ಅಫಜಲಪುರ: ತಾಲ್ಲೂಕಿನ ಬಳೂರ್ಗಿ ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಶರಣಪ್ಪ ದೋಣಿ ಎಂಬುವರಿಗೆ ಸೇರಿದ ಬೃಂದಾವನ್ ರೆಸ್ಟೋರೆಂಟ್ಗೆ ಆಕಸ್ಮಿಕ ಬೆಂಕಿ ತಗುಲಿ ಒಳಗಿದ್ದ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿ ಸುಮಾರು ₹ 10 ಲಕ್ಷ ಮೌಲ್ಯದಷ್ಟು ಹಾನಿಯಾಗಿದೆ.

ರೆಸ್ಟೋರೆಂಟ್ನಲ್ಲಿದ್ದ ಎಲ್ಲಾ ವಸ್ತುಗಳು, ದವಸ ಧಾನ್ಯ ಸೇರಿ ಇತರೆ ಪರಿಕರಗಳು ಸುಟ್ಟು ಹಾಳಾಗಿವೆ. ಅಗ್ನಿಶಾಮಕ ದಳದವರು ಬರುವು ದರೊಳಗೆ ಎಲ್ಲವೂ ಸುಟ್ಟು ಕರಕಲಾಗಿತ್ತು.

‘ಬೃಂದಾವನ್ ರೆಸ್ಟೋರೆಂಟ್ ಮಾಲೀಕರು ಕಡುಬಡವರಾಗಿದ್ದು, ಸಾಕಷ್ಟು ಕಷ್ಟಪಟ್ಟು ಸಾಲ ಮಾಡಿ ರೆಸ್ಟೋರೆಂಟ್ ಆರಂಭಿಸಿದ್ದರು. ಆದರೆ, ಆಕಸ್ಮಿಕ ಬೆಂಕಿಯಿಂದ ರೆಸ್ಟೋರೆಂಟ್ ಹಾಳಾಗಿದ್ದು, ಅದಕ್ಕಾಗಿ ಸರ್ಕಾರ ತಕ್ಷಣ ಸ್ಪಂದಿಸಿ ಸೂಕ್ತ ಪರಿಹಾರ ನೀಡಬೇಕು’ ಎಂದು ಗ್ರಾಮದ ಮುಖಂಡರಾದ ದಯಾನಂದ ದೊಡ್ಡಮನಿ ಹಾಗೂ ಬಸವರಾಜ ಜಾಬಾದಿ ಒತ್ತಾಯಿಸಿದ್ದಾರೆ. ‘ಕಷ್ಟಪಟ್ಟು ಸಾಲ ಮಾಡಿ ರೆಸ್ಟೋರೆಂಟ್ ಆರಂಭಿಸಿದ್ದೆ. ಆದರೆ, ಆಕಸ್ಮಿಕವಾಗಿ ಬೆಂಕಿ ತಗುಲಿ ಎಲ್ಲವೂ ಸುಟ್ಟು ಕರಕಲಾಗಿದೆ. ₹10 ಲಕ್ಷದಷ್ಟು ಹಾನಿಯಾಗಿದೆ. ಆದ್ದರಿಂದ ಸರ್ಕಾರ ಇದಕ್ಕೆ ಸ್ಪಂದಿಸಬೇಕು’ ಎಂದು ಶರಣಪ್ಪ ಅವರು ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-31-93049932

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.