ ಅವರ 65ನೇ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಆಯೋಜಿಸಿದ್ದ ಗೌತಮ ಬುದ್ಧನ ಜೀವನ ಆಧಾರಿತ ‘ತಥಾಗತ‘ ಮಹಾನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ಬುದ್ಧ, ಬಸವಣ್ಣ ನೀಡಿರುವ ಸಂದೇಶಗಳು ಒಂದೇ ಆಗಿದ್ದವು. ಆದರೆ, ಅವುಗಳನ್ನು ಸರಿಯಾಗಿ ಅರಿಯುವುದು ಆಗಲಿಲ್ಲ. ಹೀಗಾಗಿಯೇ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಅವಶ್ಯಕತೆ ಬಂತು. ಈಗ ಸಂವಿಧಾನ ಸರಿಯಾಗಿ ಅನುಷ್ಠಾನಗೊಳಿಸದಿದ್ದರೆ, ಸಮಾನತೆ ಕಾಣಲು ಸಾಧ್ಯವಿಲ್ಲ. ಪ್ರಬುದ್ಧ ಭಾರತ ನಿರ್ಮಾಣಕ್ಕೆ ಬುದ್ಧ, ಬಸವ, ಅಂಬೇಡ್ಕರ್ ಅವರು ನೀಡಿರುವ ಸಂದೇಶಗಳಿಂದ ಮಾತ್ರ ಸಾಧ್ಯ. ನಮ್ಮ ಜೀವನದಲ್ಲಿ ಅವರ ಸಂದೇಶಗಳನ್ನು ಅಳವಡಿಸಿಕೊಂಡು ಸಾರ್ಥಕ ಜೀವನ ಕಟ್ಟಿಕೊಳ್ಳೋಣ’ ಎಂದು ಹೇಳಿದರು.

‘ಅಂಬೇಡ್ಕರ್ ಅವರು ತಮ್ಮ ಜೀವಿತಾವಧಿಯ ಕೊನೆಯ ದಿನಗಳಲ್ಲಿ ಬೌದ್ಧ ಧರ್ಮವನ್ನು ಏಕೆ ಸ್ವೀಕರಿಸಿದರು ಎಂಬುದನ್ನು ತಿಳಿದುಕೊಳ್ಳಬೇಕಿದೆ. ದೇಶದಲ್ಲಿ 25 ಸಾವಿರ ಜಾತಿಗಳಿದ್ದು, ನಾವೆಲ್ಲ ಒಂದೇ, ಎಲ್ಲರೂ ಭಾರತೀಯರು ಎಂಬ ಭಾವನೆ ಬೆಳೆಯಬೇಕು’ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ‘ಶೋಷಿತ ಸಮಾಜವನ್ನು ಮೇಲೆತ್ತುವ ಕೆಲಸ ಸಂವಿಧಾನದಿಂದ ಆಗುತ್ತಿದೆ. ತಥಾಗತ ನಾಟಕದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿಶ್ವಕ್ಕೆ ಬೆಳಕು ನೀಡಿದ್ದು ಬೌದ್ಧ ಧರ್ಮ’ ಎಂದು ಹೇಳಿದರು.

ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ಕಾಂಗ್ರೆಸ್ ಮುಖಂಡ ಅಲ್ಲಮಪ್ರಭು ಪಾಟೀಲ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣ ಬಸವೇಶ್ವರ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ ನಿಷ್ಠಿ, ಡಾ.ಅನಿಲಕುಮಾರ್ ಬಿಡವೆ ಇದ್ದರು.

ಸಮಾಜದ ಪೂರ್ವಿಕರ ಜೀವನ ಚರಿತ್ರೆ ಆಧಾರಿತ ಮಾಹಿತಿಯ ಕ್ಯಾಲೆಂಡರ್ ಅನ್ನು ದತ್ತಾತ್ರೇಯ ಪಾಟೀಲ ರೇವೂರ ಬಿಡುಗಡೆಗೊಳ್ಳಿಸಿದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸುರೇಶ ಹಾದಿಮನಿ ನಿರೂಪಣೆ ಮಾಡಿದರು. ಸಿದ್ದಾರ್ಥ ಚಿಮ್ಮಾಇದಲಾಯಿ ಅಂಬೇಡ್ಕರ್ ಗೀತೆ ಹಾಡಿದರು.

ನಾಗ್ಪುರದ ಶೈಲೇಂದ್ರ ಬಾಗಡಿ ಹಾಗೂ ಕೃಷ್ಣ ಬಾಗಡಿ ಅವರ ನಿರ್ದೇಶನದ ಬುದ್ಧನ ಸಂದೇಶ ಸಾರುವ ‘ತಥಾಗತ’ ಮಹಾನಾಟಕವನ್ನು 100ಕ್ಕೂ ಹೆಚ್ಚು ಕಲಾವಿದರ ತಂಡ ಪ್ರದರ್ಶನ ಮಾಡಿತು.

ಕಲಬುರಗಿ, ಯಾದಗಿರಿ, ಬೀದರ್, ವಿಜಯಪುರ ಜಿಲ್ಲೆಗಳಿಂದ ಬಂದಿದ್ದ ಸಂಘಟನೆಯ ಸಾವಿರಾರು ಕಾರ್ಯಕರ್ತರು ಹಾಗೂ ನಾಟಕ ಪ್ರೇಮಿಗಳು ‘ತಥಾಗತ’ ನಾಟಕ ವೀಕ್ಷಿಸಿದರು.

ಬುದ್ಧ ತತ್ವಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ತಂಡವನ್ನು ಕರೆಸಲಾಗಿದೆ. ಕೇಳಿದ ಕೂಡಲೇ ಡಾ.ಶರಣಬಸವಪ್ಪ ಅಪ್ಪ ಅವರು ಮೈದಾನವನ್ನು ನಾಟಕಕ್ಕಾಗಿ ಕೊಡಲು ಒಪ್ಪಿದರು.
- ಡಿ.ಜಿ. ಸಾಗರ್,ರಾಜ್ಯ ಸಂಚಾಲಕ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ

ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಗಳನ್ನು ಅಳವಡಿಸಿಕೊಂಡರೆ ದೇಶದಲ್ಲಿ ಯಾವುದೇ ಅಪರಾಧ ಪ್ರಕರಣಗಳು ಜರುಗುವುದಿಲ್ಲ. ಪೊಲೀಸರ ಕೆಲಸವೂ ಕಡಿಮೆಯಾಗುತ್ತದೆ.
-ಡಾ.ವೈ.ಎಸ್. ರವಿಕುಮಾರ್, ನಗರ ಪೊಲೀಸ್ ಕಮಿಷನರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.