ಜೇವರ್ಗಿ: ಆರ್ಬಿಐನ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶಗಳನ್ನು ಸರಿಯಾಗಿ ಪಾಲಿಸದೆ ವಾಸವಾಗಿರುವ ಮನೆಯನ್ನು ಅಕ್ರಮವಾಗಿ ಜಪ್ತಿ ಮಾಡಿರುವ ಇಕ್ವಿಟಾಸ್ ಬ್ಯಾಂಕ್ ಸಿಬ್ಬಂದಿಯ ದೌರ್ಜನ್ಯವನ್ನು ಖಂಡಿಸಿ ಮಂಗಳವಾರ ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಬುಟ್ನಾಳ ರಸ್ತೆಯಲ್ಲಿರುವ ಇಕ್ವಿಟಾಸ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಸಿಪಿಐ ಜಿಲ್ಲಾ ಕಾರ್ಯದರ್ಶಿ ಮಹೇಶ ಕುಮಾರ ಮಾತನಾಡಿ, ‘ಇಕ್ವಿಟಾಸ್ ಬ್ಯಾಂಕ್ ರೈತರಿಗೆ, ಮಹಿಳೆಯರು ಹಾಗೂ ಜನಸಾಮಾನ್ಯರಿಗೆ ದುಂಬಾಲು ಬಿದ್ದು ಸಾಲ ಕೊಡುವುದಲ್ಲದೆ ದುಬಾರಿ ಬಡ್ಡಿ ವಿಧಿಸುತ್ತಿದೆ. ಅದಕ್ಕೆ ಇಎಂಐ ಕಟ್ಟಲು ಸ್ವಲ್ಪ ವಿಳಂಬವಾದರೂ ಆರ್ಬಿಐನ ಹಾಗೂ ರಾಜ್ಯ ಸರ್ಕಾರದ ನಿರ್ದೇಶನಗಳಿಗೆ ವಿರುದ್ಧವಾಗಿ ದಂಡ ಸುಲಿಗೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಇಎಂಐ ಕಟ್ಟಲು ವಿಫಲವಾದರೆ ಯಾವುದೇ ನೋಟಿಸ್ ನೀಡದೆ, ಕಾಲಾವಕಾಶ ಕೊಡದೇ ಏಕಾಏಕಿ ಮನೆಯನ್ನು ಜಪ್ತಿ ಮಾಡಲಾಗುತ್ತಿದೆ. ಇಂತಹ ಅಕ್ರಮವನ್ನು ನಡೆಸುತ್ತಿರುವ ಇಕ್ವಿಟಾಸ್ ಬ್ಯಾಂಕ್ನ ಜೇವರ್ಗಿ ಶಾಖೆಯನ್ನು ಮುಚ್ಚಬೇಕು’ ಎಂದು ಒತ್ತಾಯಿಸಿದರು.

‘ಆರ್ಬಿಐ ಹಾಗೂ ರಾಜ್ಯ ಸರ್ಕಾರವು ಖಾಸಗಿ ಫೈನಾನ್ಸ್ ಹಾಗೂ ಬ್ಯಾಂಕ್ಗಳಿಗೆ ಕೊಟ್ಟಿರುವ ನಿರ್ದೇಶನಗಳನ್ನು ಪಾಲಿಸದೆ ಜನರ ಮೇಲೆ ದೌರ್ಜನ್ಯ ಎಸಗಿ ಕಿರುಕುಳ ಕೊಡುತ್ತಿರುವ ಬ್ಯಾಂಕ್ ಸಿಬ್ಬಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಬ್ಯಾಂಕ್ನ ಪರವಾನಗಿಯನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ಮಲ್ಲಾಬಾದ ಏತ ನೀರಾವರಿ ರೈತ ಹೋರಾಟ ಸಮಿತಿ ಸಂಚಾಲಕ ಬಾಬು ಬಿ.ಪಾಟೀಲ ಮಾತನಾಡಿ, ‘ಒಂದೆಡೆ ಸರ್ಕಾರ, ಬ್ಯಾಂಕ್ಗಳು ರೈತರು, ಸಾರ್ವಜನಿಕರಿಗೆ ಸಾಲದ ನೆಪ ಹೇಳಿ ತೊಂದರೆ ಕೊಟ್ಟರೆ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ. ಆದ್ದರಿಂದ ಸರ್ಕಾರದ ನಿರ್ದೇಶನದ ವಿರುದ್ಧವಾಗಿ ನಡೆದುಕೊಂಡಿರುವ ಇಕ್ವಿಟಾಸ್ ಬ್ಯಾಂಕ್ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಆಗ್ರಹಿಸಿದರು.

ಆದರ್ಶ ಗ್ರಾಮ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಪಟೇಲ್ ಯಾಳವಾರ, ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಸೌಹಾರ್ದ ಸಮಿತಿಯ ಅಧ್ಯಕ್ಷ ಹಬೀಬ್ ಜಮಾದಾರ್ ಜೈನಾಪುರ ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಪರವಾಗಿ ಹೊರಡಿಸಿರುವ ಕಾನೂನುಗಳನ್ನು ಬ್ಯಾಂಕ್ ಉಲ್ಲಂಘಿಸುತ್ತಿದೆ. ಆ ಕಾರಣ ರಾಜ್ಯ ಸರ್ಕಾರ ಕೂಡಲೇ ಇಂತಹ ಬ್ಯಾಂಕ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಸಿಪಿಐ ತಾಲ್ಲೂಕು ಕಾರ್ಯದರ್ಶಿ ಮಹಮ್ಮದ್, ಕಲಬುರಗಿ ನಗರ ಕಾರ್ಯದರ್ಶಿ ಸಾಜಿದ್ ಅಹಮದ್ ಚೌದರಿ, ಸಹ ಕಾರ್ಯದರ್ಶಿ ರಾಘವೇಂದ್ರ ಹಂಗರಗಿ, ಮಲ್ಲಿಕಾರ್ಜುನ ಕಲ್ಲಹಂಗರಗಾ, ಸೈಯದ್ ಜಾಫರ್ ಹುಸೈನ್ ಆಂದೋಲ, ಮುಖಂಡರಾದ ಶಹಬುದ್ದೀನ್ ಕುಕನೂರ್, ಮಲ್ಲಣ್ಣ ಮುತ್ತಕೋಡ, ಶರಣಗೌಡ ಪೊಲೀಸ್ ಪಾಟೀಲ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.