ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಶಿಕ್ಷಕರ ಪುನಃಶ್ಚೇತನ ಕಾರ್ಯಾಗಾರ

Published 2 ಜುಲೈ 2023, 13:59 IST
Last Updated 2 ಜುಲೈ 2023, 13:59 IST
ಅಕ್ಷರ ಗಾತ್ರ

ಆಳಂದ: ಭಾರತ ಸೇವಾದಳ ತಾಲ್ಲೂಕು ಘಟಕ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜುಲೈ 4ರಂದು ಪಟ್ಟಣದ ತೋಂಟದಾರ್ಯ ಅನುಭವ ಮಂಟಪದಲ್ಲಿ ಬೆಳಗ್ಗೆ 10ಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಒಂದು ದಿನದ ಪುನಃಶ್ಚೇತನ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಭಾರತ ಸೇವಾದಳದ ಅಧಿನಾಯಕ ಶರಣಬಸಪ್ಪ ವಡಗಾಂವ ತಿಳಿಸಿದ್ದಾರೆ.

ತೋಂಟದಾರ್ಯ ಅನುಭವ ಮಂಟಪದ ಸಂಚಾಲಕರಾದ ಕೋರಣೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದಾರೆ. ಸೇವಾದಳದ ಜಿಲ್ಲಾ ಅಧ್ಯಕ್ಷ ಶಶೀಲ್‌ ನಮೋಶಿ ಕಾರ್ಯಾಗಾರ ಉದ್ಘಾಟಿಸುವರು. ಜಿಲ್ಲಾ ಸಮಿತಿ ಸದಸ್ಯ ಗುರುಶರಣ ಪಾಟೀಲ ಕೊರಳ್ಳಿ, ತಾಲ್ಲೂಕಾಧ್ಯಕ್ಷ ಸೂರ್ಯಕಾಂತ ತಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚನಾಳ, ಸುರೇಶ ಬಡಿಗೇರ, ಅರವಿಂದ ಬಾಸಗಿ ಪಾಲ್ಗೊಳ್ಳುವರು. ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರವೀಂದ್ರ ಕಂಟೇಕೂರ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ತಾಲ್ಲೂಕಿನ ಸರ್ಕಾರಿ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಂದ ಒಬ್ಬ ಶಿಕ್ಷಕರನ್ನು ಕಾರ್ಯಾಗಾರದಲ್ಲಿ ನಿಯೋಜಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಆದೇಶದ ಮೇರಗೆ ಭಾಗವಹಿಸುವರು. ತಾಲ್ಲೂಕು ಮಟ್ಟದ ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ದಿನವಿಡೀ ಶಿಕ್ಷಕರಿಗೆ ಸೇವಾ ಮನೋಭಾವ, ರಾಷ್ಟ್ರೀಯ ಚಿನ್ಹೆಗಳು, ರಾಷ್ಟ್ರೀಯ ಮೌಲ್ಯಗಳ ಕುರಿತು ವಿಶೇಷ ಉಪನ್ಯಾಸ, ಚಟುವಟಿಕೆಗಳು ಜರುಗಲಿವೆ ಎಂದು ಶರಣಬಸಪ್ಪ  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT