ಕಲಬುರಗಿ: ಬಕ್ರೀದ್ ವೇಳೆ ಗೋ ಅಕ್ರಮ ಸಾಗಣೆ ಹಾಗೂ ಹತ್ಯೆ ತಡೆಯಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಪದಾಧಿಕಾರಿಗಳು ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ವಿರುದ್ಧ ಹಾಗೂ ಗೋವಿನ ಮಹತ್ವದ ಕುರಿತು ಘೋಷಣೆಗಳನ್ನು ಮೊಳಗಿಸಿದರು.

ಬಳಿಕ ಬಜರಂಗದಳದ ಪ್ರಾಂತೀಯ ಸಂಯೋಜಕ ಬಸವರಾಜ ಸೂಗೂರ ಮಾತನಾಡಿ, ‘ರಾಜ್ಯದಲ್ಲಿ ಪ್ರಾಣಿವಧೆ ಅಪರಾಧವಾಗಿದೆ. ಅದನ್ನು ನಿಷೇಧಿಸುವ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ವಧಾಗಾರಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಪೊಲೀಸರು ಗೋರಕ್ಷಣೆಯ ಪ್ರತಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಪ್ರಾಣಿವಧೆ ಆಗದಂತೆ ಪೊಲೀಸರೇ ಬೀಟ್ ಅಥವಾ ವಿಚಕ್ಷಣಾ ವ್ಯವಸ್ಥೆ ಮೂಲಕ ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಬೀಟ್ ಪೊಲೀಸ್ ಸರಿಯಾದ ಮಾಹಿತಿಯನ್ನು ಕ್ಷಿಪ್ರ ಸಮಯಕ್ಕೆ ಕೊಡದೇ ಹೋಗಿ, ಗೋಹತ್ಯೆ ನಡೆದಲ್ಲಿ ತಕ್ಷಣ ಅವರನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

‘ಗೋ ಸಾಗಣೆ ತಡೆಯಲು ಪೊಲೀಸರಿಗೆ ಸಂಪೂರ್ಣ ಅಧಿಕಾರವಿದೆ. ಯಾವುದೇ ವಾಹನದಲ್ಲಿ ಗೋ ಅಕ್ರಮ ಸಾಗಾಟ ಆಗದಂತೆ ವಿಶೇಷವಾಗಿ ಮೇ 28ರವರೆಗೆ ಸಂಪೂರ್ಣ ಬಂದೋಬಸ್ತ್ ಮಾಡಬೇಕು. ವಿಶೇಷವಾಗಿ ಗಡಿಭಾಗದಲ್ಲಿ ಕೂಡ ಚೆಕ್ಪೋಸ್ಟ್ ಹಾಕಿ ತಡೆಯಬೇಕು. ಮುಚ್ಚಿದ ಕಂಟೇನರ್ಗಳನ್ನು ಸರಿಯಾಗಿ ತಪಾಸಣೆ ಮಾಡಬೇಕು’ಎಂದರು.

‘ಗೋ ಕಳವು ಆದ ಕಡೆ ತಕ್ಷಣ ಶ್ವಾನದಳ ಕರೆಸಿ, ಅದರ ವಧೆ ಆಗುವ ಮೊದಲೇ ಮಾಲು ಸಹಿತ ಕಳ್ಳನನ್ನು ಬಂಧಿಸಬೇಕು. ಗೋರಕ್ಷಣೆಗಾಗಿ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನ ಬಳಸಬೇಕು. ವಾಹನದೊಳಗೆ ಜಾನುವಾರುಗಳಿವೆಯೋ ಎಂದು ಪರೀಕ್ಷಿಸಲು ಟೋಲ್ ಪ್ಲಾಜಾದಂತಹ ಆಯಕಟ್ಟಿನ ಸ್ಥಳಗಳಲ್ಲಿ ಎಲೆಕ್ಟ್ರಾನಿಕ್ ಸ್ಕ್ಯಾನರ್ ಬಳಸಬೇಕು’ ಎಂದು ಆಗ್ರಹಿಸಿದರು.

‘ಪೊಲೀಸರು ಪ್ರಕರಣ ದಾಖಲಿಸಿದ ಬಳಿಕ ಆರೋಪಿಗಳಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು. ಗೋ ಅಕ್ರಮ ಸಾಗಣೆ ವೇಳೆ ವಶಪಡಿಸಿಕೊಂಡ ಗೋವುಗಳನ್ನು ಸಾಕಲು ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಗೋಶಾಲೆ ತೆರೆಯಬೇಕು. ಜಿಲ್ಲೆಯ ಜಾನುವಾರುಗಳ ಸಂಖ್ಯೆಯ ಶೇ 0.75ರಷ್ಟು ಜಾನುವಾರು ಸಾಕುವಷ್ಟು ವ್ಯವಸ್ಥೆ ಅದರಲ್ಲಿ ಮಾಡಬೇಕು ಎಂದು ಸರ್ಕಾರಿ ಆದೇಶ ಇದೆ. ಅದನ್ನು ಪರಿಣಾಮಕಾರಿಯಾಗಿ ಕಾರ್ಯಗತ ಗೊಳಿಸಬೇಕು’ ಎಂದರು.

ಬಳಿಕ ಎಸಿಪಿ ಶರಣಬಸಪ್ಪ ಸುಬೇದಾರ ಅವರಿಗೆ ಮನವಿ ಸಲ್ಲಿಸಲಾಯಿತು.ಬಜರಂಗದಳದ ಮಹಾನಗರ ಸಂಯೋಜಕ ರಾಘವೇಂದ್ರ ಗುತ್ತೇದಾರ, ದಿವ್ಯಾ ಹಾಗರಗಿ, ಎಂ.ಎಸ್.ಪಾಟೀಲ ನರಿಬೋಳ, ಗೋರಕ್ಷ ಪ್ರಮುಖರಾದ ಕೌಸ್ತುಭ ಕುಲಕರ್ಣಿ, ಶಿವಕುಮಾರ ಸುಕುಲೂರ, ವಿಭಾಗೀಯ ಸಹ ಸಂಯೋಜಕ ಶಶಿಕುಮಾರ್ ಶೆಟ್ಟಿ ಸೇರಿ ಹಲವರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-34-927708820

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.