ಕಲಬುರಗಿ: ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಯುದ್ಧದ ಬಿಸಿ ಕಲಬುರಗಿಗೂ ತಟ್ಟಿದೆ. ಕಳೆದೊಂದು ತಿಂಗಳಲ್ಲಿ ಆಟೊ ರಿಕ್ಷಾಗಳಿಗೆ ಬಳಸುವ ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ದರ ಬಹುತೇಕ ದ್ವಿಗುಣಗೊಂಡಿದೆ.

‘ಎಲ್ಪಿಜಿ ಬಂಕ್ಗಳು ಮನಸೋ ಇಚ್ಛೆ ದರ ಪಡೆಯುತ್ತಿವೆ. ಈ ಸಂಬಂಧ ನಗರದ ಗ್ಯಾಸ್ ಬಂಕ್ಗಳ ಸಿಬ್ಬಂದಿಯೊಂದಿಗೆ ಆಟೊ ಚಾಲಕರು ಜಗಳ ನಡೆಸಿದರು ಪ್ರಯೋಜನವಾಗುತ್ತಿಲ್ಲ’ ಎಂದು ಆಟೊ ಚಾಲಕರು ಆರೋಪಿಸಿದ್ದಾರೆ.

‘ಯುದ್ಧಕ್ಕಿಂತ ಮೊದಲು ಪ್ರತಿ ಲೀಟರ್ಗೆ ಎಲ್ಪಿಜಿಗೆ ₹55.50 ದರವಿತ್ತು. ಯುದ್ಧ ಶುರುವಾದ ಬಳಿಕ ₹60, ₹70, ನಂತರ ₹85 ಆಗಿತ್ತು. ವಾರದ ಹಿಂದೆ ಒಂದು ಹಂತದಲ್ಲಿ ₹99.95 ಆಗಿತ್ತು. ಅಂದು ಬೆಳಿಗ್ಗೆ ಹೊತ್ತಿಗೆ ಪ್ರತಿ ಲೀಟರ್ ಎಲ್ಪಿಜಿಗೆ ₹85 ದರವಿತ್ತು. ಒಂದು ತಾಸಿನ ಅವಧಿಯಲ್ಲೇ ₹99.95ಕ್ಕೆ ಏರಿತು. ಇದನ್ನು ಖಂಡಿಸಿ ಆಟೊ ಚಾಲಕರೆಲ್ಲ ಸೇರಿಕೊಂಡು ಪೆಟ್ರೋಲ್ ಬಂಕ್ ಬಳಿ ಪ್ರತಿಭಟನೆ ನಡೆಸಿದೆವು. ಬಳಿಕ ಮತ್ತೆ ದರ ₹85ಕ್ಕೆ ಇಳಿದಿತ್ತು’ ಎಂದು ಗಾಜಿಪುರದ ಆಟೊ ಚಾಲಕ ಪರಶುರಾಮ ಕೋಸಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಗೌಂಡಿ ಕೈಯಲ್ಲಿ ಕೆಲಸಕ್ಕೆ ಹೋದರೆ, ಇಲ್ಲವೇ ಹೋಟೆಲ್ನಲ್ಲಿ ಕೆಲಸ ಮಾಡಿದರೆ ನಿತ್ಯ ₹800 ಕೂಲಿ ಸಿಗುತ್ತದೆ. ಆದರೆ, ಆಟೊ ಗ್ಯಾಸ್ ದರ ಮನಸೋ ಇಚ್ಛೆ ಏರಿಳಿತದಿಂದ ನಮಗೆ ನಿಶ್ಚಿತ ಆದಾಯವೇ ಸಿಗುತ್ತಿಲ್ಲ. ಸ್ವಂತ ಆಟೊ ಇದ್ದರೂ, ನಿತ್ಯ ₹300 ಉಳಿದರೆ ಅದೇ ಹೆಚ್ಚು. ಬಾಡಿಗೆ ಆಟೊಗಳನ್ನು ಓಡಿಸುವವರ ಸ್ಥಿತಿ ಇನ್ನೂ ಕೆಟ್ಟಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ: ಈ ನಡುವೆ, ‘ಕಲಬುರಗಿಯಲ್ಲಿ 14 ಆಟೊ ಗ್ಯಾಸ್ ಪಂಪ್ಗಳಿದ್ದು, ಬರೀ 4 ಮಾತ್ರವೇ ಕಾರ್ಯನಿರ್ವಹಿಸುತ್ತಿವೆ. ಎಲ್ಲವೂ ಕಾರ್ಯನಿರ್ವಹಿಸುವಂತೆ ಮಾಡಬೇಕು. ಮನಸೋ ಇಚ್ಛೆ ದರಗಳನ್ನು ವಿಧಿಸುತ್ತಿರುವ ಆಟೊ ಗ್ಯಾಸ್ ಕಂಪನಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಆಟೊ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ಮಾಲಿಪಾಟೀಲ ನೇತೃತ್ವದಲ್ಲಿ ಆಟೊ ಚಾಲಕರು ಜಿಲ್ಲಾಧಿಕಾರಿ ಹಾಗೂ ಆಹಾರ ಇಲಾಖೆ ಉಪನಿರ್ದೇಶಕರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-30-1041106782

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.