ಕಲಬುರಗಿ: ಬೆಂಗಳೂರು–ಕಲಬುರಗಿ ಮಧ್ಯೆ ಸಂಚರಿಸುವ ಸಾಪ್ತಾಹಿಕ ವಿಶೇಷ ರೈಲನ್ನು ಕಾಯಂ ರೈಲನ್ನಾಗಿ ಓಡಿಸಲು ರೈಲ್ವೆ ಮಂಡಳಿ ತೀರ್ಮಾನಿಸಿದೆ. ಮೇ 16ರಿಂದ ಈ ಬದಲಾವಣೆ ಜಾರಿಗೆ ಬರಲಿದೆ.

ಪ್ರತಿ ಶನಿವಾರ ರಾತ್ರಿ 10ಕ್ಕೆ ಹೊರಡುವ ಬೆಂಗಳೂರು ಕಂಟೋನ್ಮೆಂಟ್–ಕಲಬುರಗಿ (16563) ರೈಲು ಭಾನುವಾರ ಬೆಳಿಗ್ಗೆ 10.20ಕ್ಕೆ ಕಲಬುರಗಿ ತಲುಪಲಿದೆ. ಭಾನುವಾರ ಬೆಳಿಗ್ಗೆ 11.20ಕ್ಕೆ ಕಲಬುರಗಿಯಿಂದ–ಬೆಂಗಳೂರು ಕಂಟೋನ್ಮೆಂಟ್ಗೆ (16564) ಹೊರಡುವ ರೈಲು ಅದೇ ದಿನ ರಾತ್ರಿ 11ಕ್ಕೆ ಬೆಂಗಳೂರು ತಲುಪಲಿದೆ.

ವಾರದಲ್ಲಿ ಎರಡು ದಿನ ಬೆಂಗಳೂರಿನಿಂದ ಕಲಬುರಗಿ ಮೂಲಕ ಬೀದರ್ಗೆ ಸಂಚರಿಸುವ ವಿಶೇಷ ರೈಲನ್ನು ಕಾಯಂಗೊಳಿಸಲಾಗಿದೆ. ಈ ಬದಲಾವಣೆ ಮೇ 15ರಿಂದ ಜಾರಿಗೆ ಬರಲಿದೆ. ಪ್ರತಿ ಶುಕ್ರವಾರ ಮತ್ತು ಭಾನುವಾರ ರಾತ್ರಿ 9.15ಕ್ಕೆ ಬೆಂಗಳೂರಿನಿಂದ ವಿಶ್ವೇಶ್ವರಯ್ಯ ಟರ್ಮಿನಲ್ನಿಂದ ಹೊರಡುವ ರೈಲು (16559) ಮರುದಿನ ಬೆಳಿಗ್ಗೆ 9.05ಕ್ಕೆ ಕಲಬುರಗಿ ತಲುಪಲಿದೆ.

ಮಧ್ಯಾಹ್ನ 12.15ಕ್ಕೆ ಬೀದರ್ ತಲುಪಲಿದೆ.

ಪ್ರತಿ ಶನಿವಾರ ಮತ್ತು ಸೋಮವಾರ ಬೀದರ್ನಿಂದ (16560) ಮಧ್ಯಾಹ್ನ 2ಕ್ಕೆ ಹೊರಡುವ ರೈಲು ಸಂಜೆ 5ಕ್ಕೆ ಕಲಬುರಗಿ ತಲುಪಲಿದ್ದು, ಮರುದಿನ ಬೆಳಿಗ್ಗೆ 4ಕ್ಕೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ.

ಇದುವರೆಗೆ ವಿಶೇಷ ರೈಲಾಗಿದ್ದರಿಂದ ಗ್ರಾಹಕರಿಂದ ತತ್ಕಾಲ್ ಟಿಕೆಟ್ನಂತೆ ಹೆಚ್ಚುವರಿ ದರ ವಿಧಿಸಲಾಗುತ್ತಿತ್ತು. ಕಾಯಂ ರೈಲಾಗಿ ಪರಿವರ್ತನೆಯಾಗಿದ್ದರಿಂದ ಸಾಮಾನ್ಯ ದರ ಆಕರಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.