ಜೇವರ್ಗಿ: ಪಟ್ಟಣದ ತಾಲ್ಲೂಕು ಕ್ರೀಡಾಂಗಣ ಸೌಲಭ್ಯಗಳಿಲ್ಲದೇ ನರಳುತ್ತಿದೆ. ಕ್ಷೇತ್ರದ ಶಾಸಕ ಡಾ.ಅಜಯ್ ಸಿಂಗ್ ಅವರು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದರೂ ಕ್ರೀಡಾಂಗಣ ಅಭಿವೃದ್ಧಿ ಕಂಡಿಲ್ಲ.

ಪಟ್ಟಣದ ಹೊರವಲಯದ ತಾಲ್ಲೂಕು ಕ್ರೀಡಾಂಗಣ ಕಿಡಿಗೇಡಿಗಳ ತಾಣವಾಗಿದೆ. ಸಂಜೆಯಾಯಿತೆಂದರೆ ಇಲ್ಲಿ ನಡೆಯವ ಅನೈತಿಕ ಚಟುವಟಿಕೆಗಳಿಗೆ ಮಿತಿಯಿಲ್ಲ. ಭದ್ರತಾ ಸಿಬ್ಬಂದಿಯೇ ಇಲ್ಲದೆ ನರಳುತ್ತಿರುವ ಕ್ರೀಡಾಂಗಣ ಅವ್ಯವಸ್ಥೆಯ ಆಗರವಾಗಿದೆ. ಕ್ರೀಡಾಂಗಣದ ಆವರಣದಲ್ಲಿ ಸುಸಜ್ಜಿತ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಜನರು ಕ್ರೀಡಾಂಗಣದ ಗೋಡೆಗಳನ್ನು ಶೌಚಕ್ಕೆ ಬಳಸುತ್ತಿದ್ದಾರೆ. ಕ್ರೀಡಾಂಗಣದ ಆವರಣದಲ್ಲಿರುವ ಜಿಮ್ ಸೇರಿದಂತೆ ಹಲವು ಕಟ್ಟಡಗಳು ಬಳಸಲು ಯೋಗ್ಯವಾಗಿಲ್ಲ.

ಕ್ರೀಡಾಂಗಣದಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ರಾತ್ರಿ ಬೆಳಕಿನ ವ್ಯವಸ್ಥೆ ಕೂಡ ಇಲ್ಲ. ಹೀಗಾಗಿ ಮಹಿಳಾ ಕ್ರೀಡಾಪಟುಗಳು ಇತ್ತ ಬರುವುದನ್ನೇ ನಿಲ್ಲಿಸಿದ್ದಾರೆ.

ಹತ್ತಾರು ಎಕರೆ ಪ್ರದೇಶದಲ್ಲಿ ಇರುವ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿಗೆ ಚಾವಣಿ ಇಲ್ಲದೆ ಮಳೆ ಮತ್ತು ಬಿಸಿಲಿನಲ್ಲಿ ಕುಳಿತು ಆಟಗಳನ್ನು ವೀಕ್ಷಣೆ ಮಾಡಬೇಕಿದೆ. ಪ್ರತಿ ಬಾರಿ ರಾಷ್ಟ್ರೀಯ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಜನರು ಕಾರ್ಯಕ್ರಮ ವೀಕ್ಷಣೆ ಮಾಡಲು ಪರದಾಡಬೇಕಾಗಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ಯುವಕರು, ಮಹಿಳೆಯರು ಸೇರಿದಂತೆ ಹಿರಿಯ ನಾಗರಿಕರು ವಾಯು ವಿಹಾರಕ್ಕೆ ತಾಲ್ಲೂಕು ಕ್ರೀಡಾಂಗಣವನ್ನು ಅವಲಂಬಿಸಿದ್ದಾರೆ. ಆದರೆ, ಕ್ರೀಡಾ ಇಲಾಖೆ ಸೌಲಭ್ಯ ನೀಡಲು ಸಂಪೂರ್ಣವಾಗಿ ವಿಫಲವಾಗಿದೆ. ಮಳೆ ಬಂದರೆ ಕ್ರೀಡಾಂಗಣದ ಆವರಣ ಕೆಸರುಗದ್ದೆ ಆಗುತ್ತದೆ. ಮಳೆ ದಿನಗಳನ್ನು ಹೊರತು ಪಡಿಸಿ ಸೆಪ್ಟೆಂಬರ್ ತಿಂಗಳಿನಿಂದ ಮೇ ಅಂತ್ಯದವರೆಗೂ ವಿವಿಧ ಕ್ರೀಡಾಕೂಟಗಳು ಮತ್ತು ಕ್ರೀಡಾ ಶಿಬಿರಗಳು ಈ ಮೈದಾನದಲ್ಲಿ ನಡೆಯುತ್ತಿರುತ್ತವೆ. ಆದರೆ, ಇಲ್ಲಿ ಬಟ್ಟೆ ಬದಲಿಸುವ ಕೋಣೆಗಳಿಲ್ಲ, ಸುಸಜ್ಜಿತ ಶೌಚಾಲಯದ ವ್ಯವಸ್ಥೆ ಇಲ್ಲ. ಇದರಿಂದ ಬಾಲಕಿಯರು ಹಾಗೂ ಮಹಿಳಾ ಕ್ರೀಡಾಪಟುಗಳು ಹೆಚ್ಚು ಕಷ್ಟ ಮತ್ತು ಮುಜುಗರ ಅನುಭವಿಸುವಂತಾಗಿದೆ.

‘ಡಾ.ಅಜಯಸಿಂಗ್ ಅವರು ವಿವಿಧ ಸಭೆ ಸಮಾರಂಭ ಹಾಗೂ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ತಾಲ್ಲೂಕಿನ ಯುವಜನರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ರೀತಿಯಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡಲಾಗುವುದು ಎಂದು ಸಾಕಷ್ಟು ಬಾರಿ ಹೇಳಿದ್ದರು. ಆದರೆ, ಕ್ರೀಡೆಗೆ ಅವಶ್ಯಕವಾಗಿರುವ ಕ್ರೀಡಾಂಗಣ ಅಭಿವೃದ್ಧಿಪಡಿಸುವಲ್ಲೇ ಅವರು ವಿಫಲವಾಗಿದ್ದಾರೆ’ ಎಂಬುದು ಕ್ರೀಡಾಸಕ್ತರ ಆರೋಪ.

ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್, ವಾಲಿಬಾಲ್, ಕ್ರಿಕೆಟ್, ಕಬಡ್ಡಿ, ಕೊಕ್ಕೊ, ನೆಟ್ಬಾಲ್, ಥ್ರೋ ಬಾಲ್ ಕೋರ್ಟ್, ಅಥ್ಲೆಟಿಕ್ಸ್ ಟ್ರ್ಯಾಕ್ ಇಲ್ಲದ ಕಾರಣ ಮಕ್ಕಳು ಕ್ರೀಡೆಗಳನ್ನೇ ಮರೆತು ವಿಡಿಯೊ ಗೇಮ್ಗಳತ್ತ ಮುಖ ಮಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿರುವ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಿದರೆ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಗಳಲ್ಲಿ ಭಾಗವಹಿಸಿ ತಾಲ್ಲೂಕಿನ ಗೌರವ ಹೆಚ್ಚಿಸು ತ್ತಾರೆ ಎನ್ನುವುದು ಕ್ರೀಡಾಸಕ್ತರ ನುಡಿ.

ಉದ್ದ ಜಿಗಿತ ಅಂಕಣಕ್ಕೆ ಒಂದು ಲೋಡ್ ಮರಳು ಸಹ ಹಾಕಿಸಿಲ್ಲ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಬಂದಾಗಷ್ಟೇ ಕ್ರೀಡಾಂಗಣ ದುರಸ್ತಿ ಮಾಡುತ್ತಾರೆ. ರಾಷ್ಟ್ರೀಯ ಹಬ್ಬ ಆಚರಣೆಯನ್ನು ಕ್ರೀಡಾಂಗಣದಲ್ಲಿ ಆಚರಿಸುವ ಕಾರಣ ಮಣ್ಣು ಸುರಿದು ಸರಿ ಮಾಡುತ್ತಾರೆ.

ಕ್ರೀಡಾಂಗಣ ಅತ್ಯಂತ ವಿಶಾಲವಾಗಿದೆ. ಆದರೆ, ಸೌಲಭ್ಯಗಳು ಇಲ್ಲದ ಕಾರಣ ಕ್ರೀಡಾಪಟುಗಳಿಗೆ ಉಪಯೋಗಕ್ಕೆ ಬರುತ್ತಿಲ್ಲ. ಹೊರಾಂಗಣ ಕ್ರೀಡಾಂಗಣಕ್ಕೆ 5 ಗೇಟ್ಗಳನ್ನು ನಿರ್ಮಿಸಲಾಗಿದೆ. 25 ಸಾವಿರ ಜನ ಕೂಡಲು ಆಸನ ವ್ಯವಸ್ಥೆ ಮಾಡಲಾಗಿದೆ. ವಿಐಪಿ ಗ್ಯಾಲರಿ ಇದೆ. ಪ್ರತಿ ದಿನ ಸುಮಾರು 150ರಿಂದ 250 ಕ್ರೀಡಾಪಟುಗಳು ಕ್ರೀಡಾಂಗಣಕ್ಕೆ ಬರುತ್ತಾರೆ. ಸಾರ್ವಜನಿಕರು ಪ್ರತಿದಿನ ಬೆಳಿಗ್ಗೆ ವ್ಯಾಯಾಮ ಮಾಡಲು ಬರುತ್ತಾರೆ.

ಭಾರಿ ಗಾಳಿ ಮಳೆಗೆ ಕುಸಿದಿದ್ದ ಚಾವಣಿ

ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿ ಚಾವಣಿ ಕುಸಿದು ಬಿದ್ದು ದೊಡ್ಡ ಅವಘಡ ಸಂಭವಿಸಿದೆ.

ಕ್ರೀಡಾಂಗಣದ ಅರ್ಧ ಭಾಗಕ್ಕೂ ಹೆಚ್ಚು ಗ್ಯಾಲರಿ ಚಾವಣಿ, ವಿಐಪಿ ಗ್ಯಾಲರಿ ಚಾವಣಿ, ಸಿಮೆಂಟ್ ಕಾಂಕ್ರೀಟ್ ತಡೆಗೋಡೆ, ಸ್ಟೀಲ್ ಕಂಬಗಳು ನೆಲಕ್ಕುರುಳಿ ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಕಳೆದ ವರ್ಷದ ಹಿಂದೆ ಈ ಕ್ರೀಡಾಂಗಣ ಉದ್ಘಾಟಿಸಲಾಗಿತ್ತು. ಆದರೆ, ಅಕಾಲಿಕ ಮಳೆಗೆ ಚಾವಣಿ ಕುಸಿದು ಬಿದ್ದಿರುವುದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ರೀಡಾಂಗಣದ ಚಾವಣಿ ಹಾನಿ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಕ್ರಿಯಾಯೋಜನೆ ಸಿದ್ಧಪಡಿಸಿ ಕ್ರೀಡಾಂಗಣ ಅಭಿವೃದ್ಧಿಗೆ ಒತ್ತು ನೀಡಲಾಗುವುದು.
– ಮಲ್ಲಣ್ಣ ಯಲಗೋಡ, ತಹಶೀಲ್ದಾರ್, ಜೇವರ್ಗಿ

ಈಜುಕೊಳ, ಒಳಾಂಗಣ ಕ್ರೀಡಾಂಗಣದಲ್ಲಿ ಮ್ಯಾಟ್ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಹಾಗೂ ಪ್ರೇಕ್ಷಕರ ಗ್ಯಾಲರಿಗೆ ಸುಸಜ್ಜಿತವಾದ ಚಾವಣಿ ಅಳವಡಿಸಬೇಕು.
– ಬಸವರಾಜ ಸಾಸಬಾಳ, ಕ್ರೀಡಾಪ್ರೇಮಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-34-1913332666

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.