ಶುಕ್ರವಾರ, ಆಗಸ್ಟ್ 6, 2021
25 °C

ಜಂಗಮಶೆಟ್ಟಿ ಪ್ರಶಸ್ತಿಗೆ ದೀಪಕ್, ಶಿವಯ್ಯಸ್ವಾಮಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ರಂಗಸಂಗಮ ಕಲಾ ವೇದಿಕೆ ವತಿಯಿಂದ ಪ್ರತಿವರ್ಷ ಕೊಡಮಾಡುವ ರಾಜ್ಯಮಟ್ಟದ 2020ನೇ ಸಾಲಿನ ಎಸ್.ಬಿ. ಜಂಗಮಶೆಟ್ಟಿ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ದೀಪಕ್ ಮೈಸೂರು ಮತ್ತು ಹಿರಿಯ ನಟ ಶಿವಯ್ಯಸ್ವಾಮಿ ಬಿಬ್ಬಳ್ಳಿ ಆಯ್ಕೆಯಾಗಿದ್ದಾರೆ. 

ನಟ, ನಿರ್ದೇಶಕ, ಸಂಘಟಕ ದೀಪಕ್ ಮೈಸೂರು ಸಂಚಲನ ಮೈಸೂರು ಸಂಸ್ಥೆಯ ಸ್ಥಾಪಕರಾಗಿದ್ದು ನೀನಾಸಂ ರಂಗಶಿಕ್ಷಣದ ಪದವೀಧರರಾಗಿದ್ದಾರೆ. ಸಾವಿರಕ್ಕೂ ಹೆಚ್ಚು ನಾಟಕಗಳ ನಿರ್ದೇಶನ ಮಾಡಿದ್ದಾರೆ. ನಾಟಕಗಳಲ್ಲಿ  ಅಭಿನಯಿಸಿದ್ದಾರೆ. ಕರ್ನಾಟಕದಲ್ಲಿ  ವಿಶೇಷವಾಗಿ ಆಯೋಜಿಸುವ ಸಂಚಲನ ಮಕ್ಕಳ ನಾಟಕೋತ್ಸವ ಮತ್ತು ಮಕ್ಕಳ ರಂಗ ಹಬ್ಬದ ರೂವಾರಿಯಾರಿದ್ದಾರೆ.

ಕಲಬುರ್ಗಿ ಜಿಲ್ಲೆ ಸೇಡಂ ತಾಲ್ಲೂಕಿನ ಬಿಬ್ಬಳ್ಳಿ ಗ್ರಾಮದ ಶಿವಯ್ಯ ಸ್ವಾಮಿ ಬಾಲ್ಯದಿಂದಲೇ ರಂಗಭೂಮಿಯತ್ತ ಆಕರ್ಷಿತರಾದವರು. ಗ್ರಾಮೀಣ ಭಾಗದ ನೂರಾರು ನಾಟಕಗಳಲ್ಲಿ ನಟರಾಗಿ, ನಿರ್ಮಾಪಕರಾಗಿ, ರಂಗ ಕಲೆಯ ಪೋಷಣೆಗೆ ಹಾಗೂ ರಂಗ ತಂಡಗಳ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. 

ಜಂಗಮಶೆಟ್ಟಿ ಪ್ರಶಸ್ತಿಯು ₹ 10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದ್ದು, ಜುಲೈ 18ರಂದು ನಡೆಯುವ ಕಾರ್ಯಕ್ರಮದಲ್ಲಿ  ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗ ಸಂಗಮ ಕಲಾವೇದಿಕೆಯ ಸಂಚಾಲಕಿ ಡಾ. ಸುಜಾತಾ ಜಂಗಮಶೆಟ್ಟಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು