ಅಫಜಲಪುರ: ಗಡಿ ಭಾಗದಲ್ಲಿ ಲಕ್ಷಾಂತರ ಭಕ್ತರನ್ನು ಹೊಂದಿರುವ ತಾಲ್ಲೂಕಿನ ಸುಕ್ಷೇತ್ರ ಬಳ್ಳೂರಗಿ ಗ್ರಾಮದಲ್ಲಿ ಏ.19 ರಿಂದ 21ರವರೆಗೆ ನಡೆಯುವ ನಂದಿ ಬಸವೇಶ್ವರ ಜಾತ್ರೆಯ ಕಾರ್ಯಕ್ರಮಗಳು ಆರಂಭವಾಗಿವೆ. ಆದರೆ, ಗ್ರಾಮ ಪಂಚಾಯಿತಿಯವರು ಯಾವುದೇ ಸೌಲಭ್ಯಗಳನ್ನು ಜನರಿಗೆ ನೀಡುತ್ತಿಲ್ಲ. ಅದರಲ್ಲೂ ನೀರಿಗಾಗಿ ನಿತ್ಯ ಪರದಾಡುವಂತೆ ಆಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ದೇವಸ್ಥಾನ ಸಮಿತಿ ಅಧ್ಯಕ್ಷ ಚನ್ನಬಸಪ್ಪ ಚಾಕೊಂಡೆ ಮಾತನಾಡಿ, ‘ಗ್ರಾಮದಲ್ಲಿ ಚರಂಡಿ ಸ್ವಚ್ಛಗೊಳಿಸಿಲ್ಲ ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೊಳವೆಬಾವಿಗಳ ಅಂತರ್ಜಲ ಮಟ್ಟಯಾಗಿ ಕಡಿಮೆಯಾಗಿ ನೀರು ಬರುತ್ತಿಲ್ಲ’ ಎಂದು ಹೇಳಿದರು.

ಪಂಚಾಯಿತಿಗೆ ತಾಕೀತು: 3 ದಿನಗಳ ಕಾಲ ನಂದಿ ಬಸವೇಶ್ವರ ಜಾತ್ರೆ ಜರುಗಲಿದೆ. ಅದಕ್ಕಾಗಿ ಗ್ರಾಮ ಪಂಚಾಯಿತಿಯವರು ಗ್ರಾಮದಲ್ಲಿ ವಿದ್ಯುತ್ ಕಂಬ, ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಜೆಜೆಎಂ ಕಾಮಗಾರಿ ತಕ್ಷಣ ಪೂರ್ಣಗೊಳಿಸಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಬೇಕು. ಗ್ರಾಮದ ಕೆರೆಯಲ್ಲಿ ಕಳೆದ ವರ್ಷ ಕೊಳವೆಬಾವಿ ಕೊರೆಯಲಾಗಿದೆ. ಅದಕ್ಕೆ ವಿದ್ಯುತ್ ಪಂಪ್ಸೆಟ್ ಅಳವಡಿಸಬೇಕು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ತಗ್ಗುಗಳು ಬಿದ್ದಿದ್ದು ಅವುಗಳನ್ನು ಸರಿಪಡಿಸಬೇಕು. ಗ್ರಾಮದಲ್ಲಿ ಜಾತ್ರೆ ಇರುವುದರಿಂದ ಏಪ್ರಿಲ್ ತಿಂಗಳು ಮುಗಿಯುವವರೆಗೆ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕು. ಗ್ರಾಮಕ್ಕೆ ಮೂಲಸೌಲಭ್ಯ ಒದಗಿಸಬೇಕು ಎಂದು ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಶ್ರೀಶೈಲ್ ಪಾಟೀಲ್, ಉಪಾಧ್ಯಕ್ಷ ಅರ್ಜುನ್ ಸೋಮಜಾಳ ಪಂಚಾಯಿತಿಗೆ ತಾಕೀತು ಮಾಡಿದರು.

ಸಭೆಯಲ್ಲಿ ಪಲಾಲ ಸಿಂಗ್ ರಾಠೋಡ್, ಹನುಮಯ್ಯ ಗುತ್ತೇದಾರ, ಸುಭಾಷ್ ಗುತ್ತೇದಾರ, ಶರಣಪ್ಪ ದೊಡ್ಡಮನಿ, ಶಿವಾನಂದ ಸ್ಥಾವರಮಠ, ಗೌರಿಶಂಕರ್ ಸೊನ್ನ, ಶರಣಪ್ಪ ದೊಡ್ಡಮನಿ, ಶ್ರೀಮಂತ ಪಾಟೀಲ, ಮಲ್ಲು ಮಠಪತಿ, ಕಲ್ಯಾಣಿ ಚಲಗೇರಿ, ಕಲ್ಯಾಣಿ ಮುಗುಳಿ, ಶರಣಬಸಪ್ಪ ಪಾಟೀಲ್, ರಾಜು ಹಡಪದ, ಶರಣು ಕಲಶೆಟ್ಟಿ, ಅಂಬರೀಶ್ ಪೂದ್ದಾರ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-31-429427836

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.