ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಡೆಶಂಕರಲಿಂಗ ಪಲ್ಲಕ್ಕಿ ಮಹೋತ್ಸವ

Last Updated 14 ಸೆಪ್ಟೆಂಬರ್ 2021, 5:20 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಜಡೆಶಂಕರಲಿಂಗ ದೇವಸ್ಥಾನದಲ್ಲಿ ಜಿಲ್ಲಾ ಬಣಗಾರ ಸಮಾಜ ಹಾಗೂ ಜಡೆ ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಸೋಮವಾರ ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ಅಂಗವಾಗಿ ಪಲ್ಲಕ್ಕಿ ಉತ್ಸವ ಸರಳವಾಗಿ ನಡೆಯಿತು.

ಜಡೆ ಶಂಕರಲಿಂಗ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಶಾಂತವೀರಪ್ಪ ಕಲ್ಯಾಣಿ, ಬಣಗಾರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಘಾಳೆಪ್ಪ ದೊಡ್ಡಮನಿ, ಚಂದ್ರಶೇಖರ ಧನಶೆಟ್ಟಿ, ಶಾಂತಪ್ಪ ಘೂಳಿ ಅಲ್ಲದೆ ಮಹಾರುದ್ರ ಚೌಧರಿ, ಬಸವಲಿಂಗಪ್ಪ ದೇವಾಪುರ, ನಾಗೇಶ ಹಂಪಾಗೋಳ, ನಾಗಪ್ಪ ರೋಣದ, ಸಿದ್ದಣ್ಣ ಕಮರಡಗಿ, ನಾಗೇಂದ್ರ ಕಲ್ಯಾಣಿ, ಮಲ್ಲಿಕಾರ್ಜುನ ದೊಡಕುಂಡಿ, ಆನಂದ ದಂಡೋತಿ, ರವಿ ಕಾಳಗಿ, ಪ್ರವೀಣ ನಂದಿ, ಬಸವರಾಜ ಕಮರಡಗಿ, ಡಾ.ರವೀಂದ್ರಕುಮಾರ ನಾಗಲೀಕರ, ಶ್ರೀಶೈಲ ಕೊಳಕೂರ, ಅಶೋಕ ದೊಡಮನಿ, ಶರಣು ಮೊರಬ, ಮಹಿಳಾ ಸದಸ್ಯರಾದ ದೀಪಾ ದಂಡೋತಿ, ಶ್ರೀದೇವಿ ಬೈರಾಮಡಗಿ, ಚಂದ್ರಕಲಾ ಚೌಧರಿ, ನಿಂಗಮ್ಮ ಕಿಣಗಿ, ಮಹಾದೇವಿ ಕಮರಡಗಿ, ನಂದಾ ಭೈರಾಮಡಗಿ, ಅನಿತಾ ಕೊಳಕೂರ, ಸುವರ್ಣ ಕಲ್ಯಾಣಿ, ನೀಲಮ್ಮ, ದೊಡಮನಿ, ವೈಶಾಲಿ ದಂಡೋತಿ, ಶೋಭಾ ರೋಣದ, ಪೂಜಾ ಧನಶೆಟ್ಟಿ, ಭುವನೇಶ್ವರಿ ಕುರ್ಲೆ, ಗೀತಾ ಹುಡಗಿ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.

ಸಂಗೀತ, ಹಾಸ್ಯ ಸಂಜೆ:ಜಡೆಶಂಕರಲಿಂಗ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಸಂಗೀತ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮ ಮನಸೂರೆಗೊಂಡಿತು.

ಹಾಸ್ಯ ಕಲಾವಿದರಾದ ಇಂದುಮತಿ ಸಾಲಿಮಠ, ಗುಂಡಣ್ಣ ಡಿಗ್ಗಿ ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಶಾಂತಕುಮಾರ ಮಂಗಲಗಿ, ವಿಜಯಲಕ್ಷ್ಮಿ ಕೆಂಗನಾಳ, ಸಂತೋಷ ಪಾಟೀಲ, ಗಂಗಾಬಿಕೆ ಮಠಪತಿ ಮಾಡ್ಯಾಳ ಅವರ ಗಾಯನಕ್ಕೆ ಶಂಭುಲಿಂಗ ದುಧನಿ, ರೇವಣಸಿದ್ದಪ್ಪ ದೇಸಾಯಿ ಕಲ್ಲೂರ ತಬಲಾ ಸಾಥ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT