ಕಲಬುರಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸ್ಟೇಟ್ ಬ್ಯಾಂಕ್ಗಳ ನೌಕರರ ಒಕ್ಕೂಟದಿಂದ ನಗರದ ಜಗತ್ ವೃತ್ತದಲ್ಲಿ ಶುಕ್ರವಾರ ಮೌನ ಪ್ರತಿಭಟನೆ ನಡೆಸಲಾಯಿತು.

ಅಖಿಲ ಭಾರತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪಾಫ್ ಫೆಡರೇಷನ್ ನೌಕರರು ವಿವಿಧ ಬೇಡಿಕೆಗಳ ಕುರಿತ ಭಿತ್ತಿ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆ ದಾಖಲಿಸಿದರು.

‘ಮೆಸೆಂಜರ್ಗಳು ಮತ್ತು ಶಸ್ತ್ರಸಜ್ಜಿತ ರಕ್ಷಕರನ್ನು ತಕ್ಷಣವೇ ನೇಮಿಸಬೇಕು. 2019ರಿಂದ ಸೇರ್ಪಡೆಯಾದ ನೌಕರರಿಗೂ ಇಂಟರ್ ಸರ್ಕಲ್ ಟ್ರಾನ್ಸ್ಫರ್ (ಐಸಿಟಿ) ಸೌಲಭ್ಯ ನೀಡಬೇಕು. ಶಾಶ್ವತ ಹುದ್ದೆಗಳಲ್ಲಿ ಗುತ್ತಿಗೆ ಆಧಾರಿತ ನೇಮಕಾತಿ ನಿಲ್ಲಿಸಬೇಕು. ಬ್ಯಾಂಕಿಂಗ್ ಸೇವೆ ನೀಡಲು ಸಮರ್ಪಕ ಸಿಬ್ಬಂದಿ ನೇಮಿಸಬೇಕು’ ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಭಿತ್ತಿ ಫಲಕಗಳನ್ನು ಹಿಡಿದು ಧರಣಿ ನಡೆಸಿದರು.

ದೀರ್ಘಕಾಲದಿಂದ ಬಾಕಿ ಉಳಿದಿರುವ ಬೇಡಿಕೆಗಳ ಇತ್ಯರ್ಥಕ್ಕಾಗಿ ಇದೇ ಮೇ 25 ಮತ್ತು 26ರಂದು ಮುಷ್ಕರ ಹಮ್ಮಿಕೊಂಡಿದ್ದು, ಅದರ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ಮೌನ ಪ್ರತಿಭಟನೆ ನಡೆಸಲಾಗಿದೆ ಎಂದು ಮುಖಂಡರು ತಿಳಿಸಿದರು.

ಒಕ್ಕೂಟದ ಕಲಬುರಗಿ ಘಟಕದ ಉಪ ಪ್ರಧಾನ ಕಾರ್ಯದರ್ಶಿ ನವೀನ ಕಾಗಲ್ಕರ್, ಗೋಪಾಲಕೃಷ್ಣ ಜೋಶಿ, ಸೋಮಶೇಖರ ಕೆ., ರಾಘವೇಂದ್ರ ಕೆ., ರೀಟಾ ರಾಠೋಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-34-1475101900

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.