ಕಲಬುರಗಿ: ‘ಏಪ್ರಿಲ್ 19 ಹಾಗೂ 20ರಂದು ನಡೆಯುವ ಬಸವ ಜಯಂತಿ ಕಾರ್ಯಕ್ರಮಕ್ಕೆ ಕಾಯಕ ಶರಣರ ಸಮಾಜಗಳ ಸಂಘಟನೆ ಸಂಪೂರ್ಣವಾಗಿ ಬೆಂಬಲ ನೀಡುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯರೂ ಆದ ಸಂಘಟನೆಯ ಗೌರವಾಧ್ಯಕ್ಷ ತಿಪ್ಪಣಪ್ಪ ಕಮಕನೂರ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಚೆಗೆ ಕನ್ನಡ ಭವನದಲ್ಲಿ ಸಭೆ ನಡೆಸಿ, ಈ ತೀರ್ಮಾನಕ್ಕೆ ಬಂದಿದ್ದೇವೆ. ಕಾಯಕ ಶರಣರ ಸಮಾಜಗಳು ಅವರ ಶರಣರ ಮೂರ್ತಿಯ ಜೊತೆಗೆ ಬಸವಣ್ಣನವರ ಮೂರ್ತಿಯನ್ನಿಟ್ಟು ಮೆರವಣಿಗೆ ಮೂಲಕ ತರಲಿವೆ. ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ’ ಎಂದರು.

‘ಜಯಂತ್ಯುತ್ಸವ ಸಮಿತಿಯಲ್ಲಿ ಕಾಯಕ ಸಮಾಜಗಳವರನ್ನೂ ಸೇರಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಸಾಹಿತಿ ಹಾಗೂ ಸಂಘಟನೆಯ ಅಧ್ಯಕ್ಷ ಭೀಮಣ್ಣ ಬೋನಾಳ ಮಾತನಾಡಿ, ‘12ನೇ ಶತಮಾನದಲ್ಲಿ ಕಲ್ಯಾಣದ ಅನುಭವ ಮಂಟಪದಲ್ಲಿ ಬಸವಣ್ಣನವರು 770 ಶರಣರನ್ನು ಸೇರಿಸಿ ವಚನ ಚಳವಳಿ ಮಾಡಿದರು. ಬಸವಣ್ಣನವರು ಶರಣರನ್ನು ಜಾತಿ ನೋಡಿ ಕರೆಯಲಿಲ್ಲ. ಕಾಯಕ ನೋಡಿ ಕರೆದರು. ಕಾಯಕ ಸಮಾಜಗಳವರು ಬಸವಣ್ಣನ ನಿಜವಾದ ವಾರಸುದಾರರು. ನಾವೆಲ್ಲ ಬಸವಣ್ಣನವರ ವಿಶ್ವ ಧರ್ಮಕ್ಕೆ ಸೇರಿದವರು. ಕಾಯಕ ಶರಣರ ಸಮಾಜಗಳ ಸಂಘಟನೆಗಳು ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ’ ಎಂದರು.

ನೇಕಾರ ಸಮಾಜದ ರೇವಣಸಿದ್ದಪ್ಪ ಗಡ್ಡದ, ಡೋಹರ ಕಕ್ಕಯ್ಯ ಸಮಾಜದ ಸಾಯಬಣ್ಣ ಹೋಳಕರ, ಕುರುಬ ಸಮಾಜದ ಹಿರಗಪ್ಪ ಪೂಜಾರ, ಮಡಿವಾಳ ಸಮಾಜದ ಧರ್ಮಣ್ಣ ಮಡಿವಾಳ, ಹೆಳವ ಸಮಾಜದ ಮಲ್ಲಿಕಾರ್ಜುನ ಬಿ.ಎಚ್. ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-34-601862157

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.