ಕಲಬುರಗಿ: ‘ಬಸವಾದಿ ಶರಣರ ತತ್ವಾದರ್ಶಗಳಿಂದ ಸಮಬಾಳ್ವೆಯ ಜೀವನ ಸಾಧ್ಯ. ಎಲ್ಲ ಜಾತಿ-ಧರ್ಮದವರನ್ನು ಒಂದುಗೂಡಿಸಿದ ಬಸವಣ್ಣನವರ ವಚನಗಳು ಕತ್ತಲೆಯ ಬದುಕಿಗೆ ಬೆಳಕಾಗಿವೆ’ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಸುಭಾಷ ಗುತ್ತೇದಾರ ಹೇಳಿದರು.

ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಭಾನುವಾರ ಬಸವ ಜಯಂತಿ ನಿಮಿತ್ತ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಬಸವ ಪರ್ವ–2026 ಇವ ನಮ್ಮವನಾಗಿಸುವ ಹಬ್ಬ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆಯ ಅತ್ತಿವೇರಿಯ ಬಸವ ಧಾಮ ಬಸವೇಶ್ವರಿ ಮಾತಾ ಮಾತನಾಡಿ, ‘ಸಾಮರಸ್ಯ ಜೀವನ ಹಾಗೂ ಮಾನವ ಕಲ್ಯಾಣಕ್ಕೆ ವಚನಗಳನ್ನು ಅರ್ಥೈಸಿಕೊಳ್ಳಬೇಕಿದೆ. ಸದ್ಯದ ಕಲುಷಿತ ಸಮಾಜದ ಶುದ್ಧೀಕರಣಕ್ಕೆ ಶರಣರ ನಡೆನುಡಿಗಳು ಸಾಕು’ ಎಂದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ವಡ್ಡನಕೇರಿ, ಅಫಜಲಪುರ ತಾಲ್ಲೂಕು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸಣ್ಣ ಗುಣಾರಿ, ಸಾಹಿತ್ಯ ಪ್ರೇರಕಿ ರಾಜೇಶ್ವರಿ ಸಾಹು, ಕಲ್ಯಾಣಪ್ಪ ಪಾಟೀಲ ಮಳಖೇಡ ಮಾತನಾಡಿದರು. ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಭುವನೇಶ್ವರಿ ಹಳ್ಳಿಖೇಡ, ರಾಜೇಂದ್ರ ಮಾಡಬೂಳ, ಬಾಬುರಾವ ಪಾಟೀಲ, ಅನನ್ಯ ಗೋಲ್ಡ್ಸ್ಮಿತ್ ಹಾಜರಿದ್ದರು. ಕಾರ್ಯಕ್ರಮದಲ್ಲಿ ವಿಧವಾ ತಾಯಂದಿರಿಗೆ ಉಡಿ ತುಂಬಲಾಯಿತು.

ಶಶಿಕಲಾ–ಶಿವಪ್ಪ ತಳಕಿನ, ಶಕುಂತಲಾ–ಯಶ್ವಂತರಾವ ಪಾಟೀಲ, ಕಲ್ಪನಾ–ಅಣ್ಣಾರಾವ ಪೆದ್ದಿಕೋಡ್ಲಿ, ಮಹಾದೇವಿ–ಕೆ.ಎಸ್. ಬಂಧುಸಿದ್ಧೇಶ್ವರ, ನಿರ್ಮಲಾ–ಸಿದ್ದಣ್ಣ ಬೆಡಸೂರ, ನಂದಿನಿ–ವಿಶ್ವರಾಧ್ಯ ಬಿರಾಳ, ಪ್ರೀತಿ–ಬಸವರಾಜ ಬಿರಾದಾರ, ರೇಣುಕಾ–ರಾಮು ರೆಡ್ಡಿ ಅವರಿಗೆ ‘ಬಸವ ಪುರಸ್ಕಾರ’ ನೀಡಿ ಸತ್ಕರಿಸಲಾಯಿತು. ಸಿದ್ಧರಾಮ ಮಹಾಂತಗೋಳ, ಉದಯಕುಮರ ಜೇವರ್ಗಿ, ಕಿಶೋರ ಗಾಯಕವಾಡ, ಮಲ್ಲಿಕಾರ್ಜುನ ಮೂಲಗೆ, ಅಶೋಕಕುಮಾರ ಪಟ್ಟಣಶೆಟ್ಟಿ, ದತ್ತಾತ್ರೇಯ ಬಿರಾದಾರ, ಶಿವಕುಮಾರ ದೊಡ್ಮನಿ, ಮಹಾಂತೇಶ ಪಾಟೀಲ, ದಯಾನಂದ ಪಾಟೀಲ, ರುಕ್ಕಪ್ಪ ಕಾಂಬಳೆ, ಶರಣಗೌಡ ಎಂ. ಪಾಟೀಲ, ಜ್ಯೋತಿ ಪಾಟೀಲ, ಮಹೇಶ ಬಾಳಿ, ಡಾ.ರೆಡಸನ್ ಎಸ್.ಆರ್., ರೇಣುಕಾ ಡಿ. ಹಯ್ಯಾಳಕರ, ಶರಣಪ್ಪ ಬೆಳಂ, ವೀರಣ್ಣ ತೊರವಿ, ಶಿವರಾಜ ಹಿರೇಗೌಡ ನಂದೂರ ಅವರನ್ನು ‘ಕಾಯಕ ಪ್ರಿಯ ಗೌರವ ಪುರಸ್ಕಾರ’ ನೀಡಿ ಗೌರವಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-34-292470071

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.