ಜೇವರ್ಗಿ: ‘ಪಟ್ಟಣದಲ್ಲಿರುವ ಕೇಂದ್ರ ಬಸ್ ನಿಲ್ದಾಣಕ್ಕೆ 17ನೇ ಶತಮಾನದ ಶ್ರೇಷ್ಠ ವಚನಕಾರ ಚರಚಕ್ರವರ್ತಿ ಷಣ್ಮುಖ ಶಿವಯೋಗಿಗಳ ಹೆಸರಿಡಬೇಕು’ ಎಂದು ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸುರೇಶ ಪಾಟೀಲ ನೇದಲಗಿ ಶಾಸಕರಿಗೆ ಒತ್ತಾಯಿಸಿದ್ದಾರೆ.

‘ಜೇವರ್ಗಿ ಅನೇಕ ಜನ ಶರಣರು, ಸಂತರು, ಸೂಫಿ ಸಂತರು ನಡೆದಾಡಿದ ಪುಣ್ಯಭೂಮಿ. ಜತೆಗೆ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಕೀರ್ತಿಯೂ ಸಲ್ಲುತ್ತದೆ. ವಚನ ಸಾಹಿತ್ಯದ ಕೊನೆಯ ಕೊಂಡಿ 17ನೇ ಶತಮಾನದ ಶರಣರೆಂದೆ ಕೀರ್ತಿ ಪಡೆದ ಷಣ್ಮುಖ ಶಿವಯೋಗಿಗಳ ಸ್ಮರಣೆಗಾಗಿ ಕೇಂದ್ರ ಬಸ್ ನಿಲ್ದಾಣಕ್ಕೆ ಹೆಸರಿಡುವ ಮೂಲಕ ಗೌರವ ಸೂಚಿಸಿಬೇಕೆನ್ನುವುದು ತಾಲ್ಲೂಕಿನ ಜನರ ಬಯಕೆಯಾಗಿದೆ’ ಎಂದು ತಿಳಿಸಿದ್ದಾರೆ.

‘ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಕೇಂದ್ರ ಬಸ್ ನಿಲ್ದಾಣಗಳಿಗೆ ಶರಣರ, ಸಂತರ, ಪೂಜ್ಯರ, ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನು ಇಟ್ಟಿರುವ ನಿದರ್ಶನಗಳಿದ್ದು, ಜೇವರ್ಗಿ ಕೇಂದ್ರ ಬಸ್ ನಿಲ್ದಾಣಕ್ಕೆ ಅದೇ ಮಾದರಿಯಲ್ಲಿ ನಾಮಕರಣ ಮಾಡಬೇಕು. ಈ ವಿಚಾರವಾಗಿ ಶೀಘ್ರವೇ ಶಾಸಕ ಡಾ.ಅಜಯಸಿಂಗ್ ಅವರನ್ನು ಭೇಟಿಯಾಗಿ ಯುವ ಬಳಗದಿಂದ ಮನವಿ ಸಲ್ಲಿಸಲಿದ್ದೇವೆ’ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-31-1727395787

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.