ಕಲಬುರಗಿ: ಮಂಗಳವಾರ ನಡೆಯ ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಗಾಗಿ ಇಡೀ ನಗರ ಸಿಂಗಾರಗೊಂಡಿದೆ.

ನಗರದ ಜಗತ್ ವೃತ್ತ, ಸರ್ದಾರ್ ಪಟೇಲ್ ವೃತ್ತ, ಹೀರಾಪುರ ವೃತ್ತಗಳು ವಿದ್ಯುತ್ ದೀಪಾಲಂಕಾರದ ಚಿತ್ತಾರದಲ್ಲಿ ಮಿನುಗುತ್ತಿವೆ. ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಬಾಬಾಸಾಹೇಬರ ಜಯಂತಿಗೆ ಶುಭಾಶಯ ಕೋರುವ ಬ್ಯಾನರ್ಗಳು, ಬಂಟಿಂಗ್ಸ್ಗಳು ರಾರಾಜಿಸುತ್ತಿವೆ.

ಜಗತ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಯು ನೀಲಿ ಬಣ್ಣದ ವಿದ್ಯುದ್ದೀಪಗಳ ಚಿತ್ತಾರದಲ್ಲಿ ಝಗಮಗಿಸುತ್ತಿದೆ. ವಿದ್ಯುತ್ ದೀಪಗಳಿಂದ ನಿರ್ಮಿಸಿರುವ ಅಶೋಕ ಚಕ್ರ ಪ್ರತಿಕೃತಿಯೂ ಆಕರ್ಷಕವಾಗಿದೆ.

ಜಗತ್ ವೃತ್ತದಲ್ಲಿ ಸಂಸತ್ತಿನ ಹಳೆಯ ಕಟ್ಟಡದ ಪ್ರತಿಕೃತಿ ನಿರ್ಮಿಸಲಾಗಿದ್ದು, ಅದರೊಂದಿಗೆ ಅಂಬೇಡ್ಕರ್ ಕಟೌಟ್ಗಳನ್ನು ನಿಲ್ಲಿಸಲಾಗಿದೆ. ಜಗತ್ ವೃತ್ತ ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ವಿದ್ಯುತ್ ದೀಪಗಳ ಸರಗಳಿಂದ ಕಮಾನುಗಳನ್ನು ನಿರ್ಮಿಸಲಾಗಿದ್ದು, ಝಗಮಗಿಸುತ್ತಿದೆ.

ಜಿಲ್ಲಾಡಳಿತ ಕಾರ್ಯಕ್ರಮ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಗತ್ ವೃತ್ತದಲ್ಲಿ ಬೆಳಿಗ್ಗೆ 9 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ ನಡೆಯಲಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.

ಜಿಲ್ಲಾ ಜಯಂತ್ಯುತ್ಸವ ಸಮಿತಿಯಿಂದ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಕೇಂದ್ರ ಬಸ್ ನಿಲ್ದಾಣದಿಂದ ಜಗತ್ ವೃತ್ತದ ತನಕ ಅದ್ದೂರಿ ಮೆರವಣಿಗೆ ನಡೆಯಲಿದೆ. ಸಂಜೆ ಜಗತ್ ವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದೆ. ಬಳಿಕ ರಾತ್ರಿ 10 ಗಂಟೆಗೆ ಮಾತೆ ತ್ಯಾಗಮಯಿ ರಮಾತಾಯಿ ನಾಟಕ ಪ್ರದರ್ಶನ ನಡೆಯಲಿದೆ.

ಹೀರಾಪುರ ವೃತ್ತ:ನಗರದ ಹೀರಾಪುರ ವೃತ್ತದಲ್ಲೂ ಅಂಬೇಡ್ಕರ್ ಜಯಂತಿ ಆಚರಣೆ ನಡೆಯಲಿದೆ. ಸಂಜೆ ವೇದಿಕೆ ಕಾರ್ಯಕ್ರಮ ಜರುಗಲಿದೆ.

ಭಗವಾನ್ ಬುದ್ಧ ಹಾಗೂ ಬಾಬಾಸಾಹೇಬರ ಭಾವಚಿತ್ರಗಳನ್ನು ಇಟ್ಟು ಜಗತ್ ವೃತ್ತದವರೆಗೆ ಮೆರವಣಿಗೆ ಹೊರಡುವುದು ವಾಡಿಕೆ. ಅದಕ್ಕಾಗಿ ವಿವಿಧ ವಿವಿಧ ಓಣಿಗಳಲ್ಲಿ ಲಾರಿ, ಟ್ರ್ಯಾಕ್ಟ ರ್ಗಳನ್ನು ತರಿಸಲಾಗಿತ್ತು. ಅವುಗಳಿಗೆ ಅಲಂಕಾರ ಮಾಡುವ ಕಾರ್ಯ ರಾತ್ರಿಯಿಡೀ ನಡೆಯಿತು.ಅಂಬೇಡ್ಕರ್ ಜಯಂತಿ ಅಂಗವಾಗಿ ಅಲ್ಲಲ್ಲಿ ಅನ್ನಸಂತರ್ಪಣೆ ಮಾಡಲು ಶಾಮಿಯಾನಗಳನ್ನು ಹಾಕಲಾಗಿದ್ದು, ನಗರದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-34-761297772

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.