ಕಲಬುರಗಿ: ತಾಲ್ಲೂಕಿನ ಭೀಮಳ್ಳಿಯಲ್ಲಿ ವಾಹನಗಳನ್ನು ಸೈಡ್ ತೆಗೆದುಕೊಳ್ಳುವ ವಿಚಾರವಾಗಿ ಗುಂಪೊಂದು ಕಾರಿನಲ್ಲಿದ್ದ ಕುಟುಂಬವೊಂದರ ಮೇಲೆ ಕೈ ಹಾಗೂ ಕಟ್ಟಿಗೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಚಿತ್ತಾಪುರ ತಾಲ್ಲೂಕಿನ ನಾಲವಾರ ಗ್ರಾಮದ ತೋಟೇಂದ್ರ (35), ಸುನೀಲ್ (32), ಅನಸಮ್ಮ (54), ಪೂಜಾ (30) ಮತ್ತು ಅನಿಲ್ (28) ಎಂಬುವರು ಗಾಯಗೊಂಡಿದ್ದಾರೆ.

ನಾಲವಾರ ಗ್ರಾಮದ ತೋಟೇಂದ್ರ ಅವರ ಕುಟುಂಬವು ಆಳಂದ ತಾಲ್ಲೂಕಿನ ಗೋಳಾ(ಬಿ) ಗ್ರಾಮದಲ್ಲಿ ಲಕ್ಕಮ್ಮ ದೇವರ ಕಾರ್ಯ ಹಮ್ಮಿಕೊಂಡಿತ್ತು. ಅದನ್ನು ಮುಗಿಸಿ ಕಾರಿನಲ್ಲಿ ತಂಗಿಯನ್ನು ಬಿಡಲು ಭೀಮಳ್ಳಿಗೆ ಹೊರಟ್ಟಿತ್ತು. ಈ ವೇಳೆ ಭೀಮಳ್ಳಿ ಗ್ರಾಮದಲ್ಲಿ ರಸ್ತೆಯ ಎರಡೂ ಬದಿಗೆ ಆಟೊಗಳು ನಿಂತಿದ್ದವು. ಎಡಬದಿಯ ಆಟೊ ತುಸು ಸೈಡ್ ತೆಗೆದುಕೊಂಡರೂ ಕಾರು ದಾಟಲು ಜಾಗ ಇರಲಿಲ್ಲ. ಈ ವಿಚಾರವಾಗಿ ಗಲಾಟೆ ನಡೆದಿದ್ದು, ಸ್ಥಳೀಯರು ದೊಣ್ಣೆ, ಕೈಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ದಾಳಿಯ ಹೊಡೆತಕ್ಕೆ ಇಬ್ಬರಿಗೆ ತಲೆಗೆ, ಒಬ್ಬರಿಗೆ ಮೂಗಿಗೆ ಹಾಗೂ ಇನ್ನೊಬ್ಬರಿಗೆ ಕೈಗೆ ಗಂಭೀರ ಗಾಯವಾಗಿದೆ. ಒಬ್ಬರಿಗೆ ಗುಪ್ತಗಾಯವಾಗಿದೆ. ಗಾಯಾಳುಗಳು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಕಾರಣವೇ ಇಲ್ಲದೇ ಮುಸ್ಲಿಂ ಸಮುದಾಯದ ಯುವಕರು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ್ದಾರೆ’ ಎಂದು ಗಾಯಾಳುಗಳು ಆರೋಪಿಸಿದ್ದಾರೆ. ಈ ಕುರಿತು ಸಬ್ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-34-990109342

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.