ಜೇವರ್ಗಿ: ‘ಜೇವರ್ಗಿ ಕಲ್ಯಾಣದ ಹೆಬ್ಬಾಗಿಲು, ಸಗರನಾಡಿನ ಶಕ್ತಿ ಕೇಂದ್ರ. ಷಣ್ಮುಖ ಶಿವಯೋಗಿಗಳು 750ಕ್ಕೂ ಅಧಿಕ ವಚನಗಳನ್ನು ರಚಿಸುವ ಮೂಲಕ ವಚನ ಸಾಹಿತ್ಯಕ್ಕೆ ಅದ್ವಿತೀಯ ಕೊಡುಗೆ ನೀಡಿದ್ದಾರೆ’ ಎಂದು ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಹೇಳಿದರು.

ಪಟ್ಟಣದ ಚರ ಚಕ್ರವರ್ತಿ ಷಣ್ಮುಖ ಶಿವಯೋಗಿಗಳ ವಿರಕ್ತಮಠದ ಆವರಣದಲ್ಲಿ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿರುವ ಶಿವಯೋಗಿಗಳ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದದರು.

ಷಣ್ಮುಖ ಶಿವಯೋಗಿಗಳ ಮಠದ ಜೀರ್ಣೋದ್ಧಾರದ ಕೆಲಸ ಭರದಿಂದ ಸಾಗಿದೆ. ಕಲ್ಯಾಣ ಮಂಟಪ ನಿರ್ಮಾಣಕ್ಕೆ ಈಗಾಗಲೇ ₹1 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿಯಾಗಿ ಇನ್ನೂ ₹1 ಕೋಟಿ ಅನುದಾನಕ್ಕೆ ಸಂಬಂಧಿಸಿದ ಸಚಿವರ ಜತೆ ಚರ್ಚಿಸಿ ಬಿಡುಗಡೆ ಮಾಡಲಾಗುವುದು’ ಎಂದರು.

ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಜಶೇಖರ ಸೀರಿ ಮಾತನಾಡಿ, ‘ದೇಶ ಸಂಚಾರ ಮಾಡಿ ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸುವ ಮೂಲಕ 17ನೇ ಶತಮಾನದಲ್ಲಿ ಷಣ್ಮುಖ ಶಿವಯೋಗಿಗಳು ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದರು.

ಬೆಳಗಾವಿ ಜಿಲ್ಲೆಯ ಬಸವಬೆಳವಿಯ ಶರಣಬಸವ ಸ್ವಾಮೀಜಿ ಪ್ರವಚನ ನೀಡಿದರು.

ಕಮಿಟಿ ಉಪಾಧ್ಯಕ್ಷ ಸೋಮಣ್ಣ ಕಲ್ಲಾ, ಕಾರ್ಯದರ್ಶಿ ಸಂಗಣಗೌಡ ಗುಳ್ಯಾಳ, ಷಣ್ಮುಖಪ್ಪ ಹಿರೇಗೌಡ, ಷಣ್ಮುಖಪ್ಪಗೌಡ ಮಾಲಿಪಾಟೀಲ, ಶಿವಣಗೌಡ ಪಾಟೀಲ ಹಂಗರಗಿ, ಶರಣಬಸವ ಕಲ್ಲಾ, ಸಿದ್ದು ಸಾಹು ಅರಳಿ, ಬಸವರಾಜ ಮದರಿ, ಸಿದ್ದಣಗೌಡ ಹಳಿಮನಿ, ಪ್ರೇಮಾನಂದ ಶೆಟಗಾರ, ಗುರುಲಿಂಗಯ್ಯಸ್ವಾಮಿ ಯನಗುಂಟಿ, ಬಸವರಾಜ ಶಿವಣ್ಣಿ, ತಿಪ್ಪಣ್ಣ ಭೂತಪೂರ, ಮಲ್ಕಣಗೌಡ ಹೆಗ್ಗಿನಾಳ, ರವಿ ಕೋಳಕೂರ, ನಾಗರಾಜ ಬುಟ್ನಾಳ, ಬಸವರಾಜ ಕಲ್ಲಾ, ಚಂದ್ರು ಸೀರಿ, ನಿಂಗಣ್ಣ ಹಳಿಮನಿ, ಅಮರ ಹಳ್ಳಿ, ಶಾಂತಪ್ಪ ಬಿರಾದಾರ, ವಿಜಯಕುಮಾರ ಬಡಿಗೇರ, ಪ್ರಕಾಶ ನಾಸಿ ಸೇರಿದಂತೆ ಅನೇಕರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-31-356928439

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.