ಕಮಲಾಪುರ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಅಷ್ಟಗಾ ಗ್ರಾಮದಲ್ಲಿ ₹4.50 ಕೋಟಿ ವೆಚ್ಚದ ಅಷ್ಟಗಾದಿಂದ ಸೈಯ್ಯದ ಚಿಂಚೋಳಿ, ನರೋಣಾ ರಸ್ತೆ ಕಾಮಗಾರಿಗೆ ಶಾಸಕ ಬಸವರಾಜ ಮತ್ತಿಮಡು ಮಂಗಳವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘2024-25ನೇ ಸಾಲಿನ ಅತಿವೃಷ್ಟಿ ಹಾಗೂ ನೆರೆಹಾವಳಿಯ ಅನುದಾನದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಅಷ್ಟಗಾದಿಂದ ಸೈಯದ ಚಿಂಚೋಳಿ ಹಾಗೂ ನರೋಣಾ ಮುಖ್ಯ ರಸ್ತೆಯ ಅಭಿವೃದ್ಧಿಗೆ ಸುಮಾರು ₹4.50 ಕೋಟಿ, ₹1 ಕೋಟಿ ಅನುದಾನದಲ್ಲಿ ಸೇತುವೆಗಳ ನಿರ್ಮಾಣ ಕಾಮಗಾರಿ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ₹50 ಲಕ್ಷ ಒದಗಿಸಲಾಗಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಸಂಬಂಧಪಟ್ಟವರಿಗೆ ಸೂಚಿಸಿದರು.

ಈ ವೇಳೆ ಮುಖಂಡರಾದ ಶರಣಬಸಪ್ಪ ಪಾಟೀಲ ಅಷ್ಟಗಿ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಗಂಗಪ್ಪಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಪಾಟೀಲ ಜಂಬಗಾ, ಶಿವಪುತ್ರಪ್ಪ ಹತಗುಂದಿ, ಶ್ರೀಮಂತರಾವ ರೇವಣಿ ಕಲ್ಲಹಂಗಾರಗಾ, ಗಿರಿರಾಜ ಬಿರಾದಾರ, ಶರಣಬಸಪ್ಪ ಪಾಟೀಲ ಜಂಬಗಾ, ಶರಣಬಸಪ್ಪ ಬಿರಾದಾರ, ದೀಪಕ ಸಲಗರ, ಗೋಪಾಲರಾವ ಶಾಸ್ತ್ರಿ ಕಲ್ಲಹಂಗರಗಾ, ದೇವೇಂದ್ರಪ್ಪ ಪಾಟೀಲ, ಅರುಣಕುಮಾರ ಬೆನಕನಹಳ್ಳಿ, ಅಶೋಕ ಬಿರಾದಾರ ಸೇರಿದಂತೆ ಇತರರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-31-927416309

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.