ಕಲಬುರಗಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಿಂದ ಯೂರಿಯಾ ರಸಗೊಬ್ಬರ ಖರೀದಿಗೆ ಅನ್ನದಾತರಿಗೆ ಫ್ರುಟ್ಸ್ ಐಡಿ (ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ) ಸಂಖ್ಯೆ ಕಡ್ಡಾಯಗೊಳಿಸಲಾಗಿದೆ. ಆದರೆ, ಜಿಲ್ಲೆಯಲ್ಲಿ ಇನ್ನೂ 53 ಸಾವಿರಕ್ಕೂ ಅಧಿಕ ರೈತರು ಫ್ರುಟ್ಸ್ ಐಡಿ ಮಾಡಿಸಿಕೊಂಡಿಲ್ಲ.

2016ರ ಕೃಷಿ ಗಣತಿಯಂತೆ ಜಿಲ್ಲೆಯ 11 ತಾಲ್ಲೂಕುಗಳಲ್ಲಿ ಒಟ್ಟು 4.25 ಲಕ್ಷ ಜಮೀನು ಹೊಂದಿರುವ ರೈತರಿದ್ದಾರೆ. ಮಾರ್ಚ್ ಅಂತ್ಯದ ತನಕ 3.72 ಲಕ್ಷ ರೈತರು ಫ್ರುಟ್ಸ್ ಐಡಿ ಮಾಡಿಸಿಕೊಂಡಿದ್ದು, 53,562 ಫ್ರುಟ್ಸ್ ಐಡಿ ನೋಂದಣಿಯಿಂದ ಹೊರಗಿದ್ದಾರೆ.

‘ಬೆಳೆ ವಿಮೆ ಪರಿಹಾರ, ಬೆಳೆ ನಷ್ಟ ಪರಿಹಾರ, ಕೃಷಿ ಸಬ್ಸಿಡಿಗಳು ಸೇರಿದಂತೆ ಸರ್ಕಾರದ ಹಲವು ಯೋಜನೆಗಳ ಪ್ರಯೋಜನ ಪಡೆಯಲು ರೈತರಿಗೆ ಫ್ರುಟ್ಸ್ ಐಡಿ ಕಡ್ಡಾಯ. ಫ್ರುಟ್ಸ್ ಐಡಿ ಇಲ್ಲದಿದ್ದರೆ ಬೆಳೆ ವಿಮೆ ನೋಂದಣಿ ಸಾಧ್ಯವಿಲ್ಲ. ಇನ್ಪುಟ್ ಸಬ್ಸಿಡಿಗಾಗಿ ಪರಿಹಾರ ಫೋರ್ಟಲ್ನಲ್ಲಿ ಹಾನಿ ದಾಖಲಿಸುವುದಕ್ಕೂ ಆಗಲ್ಲ. ಜೊತೆಗೆ ಕೃಷಿ ಇಲಾಖೆಯಿಂದ ಸಹಾಯಧನ ಹಣ ಬಿಡುಗಡೆ, ಕೃಷಿ ಉಪಕರಣ ಖರೀದಿ, ರಸಗೊಬ್ಬರ, ಬೀಜ ವಿತರಣೆ, ಕೀಟನಾಟಕಗಳ ವಿತರಣೆಯಲ್ಲಿಯೂ ಇದು ಕಡ್ಡಾಯವಾಗಿದೆ’ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

‘ರೈತರು ನೇರವಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ಬೀಜ–ಗೊಬ್ಬರ ಕೇಳಿದರೆ ಸಿಗಲ್ಲ. ರೈತರು ಫ್ರುಟ್ಸ್ ಐಡಿ ಹೇಳಿದರೆ ಅದರಲ್ಲಿ ನಮೂದಾದ ಜಮೀನಿನ ವಿಸ್ತೀರ್ಣಕ್ಕೆ ತಕ್ಕಂತೆ ರಸಗೊಬ್ಬರ, ಬಿತ್ತನೆ ಬೀಜ, ಔಷಧಗಳು ಸಿಗಲಿವೆ. ಹೀಗಾಗಿ ರೈತರು ಮುಂಗಾರು ಹಂಗಾಮಿಗೂ ಮುನ್ನವೇ ತಮ್ಮ ಫ್ರುಟ್ಸ್ ಐಡಿಗಳನ್ನು ಮಾಡಿಕೊಳ್ಳಬೇಕು. ಈಗಾಗಲೇ ಫ್ರುಟ್ಸ್ ಐಡಿ ಹೊಂದಿರುವ ರೈತರು ತಮ್ಮ ಎಲ್ಲ ಸರ್ವೆ ನಂಬರ್ ಜಮೀನುಗಳಿಗೂ ಫ್ರುಟ್ಸ್ ಐಡಿ ಇದೆಯಾ ಪರಿಶೀಲಿಸಿಕೊಳ್ಳಬೇಕು’ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಸಲಹೆ.

ಬಹುಪಯೋಗಿ ಸಂಖ್ಯೆ: ‘ಫ್ರುಟ್ಸ್ ಐಡಿ ಬರೀ ಕೃಷಿ ಇಲಾಖೆಗೆ ಸೀಮಿತವಲ್ಲ. ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಪಶು ಸಂಗೋಪನೆ ಇಲಾಖೆ ಹಾಗೂ ಕೆಎಂಎಫ್ನಡಿ ಸಿಗುವ ಸೌಲಭ್ಯಗಳಿಗೂ ಫ್ರುಟ್ಸ್ ಐಡಿ ನೋಂದಣಿ ಅಗತ್ಯವಾಗಿದೆ. ಜೊತೆಗೆ ‘ಕಿಸಾನ್ ಸಮ್ಮಾನ್ ನಿಧಿ’ ಪಡೆಯಲೂ ಅದು ಬೇಕು. ಪಿಎಂ–ಕಿಸಾನ್ ಕಾರ್ಡ್ ಅನ್ವಯ ಸಾಲ ಪಡೆಯಲು ಹಾಗೂ ನೆರವು ಪಡೆಯಲು ಕೂಡ ಬಳಕೆಯಾಗುತ್ತದೆ. ಒಟ್ಟಾರೆ ರೈತರ ಪಾಲಿಗೆ ಫ್ರುಟ್ಸ್ ಐಡಿ ಇನ್ಮುಂದೆ ‘ಆಧಾರ್ ಸಂಖ್ಯೆ’ಯಂತೆ ಬಳಕೆಯಾಗಲಿದೆ’ ಎನ್ನುತ್ತಾರೆ ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್.

ಹೀಗಿದೆ ನೋಂದಣಿ ಪ್ರಕ್ರಿಯೆ: ರೈತರು ತಮ್ಮ ಸಮೀಪ ರೈತ ಸಂಪರ್ಕ ಕೇಂದ್ರ, ಗ್ರಾಮ್ ಒನ್, ತೋಟಗಾರಿಕೆ, ನಾಗರಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಿ ನೋಂದಣಿ ಫ್ರುಟ್ಸ್ ಐಡಿ ಮಾಡಿಸಿಕೊಳ್ಳಬಹುದು. ನೋಂದಣಿ ಸಂದರ್ಭ ರೈತರು ತಮ್ಮ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ಬುಕ್ ಪ್ರತಿ, ತಮ್ಮ ಹೆಸರಿನಲ್ಲಿ ಜಮೀನಿನ ಇರುವ ಪಹಣಿ, ಮೊಬೈಲ್ ಸಂಖ್ಯೆ ಹಾಗೂ ಜಾತಿ ಪ್ರಮಾಣಪತ್ರದ ಪ್ರತಿ ಇಲ್ಲವೇ ಅದರ ಆರ್ಡಿ ಸಂಖ್ಯೆ ಸಲ್ಲಿಸಬೇಕಾಗುತ್ತದೆ.

ಈತನಕ ಫ್ರುಟ್ಸ್ ಐಡಿ ಮಾಡಿಕೊಳ್ಳದ ಜಿಲ್ಲೆಯ ಅನ್ನದಾತರು ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ಫ್ರುಟ್ಸ್ ಐಡಿ ಪಡೆಯಬೇಕು

ಸಮದ್ ಪಟೇಲ್ ಜಂಟಿ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.