ಕಲಬುರಗಿ: ನಗರದಲ್ಲಿ ವಿಶ್ವಗುರು ಬಸವಣ್ಣನವರ 893ನೇ ಜಯಂತ್ಯುತ್ಸವವನ್ನು ಸೋಮವಾರ ಅದ್ದೂರಿಯಾಗಿ ಆಚರಿಸಲಾಯಿತು. ನಗರದೆಲ್ಲೆಡೆ ಬಸವಣ್ಣ ಚಿತ್ರವುಳ್ಳ ಕೇಸರಿ ಧ್ವಜಗಳು ರಾರಾಜಿಸಿದವು.

ದಿನವಿಡೀ ‘ಬಸವ ಜಪ’ ನಡೆಯಿತು. ಬಸವಾದಿ ಶರಣರ ವಚನಗಳು ಅನುರಣಿಸಿದವು. ‘ಸಮಾನತೆಯ ಹರಿಕಾರ’ನಿಗೆ ಜಯಘೋಷಗಳು ಮೊಳಗಿದವು. ‘ಅಂಗದಮೇಲೆ ಲಿಂಗವ ಕೊಟ್ಟ ಅಪ್ಪ ಬಸವಣ್ಣ...’ ಹಾಡು ಅನುರಣಿಸಿತು.

ನಿತ್ಯ ಮೂಡಣದಲ್ಲಿ ಬೆಳಕು ಹರಿಯುತ್ತಲೇ ಚುರುಕಿನ ಬಿಸಿಲು ಇರುತ್ತಿತ್ತು. ಆದರೆ, ಸೋಮವಾರ ಮೋಡ ಕವಿದ ತಂಪಾದ ವಾತಾವರಣವಿತ್ತು. ಸರ್ವಾಲಂಕೃತಗೊಂಡಿದ್ದ ಜಗತ್ ವೃತ್ತದ ಬಸವಣ್ಣನವರ ಪ್ರತಿಮೆ ಸ್ಥಳವು ದಿನವಿಡೀ ಶ್ರದ್ಧಾಭಕ್ತಿ ಚಟುವಟಿಕೆಗಳ ಕೇಂದ್ರವಾಗಿತ್ತು. ನಗರದ ವಿವಿಧೆಡೆಯಿಂದ ಸಾವಿರಾರು ಬಸವ ಭಕ್ತರು ‘ಬಸವ ಬೆಳಕು’ ಅರಸಿ ಜಗತ್ ವೃತ್ತದತ್ತ ಹರಿದು ಬಂದರು.

ಬೆಳಿಗ್ಗೆ 9 ಗಂಟೆಗೆ ಜಿಲ್ಲಾಡಳಿತದಿಂದ ಸಚಿವರಾದಿಯಾಗಿ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಅಧಿಕಾರಿಗಳು, ವಿವಿಧ ಸಮುದಾಯಗಳ ಮುಖಂಡರು ಬಸವ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಕುಟುಂಬದಿಂದ ‘ಜಗಜ್ಯೋತಿ ಬಸವಣ್ಣನವರ ಮೂರ್ತಿ’ಗೆ ಹೆಲಿಕಾಪ್ಟರ್ ನಿಂದ ಪುಷ್ಪವೃಷ್ಟಿಗೈಯಲಾಯಿತು. ಗುಲಾಬಿ ಪಕಳೆಗಳನ್ನು ಸುರಿದು ಗೌರವ ಅರ್ಪಿಸಲಾಯಿತು.

ಬಳಿಕ ವೇದಿಕೆ ಕಾರ್ಯಕ್ರಮಗಳಲ್ಲಿ ಉಪನ್ಯಾಸಗಳು ನಡೆದವು. ಜನಪ್ರತಿನಿಧಿಗಳು, ಚಿಂತಕರು ‘ಬಸವ ತತ್ವ’ಗಳ ಮಹತ್ವದ ಮೇಲೆ ಬೆಳಕು ಚೆಲ್ಲಿದರು. ಬೆಳಿಗ್ಗೆ 11 ಗಂಟೆಯಿಂದಲೇ ನಗರದ ವಿವಿಧೆಡೆ ದಾಸೋಹ ಚಟುವಟಿಕೆಗಳು ಆರಂಭವಾದವು. ಸಾವಿರಾರು ಸಾರ್ವಜನಿಕರಿಗೆ ತರಹೇವಾರಿ ಭಕ್ಷ್ಯಗಳನ್ನು ಉಣಬಡಿಸಲಾಯಿತು. ಸಂಜೆ ಒಂದೆಡೆ ವಚನಗಳ ಸಂಗೀತ ಗಾಯನ ನಡೆದರೆ, ಮತ್ತೊಂದೆಡೆ ಸಾಂಸ್ಕೃತಿಕ ನಾಯಕ ಬಸವಣ್ಣನವರ ಪ್ರತಿಮೆಗಳ ಎರಡು ಮೆರವಣಿಗೆ ನಡೆದವು.

ಮೆರವಣಿಗೆ ಸಡಗರ: ಸೋಮವಾರ ಸಂಜೆ ಒಂದೆಡೆ ಜಿಲ್ಲಾ ಜಯಂತ್ಯುತ್ಸವ ಸಮಿತಿಯಿಂದ ಸಾಂಸ್ಕೃತಿಕ ನಾಯಕ ಬಸವಣ್ಣ ಹಾಗೂ ಕಾಯಕ ಶರಣರ ಭಾವಚಿತ್ರಗಳ ಭವ್ಯ ಮೆರವಣಿಗೆ ವಿವಿಧ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಮತ್ತೊಂದೆಡೆ ಬಸವ ಮಿತ್ರ ಮಂಡಳಿಯಿಂದ ಅದ್ದೂರಿ ಡಿ.ಜೆ ಸದ್ದಿನೊಂದಿಗೆ ಬಸವ ಮೂರ್ತಿ ಮೆರವಣಿಗೆ ಮಾಡಲಾಯಿತು. ಎರಡೂ ಮೆರವಣಿಗೆಗಳು ಸಾವಿರಾರು ಜನರೊಂದಿಗೆ ಜಗತ್ ವೃತ್ತದಲ್ಲಿ ತಲುಪಿದಾಗ ‘ಬಸವಭಕ್ತರ ಸಾಗರ’ ಸೃಷ್ಟಿಯಾಯಿತು.

ಬಸವಣ್ಣ ಹಾಗೂ ಕಾಯಕ ಶರಣರಾದ ಹಡಪದ ಅಪ್ಪಣ್ಣ, ಹೆಳವ ಸಮಾಜದ ಕಾಯಕ ಶರಣರು, ಮೇದಾರ ಕೇತಯ್ಯ, ಶರಣ ಕಂಬಾರ ಕಲ್ಲಣ್ಣ, ಸವಿತಾ ಮಹರ್ಷಿ, ಮಡಿವಾಳ ಮಾಚಿದೇವ, ಶರಣ ಶಂಕರ ದಾಸಿಮಯ್ಯ, ನುಲಿಯ ಚಂದಯ್ಯ, ಶರಣ ಡೋಹರಕಕ್ಕಯ್ಯ, ದೇವರ ದಾಸಿಮಯ್ಯ, ಮಾದಾರ ಚನ್ನಯ್ಯ ಅವರ ಭಾವಚಿತ್ರಗಳ ಮೆರವಣಿಗೆ ನಗರೇಶ್ವರ ಶಾಲೆಯಿಂದ ಆರಂಭವಾಗಿ ಹುಮನಾಬಾದ್ ಬೇಸ್, ಸೂಪರ್ ಮಾರ್ಕೆಟ್ ಮೂಲಕ ಜಗತ್ ವೃತ್ತ ತಲುಪಿತು. ಈ ಮೆರವಣಿಗೆ ಮಾರ್ಗದುದ್ದಕ್ಕೂ ಸಾಲು ಸಾಲಾಗಿ ನಿಂತಿದ್ದ ಜನರು ಬಸವಣ್ಣನವರ ಸ್ತಬ್ಧಚಿತ್ರಕ್ಕೆ ಪುಷ್ಪವೃಷ್ಟಿ ಮಾಡಿ ಗೌರವ ಅರ್ಪಿಸಿದರು.

ಕಲಾ ತಂಡಗಳ ಸೊಬಗು: ಪಂಢರಪುರದ ಚಳಂ ಕುಣಿತ, ರಾಮನಗರದ ಕಪಾಳಮ್ಮ ಕಲಾ ತಂಡದ ಪೂಜೆ ಕುಣಿತ, ಬಳ್ಳಾರಿಯ ಕಹಳೆ ವಾದನ, ಕಲಬುರಗಿ ಜಿಲ್ಲೆಯ ಕಲಾವಿದರ ಡೊಳ್ಳು ಕುಣಿತ, ಹಲಗೆ ವಾದನ, ಲಂಬಾಣಿ ನೃತ್ಯ ಹಾಗೂ ಶಹನಾಯಿ ಮೇಳಗಳು ಮೆರವಣಿಗೆ ಅಂದ ಹೆಚ್ಚಿಸಿದವು. ಸೊಲ್ಲಾಪುರದ ಬಾರ್ಷಿಯ ‘ಕಲಾಧೀಶ ವಾಘ ಪಥಕ’ದ ಬೃಹತ್ ಡೋಲುಗಳ ವಾದನ ಕಣ್ಮಣ ಸೆಳೆಯಿತು. ಮಹಿಳೆಯರು ಕಳಸ ಹೊತ್ತು ಸಾಗಿದ್ದು ವಿಶೇಷವಾಗಿತ್ತು.

‘ಅಂಗದಮೇಲೆ ಲಿಂಗವ ಕೊಟ್ಟ ಅಪ್ಪ ಬಸವಣ್ಣ...’ ಸೇರಿದಂತೆ ಬಸವಣ್ಣವರ ಕುರಿತ ಹಾಡುಗಳು ಹಾಗೂ ಹಿಂದಿ ರಿಮಿಕ್ಸ್ ಗೀತೆಗಳು ಡಿಜೆಗಳಲ್ಲಿ ಮೊಳಗಿದವು. ಯುವಜನರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಅಭಿಮಾನದ ಹೊಳೆಯಲ್ಲಿ, ಭಕ್ತಿಯ ಖುಷಿಯಲ್ಲಿ ಮಿಂದೆದ್ದರು.

ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಮೆರವಣಿಗೆಗೆ ಚಾಲನೆ ನೀಡಿದರು. ಶಾಸಕರಾದ ಬಿ.ಆರ್.ಪಾಟೀಲ, ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕಲಬುರಗಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ. ಪಾಟೀಲ, ಶರಣಕುಮಾರ ಮೋದಿ, ಮುಖಂಡರಾದ ಅಮರನಾಥ ಪಾಟೀಲ, ಭೀಮಾಶಂಕರ ಬಿಲಗುಂದಿ, ಸೋಮಶೇಖರ ಗೋನಾಯಕ, ಅರುಣಕುಮಾರ ಪಾಟೀಲ ಕೊಡಲಹಂಗರಗಾ, ಶಿವಕಾಂತ ಮಹಾಜನ್, ಜಗನ್ನಾಥ ಶೇಗಜಿ, ಡಾ.ಸುಧಾ ಹಾಲಕಾಯಿ, ಗೌರಿ ಚಿಚಕೋಟಿ, ಲಿಂಗರಾಜ್ ಕಣ್ಣಿ ಸೇರಿದಂತೆ ಸಾವಿರಾರು ಬಸವ ಅನುಯಾಯಿಗಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-34-1445627877

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.