ಜೇವರ್ಗಿ: ನಿವೃತ್ತ ನೌಕರರ ಮೇಲೆ ಕೇಂದ್ರ ಸರ್ಕಾರದ ನೀತಿ ಖಂಡಿಸಿ ಪಟ್ಟಣದಲ್ಲಿ ಅಖಿಲ ಭಾರತ ನಿವೃತ್ತ ನೌಕರರ ಫೆಡರೇಷನ್ ಹಾಗೂ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಕೇಂದ್ರ ಸಂಘದ ಪದಾಧಿಕಾರಿಗಳು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪಟ್ಟಣದ ನಿವೃತ್ತ ನೌಕರರ ಭವನದಿಂದ ತಹಶೀಲ್ದಾರ್ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ನಿವೃತ್ತ ನೌಕರರು ಎಡಗೈಗೆ ಕಪ್ಪು ಪಟ್ಟಿ ಧರಿಸಿ, ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿವೃತ್ತ ನೌಕರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ನಿವೃತ್ತಿ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಮಾಡಿ, ವಾರ್ಷಿಕವಾಗಿ ನೀಡುತ್ತಿದ್ದ 2 ತುಟ್ಟಿ ಭತ್ಯೆ ಕಡಿತ ಮಸೂದೆ ಮಂಡನೆ ಮಾಡಿದರು. ಜೊತೆಗೆ ಸಂಸತ್ತಿನಲ್ಲಿ ಕಾಯ್ದೆಗೆ ಒಪ್ಪಿಗೆ ಪಡೆದಿದ್ದಾರೆ. ಇದು ಖಂಡನೀಯ ಎಂದು ಆಕ್ರೋಶ ಹೊರಹಾಕಿದರು.

ನಿವೃತ್ತ ನೌಕರರ ಸಂಘದ ಗೌರವ ಅಧ್ಯಕ್ಷ ಚಂದಪ್ಪ, ಅಧ್ಯಕ್ಷ ಡಿ.ಬಿ. ಪಾಟೀಲ, ಉಪಾಧ್ಯಕ್ಷ ಈರಯ್ಯ ಹಿರೇಮಠ, ಕಂಠೆಪ್ಪ ಹರವಾಳ, ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ, ಜಂಟಿ ಕಾರ್ಯದರ್ಶಿ ಬಸಯ್ಯ ಸ್ವಾಮಿ, ಬಸವರಾಜ ಹವಾಲ್ದಾರ ಬಳಬಟ್ಟಿ, ಸಿದ್ದಣ್ಣ ಚೂರಿ, ಮಹಮ್ಮದ್ ಮಶಾಕಸಾಬ ರಾವೂರಕರ್, ತಿಪ್ಪಣ್ಣ ದೊಡ್ಮನಿ, ರಾಮಣ್ಣ ಹೂಗಾರ, ಅಶೋಕ ಸನಗುಂದಿ, ಕರೀಮಸಾಬ ಕೂಡಿ, ರಾಜಶೇಖರ ಧನರೆಡ್ಡಿ, ಟಿ.ಬಿ.ಲಮಾಣಿ, ಎಸ್.ಎಸ್. ಮಾಲಿ ಬಿರಾದಾರ, ಕರಬಸಪ್ಪ ಯಲಗೋಡ, ಸಿದ್ದಣ್ಣ ಅಟ್ಟದಮನಿ, ಬಂದಗಿಸಾಬ್ ಕೆಂಭಾವಿ, ಬಾಬು ಬಾಳಿಕಾಯಿ, ಮಲ್ಲಿಕಾರ್ಜುನ ಹೂಗಾರ, ಬಿ.ಜಿ. ಹೂಗಾರ, ಸೋಮಪ್ಪ ಕರಕಿಹಳ್ಳಿ, ಎಸ್.ಬಿ. ಕಮತಗಿ, ಪೈಗಂಬರ್ ಪಾಶಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-31-510930837

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.