ಜೇವರ್ಗಿ: ಯಡ್ರಾಮಿ ತಾಲ್ಲೂಕಿನ ಸುಕ್ಷೇತ್ರ ಕಾಖಂಡಕಿ ಗ್ರಾಮದ ಆರಾಧ್ಯ ದೈವ ಮಲ್ಲಾರಾಧ್ಯ ಹಾಗೂ ಕೋರಿಸಿದ್ಧೇಶ್ವರ ಜಾತ್ರಾ ಮಹೋತ್ಸವವು ಮೇ 16 ಮತ್ತು 17ರಂದು ಅದ್ದೂರಿಯಾಗಿ ಜರುಗಲಿದೆ.

ನಾಲವಾರದ ಕೋರಿಸಿದ್ಧೇಶ್ವರ ಮಠದ ಪೀಠಾಧಿಪತಿ ಸಿದ್ದತೋಟೇಂದ್ರ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ 11 ದಿನಗಳಿಂದ ಅಮರಯ್ಯ ಶಾಸ್ತ್ರಿ ಎರಡೋಣಿ ಅವರಿಂದ ರಟಕಲ್ ರೇವಣಸಿದ್ದೇಶ್ವರ ಪುರಾಣ ಕಾರ್ಯಕ್ರಮ ನಡೆಸಲಾಗುತ್ತಿದೆ.

16ರ ಶನಿವಾರದಂದು ಬಾದಾಮಿ ಅಮಾವಾಸ್ಯೆಯಂದು ರಾತ್ರಿ 8 ಗಂಟೆಗೆ ಜಾತ್ರಾ ಮಹೋತ್ಸವ ಉದ್ಘಾಟನೆ ಮತ್ತು ಮಾಸಿಕ ಶಿವಾನುಭವ ಚಿಂತನೆ ನಡೆಯಲಿದೆ. ನಂತರ ಭಕ್ತರಿಂದ ಶ್ರೀಗಳಿಗೆ ನಾಣ್ಯಗಳ ತುಲಾಭಾರ ಸೇವೆ ನಡೆಯುವುದು. ಮಧ್ಯರಾತ್ರಿ ಭಕ್ತರ ಹರಕೆಯ ತನಾರತಿ ಉತ್ಸವ ನಡೆಯಲಿದೆ.

17ರಂದು ಸಂಜೆ 6 ಗಂಟೆಗೆ ಮಲ್ಲಾರಾಧ್ಯ ಹಾಗೂ ಕೋರಿಸಿದ್ದೇಶ್ವರ ಭವ್ಯ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ರಥೋತ್ಸವಕ್ಕೂ ಮುಂಚೆ ವಿಶೇಷ ಮದ್ದು ಸುಡುವ ಕಾರ್ಯಕ್ರಮ ನೆರವೇರುವುದು. ನಂತರ ಸಿದ್ಧತೋಟೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜಾತ್ರಾ ಧರ್ಮಸಭೆ ಹಾಗೂ ತುಲಾಭಾರ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-31-833215691

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.