ಕಲಬುರಗಿ: ನಗರದ ರಸ್ತೆ ಬದಿಯ ಹಣ್ಣಿನ ವ್ಯಾಪಾರಿಯೊಬ್ಬರ ಬಳಿ ಈ ಹಿಂದಿನ ಹೆಚ್ಚುವರಿ ಜಿಲ್ಲಾಧಿಕಾರಿ(ಎಡಿಸಿ) ಆಗಿದ್ದವರ ಹೆಸರಿನಲ್ಲಿ ಲೆಟರ್ ಪ್ಯಾಡ್‌ಗಳು ಪತ್ತೆಯಾಗಿವೆ.
ಏಷ್ಯಾನ್ ಮಾಲ್ ರಸ್ತೆ ಬದಿಯ ಹಣ್ಣಿನ ವರ್ತಕ ಎಡಿಸಿ ಅವರ ಹೆಸರಿನ ಲೆಟರ್ ಪ್ಯಾಡ್‌ನಲ್ಲಿ ಹಣ್ಣುಗಳ ಹೋಳುಗಳನ್ನು ಇರಿಸಿ ಮಾರಾಟ ಮಾಡಿದ್ದಾರೆ. ಈ ಹಿಂದೆ ಎಡಿಸಿ ಆಗಿದ್ದ ಭೀಮಾಶಂಕರ ತೆಗ್ಗಳ್ಳಿ ಅವರ ಹೆಸರಿನಲ್ಲಿ ಈ ಲೆಟರ್ ಪ್ಯಾಡ್‌ಗಳಿವೆ.
ಹಣ್ಣಿನ ವ್ಯಾಪಾರಿಯು ಹಲಸಿನ ಹಣ್ಣಿನ ಹೋಳುಗಳನ್ನು ಎಡಿಸಿ ಹೆಸರಿನ ಲೆಟರ್ ಪ್ಯಾಡ್‌ಗಳಲ್ಲಿ ಇರಿಸಿ ಗ್ರಾಹಕರಿಗೆ ಕೈಗೆ ಇರಿಸಿದ್ದಾರೆ. ಹಣ್ಣುಗಳ ಸಹಿತ ಲೆಟರ್ ಪ್ಯಾಡ್ ಫೋಟೊ ತೆಗೆದು ಜಿಲ್ಲಾಧಿಕಾರಿ ಕಚೇರಿಯ ನಡೆಯನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಹಣ್ಣಿನ ವ್ಯಾಪಾರಿ ಬಳಿ ಪತ್ತೆಯಾಗಿರುವ ಎಡಿಸಿ ಅವರ ಹೆಸರಿನ ಲೆಟರ್ ಪ್ಯಾಡ್‌ಗಳ ನೈಜತೆಯನ್ನು ಪರಿಶೀಲಿಸಲಾಗುವುದು. ಹೆಚ್ಚುವರಿ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿಯ ಶಿಷ್ಟಾಚಾರ ತಹಶೀಲ್ದಾರ್ ಪಂಪಯ್ಯ ಅವರು 'ಪ್ರಜಾವಾಣಿ'ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.