ಜೇವರ್ಗಿ: ಪಟ್ಟಣದ ಲಕ್ಕಪ್ಪ ಲೇಔಟ್, ಖಾಜಾ ಕಾಲೊನಿ, ವಿದ್ಯಾನಗರ, ಶಾಂತನಗರ ಸೇರಿದಂತೆ ಕೊಳಚೆ ಪ್ರದೇಶಗಳ ಬಡಾವಣೆಗಳಲ್ಲಿ ಸ್ವಚ್ಛತೆ ಮಾಡದ ಕಾರಣ ಚರಂಡಿಗಳಲ್ಲಿ ಕಲುಷಿತ ನೀರು ತುಂಬಿ ವಾತಾವರಣ ಗಬ್ಬೆದ್ದು ಹೋಗಿದೆ.

ಪಟ್ಟಣದ ಲಕ್ಷ್ಮಿ ಚೌಕ್ ಬಡಾವಣೆಯ ಜಹಾಗೀರದಾರ ಮನೆಯ ಹತ್ತಿರ ಕಸದ ಗುಡ್ಡೆ ಬಿದ್ದಿದ್ದು, ಮಹಾಲಕ್ಷ್ಮಿ ದೇವಸ್ಥಾನ, ಷಣ್ಮುಖ ಶಿವಯೋಗಿಗಳ ಮಠ, ಕೋನಮಿರುದ್ದೀನ್ ದರ್ಗಾಕ್ಕೆ ಹೋಗುವ ಭಕ್ತರಿಗೆ ತೀರಾ ತೊಂದರೆಯಾಗುತ್ತಿದೆ.

ಶಾಸ್ತ್ರಿ ಚೌಕ್ ಬಡಾವಣೆಯ ಶೌಚಾಲಯ ಹತ್ತಿರ ನಡು ರಸ್ತೆಯ ಮೇಲೆ ಕಸದ ಗುಡ್ಡೆ, ಜೆಟಿವಿಪಿ ಶಾಲೆ ಹತ್ತಿರ ರಸ್ತೆ ಮೇಲೆ ಕಸ ಹಾಗೂ ಮಹಿಳೆಯರು ಮಲಮೂತ್ರ ವಿಸರ್ಜನೆ ಮಾಡಲಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ತಿಳಿ ಹೇಳುವ ಕೆಲಸ ಪುರಸಭೆ ಮಾಡುತ್ತಿಲ್ಲ.

ಕನಕದಾಸ ವೃತ್ತದ ಹತ್ತಿರ, ದತ್ತನಗರ 1 ಮತ್ತು 2ನೇ ಗೇಟ್, ಗುಳಗಿ ವಕೀಲ ಮನೆ ಹತ್ತಿರ ಹದಗೆಟ್ಟು ಹೋದ ಚರಂಡಿಗಳು, ಮುಖ್ಯ ರಸ್ತೆಗಳಲ್ಲಿ ಕಸದ ರಾಶಿಗಳು ಬಿದ್ದಿದು, ಇದರಿಂದ ರೋಗ ರುಜಿನಿಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಕ್ರಮಕೈಗೊಂಡು ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ.

ಮಳೆಗಾಲ ಪ್ರಾರಂಭವಾಗಿ ಸೊಳ್ಳೆಗಳು ಹೆಚ್ಚಾಗಿದ್ದು, ಇದರಿಂದ ಸಾಂಕ್ರಾಮಿಕ ರೋಗಗಳಾದ ಡೆಂಗಿ, ಚಿಕನ್ಗುನ್ಯಾ, ಮಲೇರಿಯಾಯಾದಂತಹ ಕಾಯಿಲೆಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಮತ್ತು ಸಾರ್ವಜನಿಕರೊಂದಿಗೆ ಸೇರಿ ರೋಗದ ಬಗ್ಗೆ ಅರಿವು ಮೂಡಿಸಬೇಕಾಗಿದೆ.

ಸರ್ಕಾರ ಪಟ್ಟಣದ ಅಭಿವದ್ಧಿ, ಶುಚಿತ್ವ ಕಾಪಾಡಲು ಹಾಗೂ ನಾಗರಿಕರ ಆರೋಗ್ಯ ರಕ್ಷಣೆ, ನೈರ್ಮಲ್ಯಕ್ಕಾಗಿ ಕೋಟ್ಯಂತರ ಹಣ ವೆಚ್ಚ ಮಾಡುತ್ತಿದೆ. ಆದರೆ, ಈ ಯೋಜನೆಗಳ ಫಲ ಜನತೆಗೆ ತಲುಪಿಲ್ಲ ಅನ್ನೋದಕ್ಕೆ ಜೇವರ್ಗಿ ಪಟ್ಟಣವೇ ಸಾಕ್ಷಿಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-31-581208942

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.