ಆಳಂದ: ತಾಲ್ಲೂಕಿನ ಕಡಗಂಚಿ ಗ್ರಾಮದ ಆರಾಧ್ಯದೈವ ಶಾಂತಲಿಂಗೇಶ್ವರ ದೇವರ 396ನೇ ಜಾತ್ರೆ ಅಂಗವಾಗಿ ಬುಧವಾರ ರಥೋತ್ಸವ ಸಂಭ್ರಮದಿಂದ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಶಾಂತಲಿಂಗೇಶ್ವರ ದೇವರ ಮೂರ್ತಿ ಪಲ್ಲಕ್ಕಿ ಉತ್ಸವವು ಗ್ರಾಮದ ಮುಖ್ಯಬೀದಿಗಳ ಮೂಲಕ ರಥೋತ್ಸವ ಸ್ಥಳಕ್ಕೆ ಆಗಮಿಸಿತು. ಈ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಜನ ಪುರವಂತರ ಕುಣಿತವು ಗಮನ ಸೆಳೆಯಿತು. ಭಾಜಾ ಭಜಂತ್ರಿ ಮತ್ತು ಸಾಂಪ್ರದಾಯಿಕ ವಾದ್ಯಗಳ ಸಡಗರದ ಮುಂದೆ ಯುವಕರ ಕುಣಿತ, ಉತ್ಸಾಹವೂ ಜೋರಾಗಿತ್ತು.

ಪೀಠಾಧಿಪತಿ ವೀರಭದ್ರ ಶ್ರೀಗಳು ಪುಷ್ಪಾಲಂಕೃತವಾದ ಮಹಾರಥಕ್ಕೆ ಪೂಜೆ ಸಲ್ಲಿಸಿದ ನಂತರ ಭಕ್ತರು ರಥವನ್ನು ಎಳೆದರು.

ಸುತ್ತಲಿನ ಮಹಿಳೆಯರು, ಮಕ್ಕಳಾದಿಯಾಗಿ ಭಕ್ತರು ಉತ್ತತ್ತಿ, ಬಾಳೆಹಣ್ಣು, ಕೋಬರಿ ಮತ್ತಿತರ ಫಲಪುಷ್ಪಗಳನ್ನು ರಥದ ಮೇಲೆ ಸಮರ್ಪಿಸಿ ತಮ್ಮಹರಕೆ ತೀರಿಸಿದರು. ಯುವಕರೂ ಶಾಂತಲಿಂಗೇಶ್ವರ ಮಹಾರಾಜ ಕೀ ಜೈ... ವೀರಭದ್ರ ಶಿವಾಚಾರ್ಯರಿಗೆ ಜೈ... ಎಂದು ಜಯಘೋಷ ಮೊಳಗಿಸಿದರು.

ಕಿಣಿಸುಲ್ತಾನದ ಶಿವಶಾಂತಲಿಂಗ ಸ್ವಾಮೀಜಿ, ಹೊದಲೂರು, ಬಂಗರಗಾ ಮಠಾಧೀಶರು ಉಪಸ್ಥಿತರಿದ್ದರು. ವಿವಿಧ ಭಾಗದ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-31-2103820558

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.