ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸತ್ಯ ಮುಚ್ಚಿ ಹಾಕಲು ರಾಜ ಭವನ ಚಲೋ: ಸಂಸದ ಜಗದೀಶ ಶೆಟ್ಟರ್

Published : 31 ಆಗಸ್ಟ್ 2024, 23:30 IST
Last Updated : 31 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಕಲಬುರಗಿ: ‘ಬಿಜೆಪಿ ಅಧಿಕಾರ ಅವಧಿಯಲ್ಲಿನ ಸಚಿವರ ಮೇಲೆ ಮಾಡಿದ್ದ ಭ್ರಷ್ಟಾಚಾರದ ಹುಸಿ ಆರೋಪಗಳು, ಮುಡಾ ಪ್ರಕರಣದ ಸತ್ಯ ಸಂಗತಿಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ನವರು ಕುತಂತ್ರದ ರಾಜಭವನ ಚಲೋ ನಡೆಸಿದ್ದಾರೆ’ ಎಂದು ಸಂಸದ ಜಗದೀಶ ಶೆಟ್ಟರ್ ಟೀಕಿಸಿದರು.

ಇಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿಸಿದ ಸಂಬಂಧ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಕಾಂಗ್ರೆಸ್‌ನವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಹಿರಿಯ ವಕೀಲರ ಮೂಲಕ ವಾದ ಮಾಡಿಸುತ್ತಿದಾರೆ. ಇಂತಹ ಹೊತ್ತಿನಲ್ಲಿ ತಮ್ಮ ತಪ್ಪುಗಳನ್ನು ಮುಚ್ಚಿ ಹಾಕುವ ಕುತಂತ್ರದ ರಾಜಭವನ ಚಲೋ ಏಕೆ ಬೇಕಿತ್ತು’ ಎಂದು ಪ್ರಶ್ನಿಸಿದರು.

‘2009ರಲ್ಲಿ ನಿವೇಶನ ಅಭಿವೃದ್ಧಿಗಾಗಿ ಕೃಷಿಕರು ಜಮೀನು ನೀಡಲು ಮುಂದೆ ಬರಲಿಲ್ಲ. ಆಗ, ಪ್ರಾಧಿಕಾರವು ಅಭಿವೃದ್ಧಿಪಡಿಸಿದ ಜಮೀನಿನಲ್ಲಿ ಶೇ 50ರಷ್ಟನ್ನು ಭೂಮಾಲೀಕರಿಗೆ ಕೊಟ್ಟು, ಅವರ ಇಚ್ಛೆಯಂತೆ ಮಾರಲು ಅವಕಾಶ ನೀಡಿತ್ತು. ಸಿದ್ದರಾಮಯ್ಯ ಅವರ ಪತ್ನಿ, ‘ಮುಡಾ’ ಸ್ವಾಧೀನಪಡಿಸಿಕೊಂಡ ಅವರದ್ದೇ ಜಮೀನಿನಲ್ಲಿ ಶೇ 50ರಷ್ಟು ನಿವೇಶನಗಳನ್ನು ಪಡೆಯಲಿಲ್ಲ. ಅದರ ಬದಲಿಗೆ ಬೇರೆಯವರ ಜಮೀನಿನಲ್ಲಿನ ಬೆಲೆಬಾಳುವ ನಿವೇಶನಗಳನ್ನು ಪಡೆದಿದ್ದು ನಿಯಮಗಳ ಉಲ್ಲಂಘನೆ’ ಎಂದರು.

‘ಸಿದ್ದರಾಮಯ್ಯ ಅವರು ಸಾಚಾ ಆಗಿದ್ದರೆ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದ ಕೆಂಪಣ್ಣ ಆಯೋಗದ ವರದಿಯನ್ನು ಬಿಡುಗಡೆ ಮಾಡಲಿ. ನಾನೇನು ತಪ್ಪು ಮಾಡಿಲ್ಲ, ಪ್ರಾಮಾಣಿಕ ಎಂದು ಮಾತಿನಲ್ಲಿ ಹೇಳುವ ಬದಲು ವರದಿಯನ್ನು ಬಹಿರಂಗಪಡಿಸಿ ಸಾಚಾತನ ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದರು.

‘ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗಿದೆ. ಬಿಜೆಪಿಯ ಮಾಜಿ ಸಚಿವರ ಮೇಲೆ ಒಂದೇ ಒಂದು ಎಫ್‌ಐಆರ್ ಆಗಿಲ್ಲ, ಒಬ್ಬರನ್ನೂ ಬಂಧಿಸಿಲ್ಲ. ಕನಿಷ್ಠ ದಾಖಲೆಯೂ ಇಲ್ಲದೆ ಬರೀ ಮಾತನಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT