ಕಲಬುರಗಿ: ಭೀಮಾ ನದಿಯಲ್ಲಿ ಕಾಲುಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.

ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿ ಗ್ರಾಮದ ವಿಜಯರಾಜು ಸುಬ್ಬರಾವ್ ಬಳ್ಳಾರಿ (44) ಮೃತರು.

‘ಭೀಮಾ ನದಿ ದಡದಲ್ಲಿ ಮೇಯುತ್ತಿದ್ದ ನಮ್ಮ ಎಮ್ಮೆಯನ್ನು ಹೊಡೆದುಕೊಂಡು ಬರಲು ಪತಿ ಮತ್ತು ಮಗ ಹೋಗಿದ್ದರು. ಸಂಜೆ ಮಗ ಫೋನ್ ಕರೆ ಮಾಡಿ, ನದಿಯಿಂದ ಹೊರಗಡೆ ಎಮ್ಮೆ ಹೊಡೆದುಕೊಂಡು ಬರುವಾಗ ತಂದೆ ಆಕಸ್ಮಿಕವಾಗಿ ಕಾಲು ಜಾರಿಬಿದ್ದು ಮುಳುಗಿರುವುದಾಗಿ ತಿಳಿಸಿದನು. ಸ್ಥಳಕ್ಕೆ ತೆರಳಿ ಮೀನುಗಾರರ ಸಹಾಯದಿಂದ ಶವ ಹೊರ ತೆಗೆಯಲಾಗಿದೆ’ ಎಂದು ಮೃತನ ಪತ್ನಿ ಶಾಂತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯೋಗ ಕೊಡಿಸುವುದಾಗಿ ₹9 ಲಕ್ಷ ವಂಚನೆ

ಉದ್ಯೋಗ ಕೊಡಿಸುವುದಾಗಿ ₹9 ಲಕ್ಷ ವಂಚಿಸಿರುವ ಕುರಿತು ಆರ್.ಜಿ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.

ಈ ಕುರಿತು ರಾಘವೇಂದ್ರ ಕಾಲೊನಿಯ ಶ್ರೀಹರ್ಷ್ ಕುಲಕರ್ಣಿ ದೂರು ನೀಡಿದ್ದು, ‘ಪ್ರೇಮ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡ ಸಂಗಮೇಶ್ ಕಮಶೆಟ್ಟಿ ಎಂಬ ವ್ಯಕ್ತಿ, ಉದ್ಯೋಗ ಕೊಡಿಸುವುದಾಗಿ ಆಫರ್ ಲೆಟರ್ಗಳನ್ನು ನೀಡಿದ. ಇದನ್ನು ನಂಬಿದ ನಾನು ಮತ್ತು ಸ್ನೇಹಿತರು ಆನ್ಲೈನ್ ಮೂಲಕ ₹5 ಲಕ್ಷ ಮತ್ತು ₹4 ಲಕ್ಷ ನಗದು ಪಾವತಿಸಿದ್ದೇವೆ. ಕೆಲಸದ ಬಗ್ಗೆ ವಿಚಾರಿಸಿದಾಗ ಅಶ್ಲೀಲ ಪದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.