ಕಲಬುರಗಿ: ‘ಕಲೆಗಳು, ದೈನಂದಿನ ಒತ್ತಡಗಳಿಂದ ಮುಕ್ತಿ ಹೊಂದಲು ಸಹಾಯಕವಾಗುತ್ತವೆ’ ಎಂದು ಬಿಜೆಪಿ ಮಹಿಳಾ ಮೋರ್ಚಾ ಕಲಬುರಗಿ ದಕ್ಷಿಣ ವಲಯ ಅಧ್ಯಕ್ಷೆ ಜ್ಯೋತಿ ಪಾಟೀಲ ಹೇಳಿದರು.

ಜನಪ್ರಿಯ ಸಾಂಸ್ಕೃತಿಕ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ರಂಗಾಯಣದ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ‘ಜನಪ್ರಿಯ ಸಾಂಸ್ಕೃತಿಕ ಸಂಭ್ರಮೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಒತ್ತಡ ನಿವಾರಣೆಗೆ ಇಂಥ ಕಾರ್ಯಕ್ರಮಗಳು ಅಗತ್ಯ’ ಎಂದರು.

ನಟ ವಿಜಯಕುಮಾರ ಗೋತಗಿ ಮಾತನಾಡಿ, ‘ಕಲೆಗಳು ಮನರಂಜನೆಯ ಜೊತೆಗೆ ಮನೋವಿಕಾಸಕ್ಕೆ ಬೇಕಾದ ಅಂಶಗಳನ್ನು ಒದಗಿಸುವ ಕೆಲಸ ಮಾಡುತ್ತವೆ. ತಿಂಗಳಿಗೆ ಒಮ್ಮೆಯಾದರೂ ಇಂಥ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇಡೀ ಕುಟುಂಬದೊಂದಿಗೆ ಪಾಲ್ಗೊಳ್ಳಬೇಕು’ ಎಂದು ಅವರು ಹೇಳಿದರು.

ಶಾಂತಲಿಂಗಯ್ಯ ಎಸ್.ಮಠಪತಿ ಅಧ್ಯಕ್ಷತೆ ವಹಿಸಿದ್ದರು. ವೈದ್ಯೆ ವೀಣಾ ಪಾಟೀಲ ಮಾತನಾಡಿದರು.

ಬಸ್ಸಯ್ಯ ಬಿ.ಗುತ್ತೇದಾರ ಸುಗಮ ಸಂಗೀತ, ದತ್ತರಾಜ ಕಲ್ಲಶೆಟ್ಟಿ ತತ್ವಪದ ಗಾಯನ ಹಾಗೂ ಸೈದಪ್ಪ ಸಪ್ಪನಗೋಳ ಅವರು ಜನಪದ ಗಾಯನ, ಅಶ್ವಿನಿ ಆರ್.ಮೂಲಗೆ ದಾಸವಾಣಿ ಹಾಡಿದರು.

ಜನಪ್ರಿಯ ಸಂಗೀತ ಹಾಗೂ ನೃತ್ಯ ಶಾಲೆಯ ಮಕ್ಕಳು ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ, ವಚನ ಗಾಯನ, ಭಕ್ತಿಗೀತೆ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಅವಧೂತ ಪಾಟೀಲ ತಬಲಾ ಸಾಥ್ ನೀಡಿದರು. ರಂಗಕರ್ಮಿ ಕಲ್ಯಾಣಿ ಭಜಂತ್ರಿ ಉಪಸ್ಥಿತರಿದರು. ಗಂಗೋತ್ರಿ ಮಠಪತಿ ನಿರೂಪಿಸಿದರು. ವೇದಕಂಠ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-34-1329073428

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.