ಕಲಬುರಗಿ: ‘ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಸಮಾಜ ಕಟ್ಟುವ ಜವಾಬ್ದಾರಿ ಇದೆ. ಅಂಗನವಾಡಿಗಳು ನಮ್ಮ ಮಕ್ಕಳ ಜೀವನದ ಅಡಿಪಾಯ ಇದ್ದಂತೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ 313 ಬಾಲ್ಯವಿವಾಹವನ್ನು ತಡೆಯಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಕೆಲಸ ಹೊರಗಿನಿಂದ ಬಹಳ ಸಲೀಸು ಎಂದು ಕಾಣುತ್ತದೆ. ಆದರೆ, ಸಮಾಜದಲ್ಲಿ ಆರೋಗ್ಯವಂತ ಮಕ್ಕಳು, ಮಹಿಳೆಯರು ಇರಲು ಮತ್ತು ಸರ್ಕಾರದ ಯೋಜನೆಗಳು ಬೇರುಮಟ್ಟದಲ್ಲಿ ಅನುಷ್ಠಾನವಾಗಲು ಅಂಗನವಾಡಿ ಕಾರ್ಯಕರ್ತರು ಕಾರಣ. ನಿಮ್ಮ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದರು.

‘ಹಿಂದೆ ಮಹಿಳೆಯರಿಗೆ ಯಾವುದೇ ಹಕ್ಕು ಇರಲಿಲ್ಲ. ಮನುಸ್ಮೃತಿಯ ಚೌಕಟ್ಟಿನಲ್ಲಿಯೇ ಜೀವನ ಇರುತ್ತಿತ್ತು. ಬಾಬಾಸಾಹೇಬ ಅಂಬೇಡ್ಕರ್ ಅವರು ಮಹಿಳೆಯರಿಗೆ ಸಮಾನವಾದ ಸ್ಥಾನಮಾನ ಕೊಡಲು ‘ಹಿಂದೂ ಕೋಡ್ ಬಿಲ್’ ತರಲು ಪ್ರಯತ್ನಪಟ್ಟರು. ಮಹಿಳೆಯರ ಹಕ್ಕಿಗಾಗಿ ರಾಜೀನಾಮೆ ಕೊಟ್ಟ ಏಕೈಕ ಜನಪ್ರತಿನಿಧಿ ಅವರು. ಬಾಬಾಸಾಹೇಬರು, ಜವಾಹರಲಾಲ್ ನೆಹರೂ ಅವರು ಇರದಿದ್ದರೆ ಇಂದು 1,036 ಮಹಿಳೆಯರಿಗೆ ಆದೇಶ ಪತ್ರ ಕೊಡಲು ಸಾಧ್ಯವಾಗುತ್ತಿರಲಿಲ್ಲ’ ಎಂದರು.

‘ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ನವರು ಮಹಿಳಾ ವಿರೋಧಿ, ಮಹಿಳಾ ಮೀಸಲಾತಿ ಬಿಲ್ನ್ನು ಸದನದಲ್ಲಿ ಪಾಸಾಗಲು ಬಿಟ್ಟಿಲ್ಲ ಎಂದಿದ್ದಾರೆ. ಆದರೆ, ನಮ್ಮ ಪಕ್ಷ ಕೊಟ್ಟ ಮೀಸಲಾತಿ ಕೊಡುಗೆಯಿಂದಲೇ ವರ್ಷಾ, ತೃಪ್ತಿ ಅವರು ಮೇಯರ್–ಉಪಮೇಯರ್ ಆಗಿದ್ದಾರೆ. ಜಿಲ್ಲಾಧಿಕಾರಿ ಫೌಜಿಯಾ, ಚಂದ್ರಿಕಾ ಪರಮೇಶ್ವರ, ಡಿಸಿಪಿ ಶಾಲೂ ಅವರು ವೇದಿಕೆ ಮೇಲೆ ಕುಳಿತಿದ್ದಾರೆ ಅಂದರೆ ಅದು ಡಾ.ಅಂಬೇಡ್ಕರ್ ಅವರ ಪುಣ್ಯ’ ಎಂದು ಹೇಳಿದರು.

‘ದೇಶದ ಮೊದಲ ಮಹಿಳಾ ಪ್ರಧಾನಿ, ಮಹಿಳಾ ರಾಷ್ಟ್ರಪತಿ, ಮಹಿಳಾ ಲೋಕಸಭಾ ಸ್ಪೀಕರ್ ಕೊಟ್ಟಿದ್ದೆಲ್ಲವು ನಾವು. ಆದರೆ, ಇವರೆಲ್ಲ (ಬಿಜೆಪಿ) ಸುಳ್ಳು ಹೇಳಿಕೊಂಡು ಹೋದರೆ ಕೇಳಿಕೊಂಡಿರಬೇಕಾ? 2010ರಲ್ಲಿ ನಾವು ಅಧಿಕಾರದಲ್ಲಿದ್ದಾಗ ಎಂಎಲ್ಎ, ಎಂಪಿ ಚುನಾವಣೆಯಲ್ಲಿ 1/3 ಮಹಿಳಾ ಮೀಸಲಾತಿ ಜಾರಿಗೆ ತರಲು ಹೋದರೆ ಇದೇ ಬಿಜೆಪಿಯವರು ಬಿಲ್ ಬೀಳಿಸಿದರು. ಆದರೆ, 2023ರಲ್ಲಿ ಮೋದಿ ಅವರು ಮಹಿಳಾ ಮೀಸಲಾತಿ ಬಿಲ್ ತಂದಾಗ ನಾವು ವಿರೋಧ ಪಕ್ಷದಲ್ಲಿದ್ದರೂ ಪಾಸ್ ಮಾಡಿಕೊಟ್ಟಿದ್ದೇವೆ. ನಮಗೆ ಬದ್ಧತೆ ಇದೆಯಾ? ಅವರಿಗೆ ಬದ್ಧತೆ ಇದೆಯಾ?’ ಎಂದು ಕೇಳಿದರು.

ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ‘ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಂವಿಧಾನದ ಕಲಂ 371(ಜೆ) ಜಾರಿಗೆ ತಂದಿದ್ದರಿಂದ ಈ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಂತಾಗಿದೆ. ಬಡವರ ಮಕ್ಕಳು ವೈದ್ಯರಾಗುತ್ತಿದ್ದಾರೆ. ಖರ್ಗೆ ಅವರಿಗೆ ಭಾರತ ರತ್ನ ಕೊಡಬೇಕು. ಖರ್ಗೆ ಮನೆತನದಲ್ಲಿ ಯಾರಾದರೊಬ್ಬರು ಮುಖ್ಯಮಂತ್ರಿ ಆಗಬೇಕು’ ಎಂದು ಆಶಿಸಿದರು.

‘ಜಿಲ್ಲಾಧಿಕಾರಿ ಅವರು ಜಿಲ್ಲೆಯ ಗ್ರೇಡ್–2 ತಹಶೀಲ್ದಾರರಿಗೆ ಆದೇಶ ಮಾಡುವ ಮೂಲಕ ಎಸ್ಟಿ ಮತ್ತು ಸಿಂಧುತ್ವ ಪ್ರಮಾಣಪತ್ರದ ಸಮಸ್ಯೆ ಬಗೆಹರಿಸಿದ್ದಾರೆ. ಈಗ ಸಚಿವರು ಕೋಲಿ, ಕಬ್ಬಲಿಗ, ಬೆಸ್ತ, ಅಂಬಿಗ ಮತ್ತು ಬಾರ್ಕಿ ಪದಗಳನ್ನು ಎಸ್ಟಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಮನವಿ ಮಾಡಿದರು.

ಶಾಸಕ ಅಲ್ಲಮಪ್ರಭು ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಎಂಎಲ್ಸಿ ಜಗದೇವ ಗುತ್ತೇದಾರ, ಮೇಯರ್ ವರ್ಷಾ ಜಾನೆ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಕುಡಾ ಅಧ್ಯಕ್ಷ ಮಜಹರ್ ಆಲಂ ಖಾನ್, ಸೈಯ್ಯದ್ ಮಹೆಮೂದ್ ಚಿಸ್ತಿ ಸಾಹೇಬ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಒ ಭಂವರ್ ಸಿಂಗ್ ಮೀನಾ, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಎಸ್ಪಿ ಅಡ್ಡೂರು ಶ್ರೀನಿವಾಸಲು, ಅರಣ್ಯ ಉಪ ಸಂರಕ್ಷಣಾಧಿಕಾರಿ ಸುಮೀತ್ ಪಾಟೀಲ, ಡಿಸಿಪಿ ಶಾಲೂ, ಎಸಿ ಸಾಹಿತ್ಯ ಆಲದಕಟ್ಟಿ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಕುಮಾರ ರಾಠೋಡ ಅವರು ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.