ಜೇವರ್ಗಿ: ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಗೊಲ್ಲಾಳಪ್ಪ ಯಾತನೂರ ನೇತೃತ್ವದ ಶಿಕ್ಷಕ ಸ್ನೇಹಿ ಪೆನಾಲ್ ಭರ್ಜರಿ ಗೆಲುವು ಸಾಧಿಸಿದೆ.

ಪಟ್ಟಣದ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮತದಾನದಲ್ಲಿ ಒಟ್ಟು 8 ಸ್ಥಾನಗಳಿಗೆ ನಡೆದ ಸ್ಪರ್ಧೆಯಲ್ಲಿ ಶಿಕ್ಷಕರ ಸ್ನೇಹಿ ಪೆನಾಲ್ನ 7 ಜನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಎದುರಾಳಿ ಮರೆಪ್ಪ ಮೂಲಿಮನಿ ನೇತೃತ್ವದ ಕ್ರಿಯಾಶೀಲ ಪೆನಾಲ್ ಸೋಲು ಕಂಡಿದೆ.

ತಾಲ್ಲೂಕಿನ ಒಟ್ಟು 386 ಶಿಕ್ಷಕ ಮತದಾರರಲ್ಲಿ 359 ಜನ ಮತ ಚಲಾಯಿಸಿದ್ದರು. ಮಹಿಳಾ ಅಭ್ಯರ್ಥಿಗಳ ವಿಭಾಗದಲ್ಲಿ ನಾಗಮ್ಮ ಭೂತಪೂರ 219 ಮತ, ಪುರುಷರ ವಿಭಾಗದಲ್ಲಿ ಕಾಸಯ್ಯ ಗುತ್ತೇದಾರ 241 ಮತ ಪಡೆದರು.

ಜಯಶ್ರೀ ಕಟ್ಟಿಸಂಗಾವಿ 216 ಮತ, ಸುಮಿತ್ರಾ ಎಚ್.ಎಂ 175, ಗೊಲ್ಲಾಳಪ್ಪ ಯಾತನೂರ 208, ಬನ್ನೆಪ್ಪ ಜೋಗಿ 205, ಮಲ್ಲಣ್ಣ ಭಂಗಾರಿ 177, ಮರೆಪ್ಪ ಮೂಲಿಮನಿ 171 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಬಸಣ್ಣ ಬಬಲಾದಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-31-734849774

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.