ಕಲಬುರಗಿ: ‘ನಗರದ ಶೇಖ್ ರೋಜಾ ವ್ಯಾಪ್ತಿಯ ಸರ್ಕಾರಿ ಕೃಷಿ ಸಂಶೋಧನಾ ಕೇಂದ್ರದ ಜಮೀನು ಅತಿಕ್ರಮಣ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯಪ್ರವೇಶಿಸಿ ಅತಿಕ್ರಮಣಕ್ಕೆ ಸಾಥ್ ನೀಡಿದ ಅಧಿಕಾರಿಗಳು ಮತ್ತು ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ ಒತ್ತಾಯಿಸಿದರು.

‘ಶೇಖ್ ರೋಜಾ ಸರ್ವೆ ನಂ.40/1, 40/3, 40/4ರ ಮಾಲೀಕರಾದ ಶಿವಲಿಂಗಪ್ಪ ಹಾಗೂ ಪಾಲುದಾರ ಸಂಸ್ಥೆ ಶಕುಂತಲಾ ಡೆವಲಪರ್ಸ್ನವರು ಕೃಷಿ ಸಂಶೋಧನಾ ಕೇಂದ್ರಕ್ಕೆ ಸೇರಿದ ಸರ್ವೆ ನಂ.39ರ ದಕ್ಷಿಣ ಭಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ತಮ್ಮ ಲೇಔಟ್ಗೆ ಅಧಿಕೃತ ರಸ್ತೆ ಇಲ್ಲದ ಕಾರಣ, ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಿಸಿ ಕೊಂಡಿದ್ದಾರೆ. ರಸ್ತೆ ಇಲ್ಲದ ಲೇಔಟ್ಗೆ ಜಿಡಿಎ ಅನುಮತಿ ಕೂಡ ನೀಡಿದೆ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಅತಿಕ್ರಮಣ ಕುರಿತು ಕುಡಾ ಆಯುಕ್ತರಿಗೆ ಆಕ್ಷೇಪಣೆ ಸಲ್ಲಿಸಿದಾಗ ಅವರು ಎಡಿಎಲ್ಆರ್ಗೆ ವರದಿ ಕೇಳಿದ್ದರು. ಆರಂಭದಲ್ಲಿ ಅತಿಕ್ರಮಣ ಆಗಿದೆ ಎಂದು ಮಾಲೀಕರಿಗೆ ನೋಟಿಸ್ ನೀಡಿದ್ದ ಎಡಿಎಲ್ಆರ್ ಕಚೇರಿಯು ಏ.23ರಂದು ನನಗೆ ನೀಡಿದ ಉತ್ತರದಲ್ಲಿ ಯಾವುದೇ ಅತಿಕ್ರಮಣ ನಡೆದಿಲ್ಲ ಮತ್ತು ಅಲ್ಲಿ ಯಾವುದೇ ರಸ್ತೆ ನಿರ್ಮಿಸಿಲ್ಲ ಎಂದು ಉಲ್ಟಾ ಹೊಡೆದಿದೆ’ ಎಂದು ಆರೋಪಿಸಿದರು.

‘ಮಾಲೀಕರು ಸಲ್ಲಿಸಿದ್ದ ಮೇಲ್ಮನವಿ ಆಧಾರದ ಮೇಲೆ ಡಿಡಿಎಲ್ಆರ್ ಅವರು ಸರ್ವೆ ನಂ. 40ರ ಮರುಸರ್ವೆಗೆ ಆದೇಶಿಸಿದ್ದರು. ಮೊದಲು ತಪ್ಪಿತಸ್ಥರು ಎಂದು ಹೇಳಿದ್ದ ಅಧಿಕಾರಿಗಳು ಈಗ ಕ್ಲೀನ್ಚಿಟ್ ನೀಡಿದ್ದಾರೆ. ಅತಿಕ್ರಮಣಕ್ಕೊಳಗಾದ ಕೃಷಿ ಸಂಶೋಧನಾ ಕೇಂದ್ರದ ಕುಲಸಚಿವರನ್ನು ವ್ಯವಸ್ಥಿತವಾಗಿ ಹೊರಗಿಡಲಾಗಿದೆ. ಈ ಕುರಿತು ಪಿಐಎಲ್ ಸಲ್ಲಿಸುತ್ತೇನೆ’ ಎಂದರು.

ವಕೀಲ ರಾಜೇಂದ್ರಕುಮಾರ, ಮಹೇಶ ಕೆಂಭಾವಿ, ಮಹಾದೇವ ಮಾಡಗಿ, ಮಂಜುನಾಥ, ಶಿವಾನಂದ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-34-2090731002

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.