ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತಾಜಿ ಕಾಲೊನಿಯಲ್ಲಿ ಮಹಿಳಾ ದಿನಾಚರಣೆ

Last Updated 11 ಮಾರ್ಚ್ 2023, 13:31 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಸಾಯಿ ಮಂದಿರ ಹತ್ತಿರದ ನೇತಾಜಿ ಕಾಲೊನಿಯಲ್ಲಿ ಇತ್ತೀಚೆಗೆ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ನೂರಾರು ಮಹಿಳೆಯರು ಆಚರಿಸಿದರು.

ಉಪನ್ಯಾಸಕಿ ವಿಶಾಲಾಕ್ಷಿ ದೇಸಾಯಿ ಅಂತರರಾಷ್ಟ್ರೀಯ ಮಹಿಳಾ ದಿನದ ಕುರಿತು ಹಾಡುಗಳನ್ನು ಪ್ರಸ್ತುತಪಡಿಸಿದರು.

ಮುಖ್ಯ ಭಾಷಣ ಮಾಡಿದ ಫರಹತಾಬಾದ್ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಲಲಿತಾ ರೆಡ್ಡಿ, ‘ಇಡೀ ಪ್ರಪಂಚದಲ್ಲೇ ಮಾರ್ಚ್ 8 ಎಲ್ಲಾ ಕ್ಷೇತ್ರದ ಮಹಿಳೆಯರಿಗೆ ಸ್ಫೂರ್ತಿದಾಯಕ ದಿನವಾಗಿದೆ. ಪುರುಷರಂತೆ ಮಹಿಳೆಯರು ಎಲ್ಲಾ ಹಕ್ಕುಗಳನ್ನು ಪಡೆದುಕೊಂಡ, ಸಮಾನ ಕೆಲಸಕ್ಕೆ ಸಮಾನ ವೇತನ, ಮತದಾನದ ಹಕ್ಕು, ಹೆರಿಗೆ ರಜೆ, ಆರೋಗ್ಯ, ಕಾನೂನಾತ್ಮಕ, ಶೈಕ್ಷಣಿಕ ಸಾಂಸ್ಕೃತಿಕ, ಹಕ್ಕುಗಳನ್ನು ಪಡೆದುಕೊಂಡು ಯಶಸ್ವಿಯಾದ ಸ್ಮರಣೀಯ ದಿನವಿದು’ ಎಂದರು.

ಪ್ರಸಕ್ತ ಕೆಟ್ಟ ವ್ಯವಸ್ಥೆಯಲ್ಲಿ ಅತ್ಯಾಚಾರ, ಗುಂಪು ಅತ್ಯಾಚಾರ, ಅಗೌರವ, ಶೋಷಣೆ ನಿರಂತರವಾಗಿ ನಡೆಯುತ್ತಲಿವೆ. ಇದಕ್ಕೆ ಪರಿಹಾರವೆಂದರೆ ಒಗ್ಗಟ್ಟಿನ ಹೋರಾಟ. ನೈಜ ತತ್ವ, ಸುವಿಚಾರ ಮಾರ್ಗದರ್ಶನ ಒಂದೇ ಪರಿಹಾರವಾಗಿದೆ’ ಎಂದು ಹೇಳಿದರು.

ರಂಗೋಲಿ ಸ್ಪರ್ಧೆಯಲ್ಲಿ ಸ್ವಾತಿ ಹಿಬಾರೆ ಪ್ರಥಮ, ಕಾಶಮ್ಮ ದಾನಪ್ಪ ದ್ವಿತೀಯ, ರೂಪಾ ತೃತೀಯ, ಮ್ಯೂಸಿಕಲ್ ಚೇರ್‌ ಸ್ಪರ್ಧೆಯಲ್ಲಿ ಮಾಲತಿ ದೋಶೆಟ್ಟಿ, ಶ್ಯಾಮಲಾ, ವೀಣಾ ಮಾಲಿಪಾಟೀಲ, ಒನ್ ಮಿನಿಟ್ ಆಟದಲ್ಲಿ ಸುಷ್ಮಾ, ಸರಸ್ವತಿ, ದೀಪಾರೆಡ್ಡಿ ಗೆಲುವು ಸಾಧಿಸಿದರು.

ಕಾಶಮ್ಮ, ದೀಪಾ, ವೀಣಾ ಮಾಲಿಪಾಟೀಲ ಮಳೆಯರಾಗಿ ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಹೇಳಿದರು.

ಸ್ಪರ್ಧೆಯಲ್ಲಿ ಗೆದ್ದವರಿಗೆ ಪರಿತೋಷಕ ಕೊಡಲಾಯಿತು.

ಬಡಾವಣೆಯ ವಿಜಯಲಕ್ಷ್ಮಿ ಕುಲಕರ್ಣಿ, ಶೈಲಾ ಗುಗ್ವಾಡ, ಲಕ್ಷ್ಮಿ ಅರಗಲಮನಿ, ಭಾರತಿ ಇಬ್ರಾಹಿಂಪುರ, ರೂಪಾ ಸೀಗಿ, ಸುಜಾತಾ ಚಿತ್ರಗಾರ, ಅನಿತಾ ಪೋದ್ದಾರ್ ಭಾಗವಹಿಸಿದ್ದರು.

ಶಿಲ್ಪಾ ಶ್ರೀಗಿರಿ ಕಾರ್ಯಕ್ರಮ ನಿರ್ವಹಿಸಿದರು. ವೀಣಾ ಕುಲಕರ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT