ಶುಕ್ರವಾರ, ನವೆಂಬರ್ 22, 2019
23 °C

ಕಲಬುರ್ಗಿ: ಅ. 22ರಂದು ಉದ್ಯೋಗ ಮೇಳ

Published:
Updated:

ಕಲಬುರ್ಗಿ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಅ. 22ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಮೇಳದಲ್ಲಿ ಭಾಗವಹಿಸುವ ಕಂಪನಿಗಳ ವಿವರ ಇಂತಿದೆ: ಕಲಬುರ್ಗಿ ಕ್ರೋಮ್ ಟೆಲೆ ಸರ್ವಿಸಿಸ್‌ನಲ್ಲಿ (ಮಹಿಳೆಯರು ಮಾತ್ರ) ಟೆಲಿ ಕಾಲರ್ 15 ಹುದ್ದೆಗಳಿಗೆ ಬಿ.ಬಿ.ಎಂ., ಬಿ.ಸಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಎ. ಪಾಸಾಗಿರಬೇಕು. ವಯೋಮಿತಿ 18 ರಿಂದ 30. ಅನ್ನಪೂರ್ಣ ಮೈಕ್ರೋ ಫೈನಾನ್ಸ್‌ನಲ್ಲಿ ಫೀಲ್ಡ್ ಕ್ರೆಡಿಟ್ ಆಫೀಸರ್ 100 ಹುದ್ದೆಗಳಿಗೆ (ಪುರುಷರಿಗೆ ಮಾತ್ರ) ಪಿಯುಸಿ ಮತ್ತು ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 28.

ಬೆಂಗಳೂರಿನ ಎನ್.ಟಿ.ಟಿ.ಎಫ್.ನಲ್ಲಿ ಪೋಸ್ಟ್ ಡಿಪ್ಲೊಮಾ ಇನ್ ಏರೋಸ್ಪೆಸ್ ಇಂಟರ್ ಕನೆಕ್ಟ್ ಸಲ್ಯೂಷನ್‌ನಲ್ಲಿ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಟ್ರೇನಿಂಗ್ ನೀಡಲಾಗುತ್ತದೆ. ಅಭ್ಯರ್ಥಿಗಳು ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿ, ಮೆಕಾಟ್ರೋನಿಕ್ಸ್ ವಿದ್ಯಾರ್ಹತೆ ಹೊಂದಿರಬೇಕು.

ಧಾರವಾಡ ಕರಾವಳಿ ಟೀಚರ್ಸ್‌ ಹೆಲ್ಪ್‌ಲೈನ್‌ನಲ್ಲಿ ಶಿಕ್ಷಕರ ಹುದ್ದೆಗೆ ಪದವಿ ಮತ್ತು ಸ್ನಾತಕೋತ್ತರ ಪದವಿ ಜೊತೆಗೆ ಬಿ.ಇಡಿ ಮತ್ತು ಡಿ.ಇಡಿ ಪಾಸಾಗಿರಬೇಕು. ವಯೋಮಿತಿ 20 ರಿಂದ 40. ಕಲಬುರ್ಗಿಯ ಐ.ಸಿ.ಐ.ಸಿ.ಐ. ಬ್ಯಾಂಕ್‌ ಶಾಖೆಯಲ್ಲಿ ಬ್ರ್ಯಾಂಚ್ ರಿಲೇಶನ್‌ಷಿಪ್‌ ಮ್ಯಾನೇಜರ್, ಸೇಲ್ಸ್ ಆಫೀಸರ್ ಹುದ್ದೆಗಳಿಗೆ (ಎಂಜಿನಿಯರಿಂಗ್ ಮತ್ತು ಎಂ.ಬಿ.ಎ. ಹೊರತುಪಡಿಸಿ) ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 26. ಕೋಟಾಕ ಮಹೀಂದ್ರ ಬ್ಯಾಂಕ್‌ನಲ್ಲಿ ಅಸಿಸ್ಟಂಟ್ ಅಕ್ವಿಸಿಷನ್ ಮ್ಯಾನೇಜರ್ (ಎಎಎಂ) ಹುದ್ದೆಗೆ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 30. ಬೆಂಗಳೂರಿನ ಡಾ. ರೆಡ್ಡಿಸ್ ಫೌಂಡೇಶನ್‌ನಲ್ಲಿ ವಿವಿಧ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ. ಹಾಗೂ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಅಂಗವಿಕಲರು ಮಾತ್ರ ಭಾಗವಹಿಸಬೇಕು. ವಯೋಮಿತಿ 18 ರಿಂದ 35.

ಆಸಕ್ತರು ಬಯೋಡಾಟಾ ಹಾಗೂ ಆಧಾರ್‌ ಕಾರ್ಡ್‌ನೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದೋಗ ವಿನಿಮಯ ಕಚೇರಿ ಅಥವಾ 08472-274846ಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರತಿಕ್ರಿಯಿಸಿ (+)