ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಪುರ ಮಾದರಿ ಕಾಮಗಾರಿ ಪುನಾರಂಭ: ಬಿ.ಆರ್.ಪಾಟೀಲ

Published 2 ಜೂನ್ 2023, 16:54 IST
Last Updated 2 ಜೂನ್ 2023, 16:54 IST
ಅಕ್ಷರ ಗಾತ್ರ

ಆಳಂದ: ಕ್ಷೇತ್ರದಲ್ಲಿ 2018ರಲ್ಲಿ ಕೈಗೊಂಡ ಸಿರಪುರ ಮಾದರಿ ಜಲಸಂಗ್ರಹ ಕಾಮಗಾರಿಗಳನ್ನು ಮುಂಬರುವ ದಿನಗಳಲ್ಲಿ ಪುನಾರಂಭಗೊಳಿಸಲಾಗುವುದು ಎಂದು ಶಾಸಕ ಬಿ.ಆರ್.ಪಾಟೀಲ ಹೇಳಿದರು.

ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದ ಶಿವಲಿಂಗೇಶ್ವರ ವಿರಕ್ತಮಠಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, ’ತಾಲ್ಲೂಕಿನಲ್ಲಿ ನೀರಾವರಿ ಸೌಲಭ್ಯಗಳು ಹೆಚ್ಚಿದರೆ ಇಲ್ಲಿನ ಕೃಷಿ , ತೋಟಗಾರಿಕೆಯು ಲಾಭದಾಯಕವಾಗಲಿದೆ. ಈ ದೂರದೃಷ್ಟಿಯಿಂದ 2018ರಲ್ಲಿ ಭೀಮಾ ನದಿಯಿಂದ ಅಮರ್ಜಾ ಅಣೆಕಟ್ಟೆಗೆ ನೀರು ಭರ್ತಿ ಹಾಗೂ ಸಿರಪುರ ಮಾದರಿ ಚೆಕ್‌ ಡ್ಯಾಂ ನಿರ್ಮಿಸಿ ನೀರು ಸಂಗ್ರಹ ಕಾರ್ಯ ಆರಂಭಿಸಲಾಯಿತು. ಆದರೆ ಹಿಂದಿನ 5 ವರ್ಷ ಯೋಜನೆ ಸ್ಥಗಿತಗೊಂಡ ಪರಿಣಾಮ ಕೃಷಿಗೆ ಹಿನ್ನಡೆಯಾಯಿತು ಎಂದರು.

ಪೀಠಾಧಿಪತಿ ಅಭಿನವ ಶಿವಲಿಂಗ ಸ್ವಾಮೀಜಿ ಮಾತನಾಡಿ, ನೀರಾವರಿ ಕಾಮಗಾರಿ ಜತೆಯಲ್ಲಿ ಸಾಮೂಹಿಕ ಶೌಚಾಲಯ ಹಾಗೂ ಗ್ರಾಮೀಣ ರಸ್ತೆಗಳ ದುರಸ್ತಿ ಕೈಗೊಳ್ಳಲು ಆದ್ಯತೆ ನೀಡಲು ಶಾಸಕರ ಗಮನ ಸೆಳೆದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶರಣಗೌಡ ಪಾಟೀಲ, ಮುಖಂಡ ಯುವರಾಜ ಹತ್ತರಕಿ, ಸೂರ್ಯಕಾಂತ ದಾಬಾ, ವೈಜುನಾಥ ಪಾಟೀಲ, ಮಲ್ಲಯ್ಯ ಸ್ವಾಮಿ, ಬೀರಣ್ಣ ಪೂಜಾರಿ, ರಾಹುಲ ಪಾಟೀಲ, ಮಹಿಬೂಬ ಭಾಗವಾನ್‌, ಬಸಲಿಂಗಯ್ಯ ಸ್ವಾಮಿ, ಸಿದ್ದರಾಮ ಅರಳಿಮರ, ಶಿವಾನಂದ ಪಾಟೀಲ, ಮಹಿಬೂಬ ಫಣಿಬಂಧ, ಚೆನ್ನಪ್ಪ ಹಾಲೇನವರ್‌, ಪರಮೇಶ್ವರ ಭೂಸನೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT