ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇವರ್ಗಿ: ಕುರುಬ ಸಮಾಜದ ಸಮಾರಂಭ

Last Updated 14 ಜನವರಿ 2022, 7:04 IST
ಅಕ್ಷರ ಗಾತ್ರ

ಜೇವರ್ಗಿ: ಸಮಾಜದ ಅಭಿವೃದ್ಧಿಗೆ ಸಂಘಟಿತ ಹೋರಾಟ ಅಗತ್ಯ. ಆ ನಿಟ್ಟಿನಲ್ಲಿ ಸಮಾಜದ ಬಾಂಧವರು ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಕರ್ನಾಟಕ ಪ್ರದೇಶ ಕುರುಬ ಸಂಘದ ಯುವ ಘಟಕದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಭಗವಂತರಾಯಗೌಡ ಪಾಟೀಲ ಅಂಕಲಗಾ ಹೇಳಿದರು.

ಪಟ್ಟಣದ ಶ್ರೀಮಾಳಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ಕುರುಬ ಸಮಾಜದ ವತಿಯಿಂದ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಘಟನೆಯಿಂದ ಸಮಾಜದ ಅಭಿವೃದ್ಧಿಯಾಗಲು ಸಾಧ್ಯ. ಆ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಕುರುಬ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸರ್ಕಾರದ ಸೌಲಭ್ಯಗಳನ್ನು ಸಮಾಜದ ಪ್ರತಿ ಮನೆಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದರು.

ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ನಾಗಣ್ಣ ಗಡ್ಡದ್ ನರಿಬೋಳ, ನೆಲೋಗಿ ಗ್ರಾ.ಪಂ. ಅಧ್ಯಕ್ಷ ಬೈಲಪ್ಪ ನೇದಲಗಿ, ಮುಖಂಡರಾದ ಸಮಾಧಾನ ಪೂಜಾರಿ, ನಿಂಗಣ್ಣ ಭಂಡಾರಿ, ರಾಮಣ್ಣ ಪೂಜಾರಿ, ಈರಣ್ಣ ನರಿಬೋಳ, ಶರಣಗೌಡ ಸರಡಗಿ, ರಾಜು ರದ್ದೇವಾಡಗಿ, ಸಂತೋಷ ಮಲ್ಲಾಬಾದ, ಸಿದ್ರಾಮ ಗಡ್ಡದ್, ಚಂದ್ರಶೇಖರ ನೇರಡಗಿ, ರಾಜು ಮುತ್ತಕೋಡ, ಮಾಳು ಹಿಪ್ಪರಗಿ, ಶಿವಶರಣಪ್ಪ ಮಂದೇವಾಲ, ಕರೆಪ್ಪ ಪೂಜಾರಿ ಕಣಮೇಶ್ವರ, ನಿಂಗಣ್ಣ ರದ್ಧೇವಾಡಗಿ, ರಾಜು ವರವಿ, ಪ್ರಕಾಶ ಪೂಜಾರಿ, ಶಂಕರಲಿAಗ ಕರಕಿಹಳ್ಳಿ, ಶರಣು ಹಂಗರಗಿ, ಮಲ್ಲಿಕಾರ್ಜುನ ಗಂವ್ಹಾರ, ಬೀರು ಕುನ್ನೂರ, ಶಿವು ಇಟಗಾ, ಶರಣು ಚನ್ನೂರ, ದೇವು ಹೆಗ್ಗಿನಾಳ, ಮಾಳು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT