ಕಲಬುರಗಿ: ‘2022ರಲ್ಲಿ ಆಳಂದದ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ತೆರಳಿದ ಹಿಂದೂಗಳ ಮತ್ತು ಜಿಲ್ಲಾಡಳಿತದ ಮೇಲೆ ಮುಸ್ಲಿಂ ಕಿಡಿಗೇಡಿಗಳು ದಾಳಿ ನಡೆಸಿದ ಪ್ರಕರಣವನ್ನು ಹಿಂಪಡೆದರೆ ಕಾನೂನು ಹೋರಾಟ ಮಾಡಲಾಗುವುದು’ ಎಂದು ಶಿವಸೇನಾ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಪ್ರಕರಣದಲ್ಲಿ ಇರುವವರು ಅಮಾಯಕರೆಂದು ಆಳಂದ ಶಾಸಕರು ಮತ್ತು ಅಲ್ಲಿನ ಮುಖಂಡರ ಮನವಿ ಆಧರಿಸಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹಸಚಿವರಿಗೆ ಪತ್ರ ಬರೆದಿದ್ದಾರೆ. ಈ ಪತ್ರ 2023ರ ಸೆಪ್ಟೆಂಬರ್ನಲ್ಲಿ ಬರೆದಿದ್ದರೂ ಈಗಲೂ ಪ್ರಕರಣ ಹಿಂಪಡೆಯುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ’ ಎಂದರು.

‘ಮುಸ್ಲಿಮರ ಓಲೈಕೆಗಾಗಿ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ಕೆಲಸ ಮಾಡಲಿ. ವಿಧಾನಸಭಾಧ್ಯಕ್ಷರು ಗೃಹ ಇಲಾಖೆಗೆ ಪತ್ರ ಬರೆದಿರುವುದು ನ್ಯಾಯಾಂಗದಲ್ಲಿ ನೇರ ಹಸ್ತಕ್ಷೇಪ ಮಾಡಿದಂತಾಗಿದೆ. ಈ ಸ್ಥಾನದಲ್ಲಿರುವವರು ಪಕ್ಷಾತೀತ, ಜಾತ್ಯತೀತರಾಗಿರಬೇಕು. ಯು.ಟಿ. ಖಾದರ್ ಅವರು ಸಭಾಧ್ಯಕ್ಷ ಸ್ಥಾನಕ್ಕೆ ಚ್ಯುತಿ ತಂದಿದ್ದಾರೆ’ ಎಂದು ಆರೋಪಿಸಿದರು.

‘ಗಲಭೆಕೋರರಿಗೆ ರಾಜಕಾರಣಿಗಳ ಬೆಂಬಲ ಇರುವ ಕಾರಣಕ್ಕೆ ರಾಘವ ಚೈತನ್ಯರ ಪೂಜೆ ನಿಂತಿದೆ. ತಕ್ಷಣ ಅಲ್ಲಿ ಪೂಜೆ ನಡೆಯಲು ಜಿಲ್ಲಾಡಳಿತ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.

‘ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ದೇಶದ ಪ್ರಧಾನಿಯನ್ನೇ ಭಯೋತ್ಪಾದಕನ ಸ್ಥಾನದಲ್ಲಿ ನಿಲ್ಲಿಸಿದ್ದು, ಅವರ ಹತಾಶೆ ತೋರಿಸುತ್ತದೆ. ನರೇಂದ್ರ ಮೋದಿ ಅವರ ಬಗ್ಗೆ ಪಾಕಿಸ್ತಾನದ ಪ್ರಧಾನಿಯೂ ಇಂತಹ ಪದ ಬಳಸಿಲ್ಲ. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರು ಯಾರ ಓಲೈಕೆಗಾಗಿ ಭಯೋತ್ಪಾದಕ ಪಟ್ಟ ಕಟ್ಟಿದ್ದಾರೆ ಎನ್ನುವುದನ್ನು ಸ್ಪಷ್ಟೀಕರಣ ನೀಡಬೇಕು’ ಎಂದರು. ‘ಆಳಂದನಲ್ಲಿ ಗಲಭೆ ನಡೆಸಿದವರು ಭಯೋತ್ಪಾದಕರು. ‘ನಾವು ಮನಸ್ಸು ಮಾಡಿದ್ರೆ ಒಬ್ಬರನ್ನೂ ಜಿಲ್ಲೆಯಲ್ಲಿ ಓಡಾಡೋಕೆ ಬಿಡೊಲ್ಲ, ಡಿಪೊಗೆ ಬೆಂಕಿ ಹಚ್ಚುತ್ತೇನೆ’ ಅಂದವರು ಭಯೋ ತ್ಪಾದಕರು. ಹಿಂದೂ ಸ್ವಾಮೀಜಿಗಳ, ಜಿಲ್ಲೆಯ ಬಿಜೆಪಿ ಶಾಸಕ ಮತ್ತು ಪ್ರಮುಖರ ಹತ್ಯೆಗೆ ಸುಪಾರಿ ಕೊಟ್ಟವರು ಭಯೋತ್ಪಾದಕರು. ಸುಳ್ಳು ಆಟ್ರಾಸಿಟಿ ಕೇಸ್ ಹಾಕುವವರು ನಿಜವಾದ ಭಯೋತ್ಪಾದಕರು’ ಎಂದು ಟೀಕಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದಾಗಲೆಲ್ಲ ಅವರ ಜೊತೆಗೆ 14 ಕೇಸ್ ಇರುವ ರೌಡಿಶೀಟರ್ ಸಂಜಯ ಪಾಟೀಲ ಎಂಬ ವ್ಯಕ್ತಿ ಓಡಾಡುತ್ತಾರೆ. ಅಕ್ಕಪಕ್ಕ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮಿಷನರ್ ಇದ್ದರೂ ಕೇಳುವುದಿಲ್ಲ. ಇದು ನಾಚಿಕೆಗೇಡಿನ ಸಂಗತಿ’ ಎಂದು ಆರೋಪಿಸಿದರು. ಶಿವಸೇನಾ ಜಿಲ್ಲಾ ಘಟಕದ ಅಧ್ಯಕ್ಷ ಗುರುಶಾಂತ ಟೆಂಗಳಿ, ರಾಕೇಶ್ ಜಮಾದರ, ಶಿವಕುಮಾರ ಬಾಳಿ, ರೋಹಿತ್ ಪಿಸ್ಕೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-34-1500027584

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.