ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಜನತಾ ಪರೇಡ್: ಮಾರ್ದನಿಸಿದ ರೈತ ಧ್ವನಿ

Last Updated 26 ಜನವರಿ 2021, 9:27 IST
ಅಕ್ಷರ ಗಾತ್ರ

ಕಲಬುರ್ಗಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳು ಮತ್ತು ರಾಜ್ಯ ಸರ್ಕಾರದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗಳನ್ನು ಹಿಂಪಡೆಯವಂತೆ ಆಗ್ರಹಿಸಿ ನಗರದಲ್ಲಿ ಬೃಹತ್ ಜನತಾ ಪರೇಡ್ ಆರಂಭಿಸಲಾಗಿದೆ.

ಎಪಿಎಂಸಿ ತಿದ್ದುಪಡಿ ಕಾಯ್ದೆ, ಕನಿಷ್ಠ ಬೆಂಬಲ ಬೆಲೆ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಹೋರಾಟನಿತರ ರೈತರು ಗಣರಾಜ್ಯೋತ್ಸವ ದಿನವೇ ಟ್ರ್ಯಾಕ್ಟರ್ ರ್ಯಾಲಿಗೆ ಕರೆ ಕೊಟ್ಟಿದ್ದು, ಇದರ ಭಾಗವಾಗಿಯೇ ಸಂಯುಕ್ತ ಕಿಸಾನ್ ಮೋರ್ಚಾ ವೇದಿಕೆ ನೇತೃತ್ವದಲ್ಲಿ ಕಲಬುರಗಿಯಲ್ಲಿ ಜನತಾ ಪರೇಡ್ ನಡೆಸಲಾಗುತ್ತಿದೆ.

ಇಲ್ಲಿನ ಹುಮನಾಬಾದ್ ರಿಂಗ್ ರೋಡ್ ನಿಂದ ಪರೇ ಆರಂಭವಾಗಿದ್ದು, ನೂರಾರು ಟ್ರ್ಯಾಕ್ಟರ್ ಗಳು ಹಾಗೂ ಸಾವಿರಾರು ರೈತರು, ಕೂಲಿ ಕಾರ್ಮಿಕರು ಹಾಗೂ ಹಲವು ಮುಖಂಡರು ಪರೇಡ್ ನಲ್ಲಿ ಪಾಲ್ಗೊಂಡಿದ್ದಾರೆ. ನಗರದ ಮುಖ್ಯ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಯವರಗೆ ಸುಮಾರು ಆರು ಕಿ.ಮೀ. ಈ ಪರೇಡ್ ನಡೆಯಲಿದೆ‌. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

300ಕ್ಕೂ ಹೆಚ್ಚು ಟ್ರ್ಯಾಕ್ಟರುಗಳನ್ನು ಅಲಂಕಾರ ಮಾಡಿಕೊಂಡು ಬಂದ ರೈತರು ಪರೇಡ್ ನಲ್ಲಿ ಸಂಚರಿಸಿದರು.

ಹಲವು ಮಹಿಳೆಯರು ಟ್ರ್ಯಾಕ್ಟರುಗಳ ಎಂಜಿನ್ ಮೈ ಮೇಲಿರುವ ಟಾಪಿನಲ್ಲಿ ಏರಿ ಕಳಿತು ಘೋಷಣೆ ಮೊಳಗಿಸಿದರು.

ಮಾರ್ಗದುದ್ದಕ್ಕೂ ರೈತಗೀತೆ, ಹಂತಿ ಹಾಡು, ರಾಶಿ ಹಾಡು, ಕ್ರಾಂತಿಗೀತೆಗಳು ಮೊಳಗಿದವು.

ಕೇಂದ್ರ, ರಾಜ್ಯ ಸರ್ಕಾರ, ಪ್ರಧಾನಿ ಮೋದಿ ವಿರುದ್ಧ ಧಿಕ್ಕಾರ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT