ಕಲಬುರಗಿ: ಕಳೆದ ಎಂಟು ತಿಂಗಳಿನಿಂದ ಸ್ಥಗಿತಗೊಂಡಿರುವ ಕಲಬುರಗಿ ಮತ್ತು ಬೆಂಗಳೂರು ನಡುವಣ ನಿತ್ಯ ವಿಮಾನ ಸೇವೆಗೆ ಜೂನ್ 10ರಿಂದ ಮತ್ತೆ ಚಾಲನೆ ಸಿಗಲಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸ್ಟಾರ್ ಏರ್ ಸಂಸ್ಥೆಯು, ನಿತ್ಯ ಸಂಜೆ 6 ಗಂಟೆಗೆ ಬೆಂಗಳೂರಿನಿಂದ ಹೊರಟು ಸಂಜೆ 7.10ಕ್ಕೆ ಕಲಬುರಗಿ ತಲುಪಲಿದೆ. ಸಂಜೆ 7.40ಕ್ಕೆ ಕಲಬುರಗಿಯಿಂದ ಹೊರಟು ರಾತ್ರಿ 8.50ಕ್ಕೆ ಬೆಂಗಳೂರು ತಲುಪಲಿದೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ, ಜೂನ್ 10ರಿಂದ ಬುಕಿಂಗ್ಗೂ ಅವಕಾಶ ನೀಡಿದೆ. ಈ ನಿರ್ಧಾರವು ಈ ಭಾಗದ ಜನರಲ್ಲಿ ಹರ್ಷ ಮೂಡಿಸಿದೆ.

2025ರ ಅಕ್ಟೋಬರ್ 8ರಂದು ಕಲಬುರಗಿ–ಬೆಂಗಳೂರು ನಡುವೆ ಕೊನೆಯದಾಗಿ ವಿಮಾನ ಹಾರಾಡಿತ್ತು. ಅಂದಿನಿಂದ ಇಂದಿನ ತನಕ ಹೆಲಿಕಾಪ್ಟರ್ಗಳು ಹಾಗೂ ವಿಶೇಷ ವಿಮಾನಗಳಿಗೆ ಮಾತ್ರವೇ ಕಲಬುರಗಿ ವಿಮಾನ ನಿಲ್ದಾಣದ ಸೇವೆ ಸೀಮಿತವಾಗಿದೆ. ಕೆಕೆಸಿಸಿಐ ಸೇರಿದಂತೆ ಈ ಭಾಗದ ಅನೇಕ ಸಂಘ–ಸಂಸ್ಥೆಗಳು, ಜನಪ್ರತಿನಿಧಿಗಳು ವಿಮಾನಯಾನ ಪುನರಾರಂಭಕ್ಕೆ ಒತ್ತಾಯಿಸಿದ್ದರು. ವಿಮಾನಯಾನ ಸೇವೆ ಸ್ಥಗಿತವು ಬಿಜೆಪಿ–ಕಾಂಗ್ರೆಸ್ ನಡುವೆ ವಾಕ್ಸಮರಕ್ಕೂ ಕಾರಣವಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-51-1868409726

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.