ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೇವರ್ಗಿ | ಹಿಂದೂ ಧರ್ಮ ರಕ್ಷಣೆಗೆ ಸಂಕಲ್ಪ ಮಾಡಿ: ಮಾಶಾಳದ ಅಭಿನವ ಕೇದಾರ ಸ್ವಾಮೀಜಿ

ಹಿಂದೂ ಮಹಾಗಣಪತಿ ವಿಸರ್ಜನೆ ಸಭೆಯಲ್ಲಿ ಮಾಶಾಳ ಶ್ರೀ ಹೇಳಿಕೆ
Published : 25 ಸೆಪ್ಟೆಂಬರ್ 2024, 5:56 IST
Last Updated : 25 ಸೆಪ್ಟೆಂಬರ್ 2024, 5:56 IST
ಫಾಲೋ ಮಾಡಿ
Comments

ಜೇವರ್ಗಿ: ‘ಹಿಂದು ಧರ್ಮ ರಕ್ಷಣೆಗೆ ಸಂಘಟಿತ ಹೋರಾಟ ಮಾಡಬೇಕಿದ್ದು, ನಾವೆಲ್ಲರೂ ಸಂಕಲ್ಪ ತೊಡಬೇಕಿದೆ’ ಎಂದು ಮಾಶಾಳದ ಅಭಿನವ ಕೇದಾರ ಸ್ವಾಮೀಜಿ ಹೇಳಿದರು.

ತಾಲೂಕಿನ ಜೇರಟಗಿ ಗ್ರಾಮದಲ್ಲಿ ಸೋಮವಾರ ಸಂಜೆ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಹಿಂದೂ ಧರ್ಮಕ್ಕೆ ತನ್ನದೇ ಸಂಸ್ಕೃತಿ–ಪರಂಪರೆಯಿದೆ. ಆ ನಿಟ್ಟಿನಲ್ಲಿ ಧರ್ಮ ಪರಿಪಾಲನೆ ನಮ್ಮೆಲ್ಲರ ಕರ್ತವ್ಯವಾಗಿದೆ. ಬಾಲಗಂಗಾಧರ ತಿಲಕರು ಗಣೇಶ ಉತ್ಸವದ ಮೂಲಕ ದೇಶದ ಸ್ವಾತಂತ್ರ್ಯದ ಕಿಚ್ಚು ಎಲ್ಲೆಡೆ ಪಸರಿಸುವಂತೆ ಮಾಡಿದರು. ಹಿಂದೂಗಳ ರಕ್ಷಣೆಗೆ ಗಣೇಶ ಉತ್ಸವ ನೆರವಾಗಲಿದೆ’ ಎಂದು ಹೇಳಿದರು.

ಹಿಂದೂ ಮಹಾಗಣಪತಿ ಅಧ್ಯಕ್ಷ ಆನಂದ ದೇಸಾಯಿ ಮಾತನಾಡಿ, ‘ನಾಗಮಂಗಲದಲ್ಲಿ ಹಿಂದೂ ಮಹಾಗಣಪತಿ ಹಾಗೂ ಹಿಂದೂಗಳ ಮೇಲೆ ಕಲ್ಲು ತೂರಾಟ ನಡೆಸಿ, ಅಂಗಡಿಗಳನ್ನು ಸುಟ್ಟು ಹಾಕಿದ್ದಾರೆ. ಹಿಂದೂಗಳು ಒಂದಾಗದಿದ್ದರೆ, ನಿರಂತರ ಅನ್ಯಾಯವಾಗುತ್ತದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಒಂದಾದರೆ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ’ ಎಂದು ಹೇಳಿದರು.

ಹಿಂದೂ ಮಹಾಗಣಪತಿಯ ವಿಸರ್ಜನಾ ಶೋಭಾಯಾತ್ರೆಯಲ್ಲಿ ಶ್ರೀರಾಮ, ಹನುಮ, ಶಿವಾಜಿ ಮಹಾರಾಜರ ಹಾಗೂ ವಿವಿಧ ಮೂರ್ತಿಗಳು ಮೆರವಣಿಗೆಗೆ ಮೆರುಗು ತಂದವು.

ಬಿಜೆಪಿ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಜಿ.ಪಂ ಮಾಜಿ ಸದಸ್ಯ ರೇವಣಸಿದ್ದಪ್ಪ ಸಂಕಾಲಿ, ಅಮರ ಬಿಜಾಪುರ, ಸುರೇಶ ನೇದಲಗಿ, ಈಶ್ವರ ಹಿಪ್ಪರಗಿ, ಅಶೋಕ ವಿಜಯಪುರ, ಮಲ್ಲು ದಿವಾಣಿ, ರೇವಣಸಿದ್ದ ದೇಸಾಯಿ, ಚೇತನ, ಸಂಜು ಮಾಳಗಿ, ಚನ್ನಬಸು, ಸಿದ್ದು ಹಿಪ್ಪರಗಿ, ಶರಣು ಹೂಗಾರ, ಬಸವರಾಜ ದೇಸಾಯಿ, ಸಾಗರ ದೇಸಾಯಿ, ಚನ್ನಯ ವಸ್ತ್ರದ, ಚನ್ನಯ್ಯ ಇಜೇರಿ ಪಾಲ್ಗೊಂಡಿದ್ದರು.

ಹಿಂದೂ ಮಹಾಗಣಪತಿಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರು
ಹಿಂದೂ ಮಹಾಗಣಪತಿಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT