ಕಮಲಾಪುರ: ‘ಮೀಸಲಾತಿ, ಸಂವಿಧಾನ, ಕಾನೂನಿನಂದ ಮಾತ್ರ ಬದಲಾದರೆ ಸಾಲದು ಸಂಸ್ಕೃತಿ ಮತ್ತು ಸಂಸ್ಕಾರದಿಂದ ಬದಲಾಗಬೇಕು’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ತಾಲ್ಲೂಕು ಮಟ್ಟದ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮೇಲ್ವರ್ಗದವರು ಕಾನೂನಿಗೆ ಹೆದರಿ ಸಮಾನತೆ ಸಾರುವುದಲ್ಲ. ಹೃದಯದಿಂದ ಅಪ್ಪಿಕೊಳ್ಳಬೇಕು. ಸಾವಿರ ವರ್ಷಗಳ ಹಿಂದೆ ಬಸವಣ್ಣ ಮಾನವ ಹಕ್ಕುಗಳ ಬಗ್ಗೆ ಪ್ರತಿಪಾದಿಸಿದ್ದರು. ಕಾಲ್ಪನಿಕ ಕಾವ್ಯದಿಂದ ಭಾರತವನ್ನು ಗುರುತಿಸಲು ಸಾಧ್ಯವಿಲ್ಲ. ಕಾಯಕದಿಂದ ರಾಷ್ಟ ನಿರ್ಮಣವಾಗಬೇಕು’ ಎಂದರು.

‘ಎಲ್ಲ ಮಹಾತ್ಮರ ದೇವರು ಧರ್ಮದ ಬಗ್ಗೆ ಮಾತನಾಡಿದರೇ, ಬಸವಣ್ಣ, ಅಂಬೇಡ್ಕರ್ ಮನಷ್ಯರು, ಮನುಷ್ಯತ್ವದ ಬಗ್ಗೆ ಮಾತನಾಡಿದ್ದಾರೆ. ಪ್ರತಿಯೊಬ್ಬ ಮನುಷ್ಯನ ಅಸ್ತಿತ್ವ ಉಳಿಸಿವಂತಹ ಸಂವಿಧಾನ ಕೊಟ್ಟಿದ್ದಾರೆ. ನಾವು 21ನೇ ಶತಮಾನದಲ್ಲೂ ಅಜ್ಞಾನದಿಂದ ತುಂಬಿ ತುಳುಕಿತಿದ್ದೇವೆ’ ಎಂದರು.

ಹತ್ಯಾಳದ ಭಂತೆ ಧಮ್ಮನಾಗ ಮಾತನಾಡಿ, ‘ಬೀದರ್, ಕಲಬುರಗಿ, ವಿಜಯಪುರ ಈ ಮೂರು ಜಿಲ್ಲೆಗಳಲ್ಲಿ ಈ ವರ್ಷ ಅಂಬೇಡ್ಕರ್ ಜಯಂತಿಗೆ ₹200 ಕೋಟಿ ಖರ್ಚಾಗಿದೆ. ಅಂಬೇಡ್ಕರ್ ಅವರನ್ನು ಆರಾಧಿಸುವ ಬದಲು ಅರ್ಥಮಾಡಿಕೊಳ್ಳುವುದು ಅವಶ್ಯಕ. ಅಂಬೇಡ್ಕರ್ ಅವರ ತತ್ವ ಯಾವೊಂದು ಪಕ್ಷ ಅನುಸರಿಸುತ್ತಿಲ್ಲ’ ಎಂದರು.

ಬಿಜೆಪಿ ನಾಯಕಿ ಜಯಶ್ರೀ ಮತ್ತಿಮಡು, ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ರವಿ ಬಿರಾದಾರ ಮಾತನಾಡಿದರು. ಶಿವಕುಮಾರ ಗೋಗಿ ಅವರ ‘ಅರಳಿ ಬಾ ಮರಳಿ’ ಪುಸ್ತಕ ಬಿಡುಗಡೆಗೊಳಿಸಲಾಯಿತು.

ಸೊಂತ ಅಭಿನವ ಶರಣ ಶಂಕರಲಿಂಗ ಮಹಾರಾಜ, ಶಿವಪ್ರಭು ಪಾಟೀಲ, ಡಿ.ಜಿ.ಸಾಗರ, ಪ್ರಕಾಶ ಮೂಲಭಾರತಿ, ರಾಜು ಕಪನೂರ, ಮಲ್ಲಿನಾಥ ಪಾಟೀಲ, ಶಿವಶೆಟ್ಟಿ ಪಾಟೀಲ, ಗುರುರಾಜ ಮಾಟೂರ, ಶಿವಾ ದೋಶೆಟ್ಟಿ, ಸುರೇಶ ರಾಠೋಡ, ಮಹೇಂದ್ರ ಸಿಂಗೆ, ಜಗದೇವಪ್ಪ ಅಂಕಲಗಿ, ಸಮೀತಿ ಅಧ್ಯಕ್ಷ ನಿಂಗಪ್ಪ ಪ್ರಬುದ್ಧಕರ, ಅಶೋಕ ಗೌರೆ, ಶರಣು ಗೌರೆ, ಮಂಜು ಸಿಕೆ, ಸುಧೀರ ಹೊನ್ನಳಿ ಇದ್ದರು.

ದೇವಿಂದ್ರಪ್ಪ ಕಟ್ಟಿಮನಿ ಸ್ವಾಗತಿಸಿದರು. ರವೀಂದ್ರ ಬಿ.ಕೆ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-31-714475219

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.