ಕಲಬುರಗಿ: ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದ ಆಟೊವೊಂದಕ್ಕೆ ಕಲಬುರಗಿ ಸಂಚಾರ ಠಾಣೆ–2 ಪೊಲೀಸರು ಬರೋಬ್ಬರಿ ₹23,500 ದಂಡ ವಿಧಿಸಿದ್ದಾರೆ. ಅಲ್ಲದೇ ಆಟೊವನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಸೇಡಂ ರಿಂಗ್ ರಸ್ತೆಯಿಂದ ಹಾಗರಗಾ ಕಡೆ ಹೊರಟಿದ್ದ ಆಟೊವನ್ನು ತಡೆದ ಪೊಲೀಸರು ಅದರ ನೋಂದಣಿ ಸಂಖ್ಯೆ ಬಳಸಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪರೀಕ್ಷಿಸಿದ್ದಾರೆ. ಬರೋಬ್ಬರಿ 44 ಉಲ್ಲಂಘನೆಗಳು ಕಂಡು ಬಂದಿವೆ. ಅದರ ರಸೀದಿ ಮುದ್ರಿಸಿದರೆ 10 ಅಡಿಗೂ ಉದ್ದದ ರಸೀದಿ ಬಂದಿದೆ.

‘ಎಂದಿನಂತೆ ವಾಹನಗಳನ್ನು ತಡೆದು ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಪರಿಶೀಲಿಸುತ್ತಿದ್ದೆವು. ಆಗ ಬಂದ ಆಟೊವನ್ನು ಸಹಜವಾಗಿಯೇ ಪರಿಶೀಲಿಸಿದಾಗ ಸಿಗ್ನಲ್ ಜಂಪ್, ನೋ ಪಾರ್ಕಿಂಗ್ನಲ್ಲಿ ವಲಯದಲ್ಲಿ ನಿಲುಗಡೆ ಮಾಡಿರುವುದು, ಆಟೊ ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆ ಸೇರಿದಂತೆ ಹಲವು ಬಗೆಯ ನಿಯಮ ಉಲ್ಲಂಘನೆಯ 44 ಪ್ರಕರಣಗಳಿದ್ದವು. ಶಹಾಬಾದ್ ಪಟ್ಟಣದ ಬಸವೇಶ್ವರ ನಗರ ಪ್ರದೇಶದ ನಿವಾಸಿಯೊಬ್ಬರಿಗೆ ಆಟೊ ಇದಾಗಿದ್ದು, ದಂಡ ವಿಧಿಸಿ, ಆಟೊ ಜಪ್ತಿ ಮಾಡಲಾಗಿದೆ’ ಎಂದು ಸಂಚಾರ ವಿಭಾಗದ ಪಿಎಸ್ಐ ಅನಿಲ್ ಜೈನ್ ಅವರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-34-44933048

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.